ಬೆಳಗಾವಿ- ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಎಸ್ ಬಿ ಸಿಧ್ನಾಳ ಪುತ್ರ ಶಶಿಕಾಂತ ಸಿದ್ನಾಳ ಬಿಜೆಪಿ ಮುಖಂಡರಾಗಿದ್ದು ಬೆಳಗಾವಿ ಉತ್ತರ ಕ್ಷೇತ್ರದ ಬಿ.ಜೆ.ಪಿ ಅಭ್ಯರ್ಥಿ ನಾನೆ. ಬಿ.ಜೆ.ಪಿ ಟಿಕೆಟ್ ಸಿಗದಿದ್ದರೆ ಕನ್ನಡ ಮರಾಠಿ, ಹಿಂದು ಏಕೀಕರಣ ಸಮೀತಿ ಮಾಡಿಕೊಂಡು ಚುನಾವಣೆಗೆ ಸ್ಪರ್ಧೆ ಮಾಡುವುದು ಖಚಿತ ಎಂದು ತಿಳಿಸಿದ್ದಾರೆ
ಬಿ.ಜೆ.ಪಿ ಯಲ್ಲಿ ಬಂಡಾಯ ಬಾವುಟ ಹಾರಿಸಿದ ಶಶಿಕಾಂತ ಸಿದ್ನಾಳ ಈ ಬಾರಿ ಬಿಜೆಪಿ ಟಿಕೆಟ್ ಸಿಗದಿದ್ದರೆ ಕನ್ನಡ ಮರಾಠಿ ಏಕೀಕರಣ ಸಮೀತಿ ಎಂಬ ಹೊಸ ಬ್ಯಾನರ್ ಹುಟ್ಟು ಹಾಕಿ ಅದೇ ಬ್ಯಾನರ್ ಅಡಿಯಲ್ಲಿ ಚುನಾವಣೆಗೆ ಸ್ಪರ್ದೆ ಮಾಡುವದು ಖಚಿತ ಈ ವಿಷಯದಲ್ಲಿ ರಾಜಿ ಪ್ರಶ್ನಯೇ ಇಲ್ಲ ಎಂದು ಶಶಿಕಾಂತ ಸಿಧ್ನಾಳ ತಿಳಿಸಿದ್ದಾರೆ
ಮಾಜಿ ಸಂಸದ ಎಸ್.ಬಿ ಸಿದ್ನಾಳ ಅವರ ಮಗ ಶಶಿಕಾಂತ ಸಿದ್ನಾಳ.ಕಳೆದ ನಾಲ್ಕು ವರ್ಷಗಳಲ್ಲಿ ಕಾಂಗ್ರೇಸ್ ಆಡಳಿದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಬೆಳಗಾವಿಯಲ್ಲಿ ಕಾಟಾಚಾರಕ್ಕೆ ಅಧಿವೇಶನ ನಡೆಸಲಾಗುತ್ತಿದೆ,
ಇದರಿಂದ ಬೆಳಗಾವಿಯ ಸಾಮಾನ್ಯ ಜನರಿಗೆ ಯಾವುದೇ ಲಾಭವಿಲ್ಲ ನಗರದಲ್ಲಿ ಟ್ರಾಫಿಕ್, ಕಲ್ಯಾಣ ಮಂಟಪ, ವಸತಿ ಗೃಹಗಳು ಸಿಗುತ್ತಿಲ್ಲ, ಎಲ್ಲದಕ್ಕೂ ತೊಂದ್ರೆ ಆಗುತ್ತಿದೆ ಎಂದು ಶಶಿಕಾಂತ ಸಿಧ್ನಾಳ ಆರೋಪಿಸಿದ್ದಾರೆ
ಉದ್ಯಮಿದಾರರಿಗೆ ಕೈಗಾರಿಗೆ ಸಂಸ್ಥೆ ಮಾಡಲು ಭೂಮಿ ಸಿಗುತ್ತಿಲ್ಲ ಸಿಎಂ ಸಿದ್ದರಾಮಯ್ಯ ಜಾತಿಗಳಲ್ಲಿ ಜಗಳ ಹಚ್ಚುತ್ತಿದ್ದಾರೆ ಸುವರ್ಣ ಸೌಧವನ್ನು ಸಧ್ಬಳಕೆ ಮಾಡಿಕೊಳ್ಳುವಲ್ಲಿ ಕಾಂಗ್ರೆಸ್ ವಿಫಲವಾಗಿದೆ ಎಂದು ಶಶಿಕಾಂತ ಆರೋಪಿಸಿದರು
ಬೆಳಗಾವಿ ಉತ್ತರ ಮತಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧೆ ಮಾಡುತ್ತೇನೆ ಒಂದು ವೇಳೆ ಟಿಕೆಟ್ ನೀಡದಿದ್ದರೆ
ಕನ್ನಡ ಮತ್ತು ಮರಾಠಿ ಏಕೀಕರಣ ಸಮಿತಿ ಸ್ಥಾಪಿಸಿ ಚುನಾವಣೆ ಸ್ಪರ್ದೆ ಮಾಡುತ್ತೆನೆ ಎಂದು ಸ್ಪಷ್ಠಪಡಿಸಿದರು