ಬೆಳಗಾವಿ- ಆಶಿಶ್ ಡ್ರಗ್ಸ್ ರೂವಾರಿ ಬೆಳಗಾವಿಯ ಆಕಾಶ ದೇಸಾಯಿ ಸೇರಿದಂತೆ ನಾಲ್ವರು ಆರೋಪಿಗಳಿಗೆ ಬೆಲಗಾವಿಯ ಎರಡನೇ ಹೆಚ್ಚುವರಿ ನ್ಯಾಯಾಲಯ ಹತ್ತು ವರ್ಷ ಜೈಲು ಶಿಕ್ಷೆ ಮತ್ತು ತಲಾ ನಾಲ್ಕು ಲಕ್ಷ ರೂ. ದಂಡ ವಿಧಿಸಿ ಸೋಮವಾರ ತೀರ್ಪು ನೀಡಿದೆ.
2007 ರಲ್ಲಿ ನಿಂಬಾಳಕರ್ ಬೆಲಗಾವಿಯ ಎಸ್ ಪಿ ಆಗಿದ್ದ ಸಂದರ್ಭದಲ್ಲಿ ಟಿಳಕವಾಡಿ ಪೊಲೀಸರು ಆಶಿಶ್ ಡ್ರಗ್ಸ್ ಜತೆಗೆ ಆಕಾಶ ದೇಶಯಿ ಸೇರಿದಂತೆ ನಾಲ್ಕು ಜನ ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾಯಾಲಯ ಇಂದು ತೀರ್ಪು ನೀಡಿದೆ.
ಬೆಳಗಾವಿಯ ಆಕಾಶ ದೇಸಾಯಿ, ಶಹಾಪುರದ ಆಸಿಫ್ ಬುರನವಾಲೆ, ಚನ್ನಮ್ಮ ನಗರದ ಮಹಮ್ಮದ್ ಅಲಿ ಸೈಯ್ಯದ್ ಮತ್ತು ಸಜ್ಜನ್ ಹೆರವಳಕರ ಎಂಬ ನಾಲ್ಕು ಜನ ಆರೋಪಿಗಳಿಗೆ ಹತ್ತು ವರ್ಷ ಜೈಲು ಶಿಕ್ಷೆ ಮತ್ತು ತಲಾ ನಾಲ್ಕು ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಸರಕಾರಿ ವಕೀಲ ಜೆ.ಕೆ. ಮಾವೂರಕರ ಸರಕಾರದ ಪರ ವಾದ ಮಂಡಿಸಿದ್ದರು.
![](https://belagavisuddi.com/wp-content/uploads/2018/09/gavel-500x330.jpg)