ಬೆಳಗಾವಿ- ವಿಧಾನಸಭೆಯಲ್ಲಿ ಇಂದು ಬೆಳಗಾವಿ ಜಿಲ್ಲಾ ವಿಭಜನೆಯ ಕೂಗು ಕೇಳಿ ಬಂತು ಪ್ರಶ್ನೋತ್ತರ ಕಲಾಪದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕಿ ಶಶಿಕಲಾ ಜೊಲ್ಲೆ ಚಿಕ್ಕೋಡಿ ಜಿಲ್ಲೆಯಾಗುವ ಎಲ್ಲ ಅರ್ಹತೆಗಳನ್ನು ಹೊಂದಿದ್ದು ಸರ್ಕಾರ ಕೂಡಲೇ ಚಿಕ್ಕೋಡಿಯನ್ನು ಜಿಲ್ಲೆಯನ್ನಾಗಿ ಘೋಷಿಸುವಂತೆ ಒತ್ತಾಯಿಸಿದರು.
ಬೆಂಗಳೂರಿನ ನಂತರ ಬೆಳಗಾವಿ ಭೌಗೋಳಿಕವಾಗಿ ಅತೀ ದೊಡ್ಡ ಜಿಲ್ಲೆಯಾಗಿದೆ.ಹದಿನೈದು ತಾಲ್ಲೂಕುಗಳನ್ನು ಹದಿನೆಂಟು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಚಿಕ್ಕೋಡಿಯನ್ನು ಜಿಲ್ಲೆ ಮಾಡುವದು ಅಗತ್ಯವಾಗಿದೆ.ಜಿಲ್ಲೆಯಲ್ಲಿ ತುರ್ತು ಪರಿಸ್ಥಿತಿ ಎದುರಾದ ಸಂಧರ್ಭದಲ್ಲಿ ಭೌಗೋಳಿಕವಾಗಿ ದೊಡ್ಡದಾಗಿರುವ ಜಿಲ್ಲೆಯಲ್ಲಿ ಜಿಲ್ಲಾಡಳಿತ ಜಿಲ್ಲೆಯಾದ್ಯಂತ ಏಕಕಾಲಕ್ಕೆ ತುರ್ತು ಕ್ರಮಗಳನ್ನು ಕೈಗೊಳ್ಳಲು ಕಷ್ಟವಾಗುತ್ತಿದೆ. ಮುಖ್ಯಮಂತ್ರಿಗಳು ತಕ್ಷಣ ಜಿಲ್ಲೆಯನ್ನು ವಿಭಜಿಸಿ ಚಿಕ್ಕೋಡಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸುವ ನಿರ್ಧಾರ ಕೈಗೊಳ್ಳಬೇಕೆಂದು ಶಾಸಕಿ ಶಶಿಕಲಾ ಜೊಲ್ಲೆ ಸದನದಲ್ಲಿ ಒತ್ತಾಯಿಸಿದರು.
ಎರಡು,ಮೂರು ತಾಲ್ಲೂಕುಗಳನ್ನು ಹೊಂದಿರುವ ಜಿಲ್ಲೆಗಳು ರಾಜ್ಯದಲ್ಲಿ ಇವೆ,ಆದ್ರೆ ಬೆಳಗಾವಿ ಜಿಲ್ಲೆ ಹದಿನೈದು ತಾಲ್ಲೂಕುಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆಯ ವಿಭಜನೆ ಅಗತ್ಯವಾಗಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಜಿಲ್ಲೆಯಾಗುವ ಎಲ್ಲ ಅರ್ಹತೆಗಳನ್ನು ಮತ್ತು ಎಲ್ಲ ಇಲಾಖೆಗಳ ಜಿಲ್ಲಾ ಮಟ್ಟದ ಕಚೇರಿಗಳನ್ನು ಹೊಂದಿದೆ ಎಂದು ಮಾಜಿ ಸಚಿವೆ,ನಿಪ್ಪಾಣಿ ಕ್ಷೇತ್ರದ ಶಾಸಕಿ ಶಶಿಕಲಾ ಜೊಲ್ಲೆ ಸರ್ಕಾರದ ಗಮನ ಸೆಳೆದರು.
ಶಶಿಕಲಾ ಜೊಲ್ಲೆಯವರ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ, ಬೆಳಗಾವಿ ಜಿಲ್ಲೆಯ ವಿಭಜನೆ ಮಾಡಬೇಕೆನ್ನುವ ವಿಚಾರ ಇವತ್ತು ನಿನ್ನೆಯದಲ್ಲ,ಮೂವತ್ತು ನಲವತ್ತು ವರ್ಷಗಳಿಂದಲೂ ಈ ಬೇಡಿಕೆ ಇದೆ.ಶಶಿಕಲಾ ಜೊಲ್ಲೆ ಅವರ ಮಾತುಗಳಲ್ಲಿ ಸತ್ಯಾಂಶ ಇದೆ.ಅವರು ಮಂಡಿಸಿದ ಬೇಡಿಕೆಯೂ ಸೂಕ್ತವಾಗಿದೆ.ಈ ಬಗ್ಗೆ ನಾನು ವ್ಯಯಕ್ತಿಕವಾಗಿ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ, ಈ ವಿಚಾರ ಸಚಿವ ಸಂಪುಟದ ಸಭೆಯಲ್ಲಿ ಚರ್ಚೆಯಾಗಿ ತೀರ್ಮಾಣ ಆಗಬೇಕು ಈ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ.ಈಗ ಸದ್ಯಕ್ಕೆ ಹೊಸ ಜಿಲ್ಲೆ ಘೋಷಣೆ ಸಾಧ್ಯವಿಲ್ಲ ಯಾಕಂದ್ರೆ ಹೊಸ ಕಂದಾಯ ಗಡಿಗಳನ್ನು ಗುರುತು ಮಾಡದಂತೆ ಕೇಂದ್ರ ಸರ್ಕಾರದ ಆದೇಶವಿದೆ.ಈಗ ಹೊಸ ರೆವನ್ಯು ಬಾಂಡರಿಗಳನ್ನು ಕ್ರಿಯೇಟ್ ಮಾಡಲು ಸಾಧ್ಯವಿಲ್ಲ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಉತ್ತರ ನೀಡಿದ್ರು.