ಬೆಳಗಾವಿ- ಬೆಳಗಾವಿ ಸ್ಮಾರ್ಟ ಸಿಟಿ ಯೋಜನೆಯ ಎಂಡಿ ಮೋಹಾಲಿನ್ ಅವರು ಶಿವಮೊಗ್ಗ ಪಾಲಿಕೆ ಆಯುಕ್ತರಾಗಿ ವರ್ಗಾವಣೆಯಾಗಿದ್ದು ಸ್ಮಾರ್ಟ ಸಿಟಿ ಎಂಡಿಯಾಗಿ ಪಾಲಿಕೆ ಆಯುಕ್ತ ಶಶಿಧರ ಕುರೇರ ಅವರು ಹೆಚ್ಚುವರಿ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ
ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳು ಬೆಳಗಾವಿ ಸ್ಮಾರ್ಟಸಿಟಿ ಯೋಜನೆಯ MD ಸ್ಥಾನದ ಚಾರ್ಜ ತೆಗೆದುಕೊಳ್ಳುವಂತೆ ಮೌಖಿಕ ಆದೇಶ ಮಾಡಿರುವ ಹಿನ್ನಲೆಯಲ್ಲಿ ಸಂಜೆ ಮೋಹಾಲೀನ್ ಅವರು ಶಶಿಧರ ಕುರೇರ ಅವರಿಗೆ ಅಧಿಕಾರದ ಹಸ್ತಾಂತರಿಸಿದರು
ಶಶಿಧರ ಕುರೇರ ಅವರು ಬೆಳಗಾವಿಯ ಬುಡಾ ಆಯುಕ್ತರಾಗಿ ಹಲವು ವರ್ಷಗಳ ಕಾಲ ಸೇವೆ ಮಾಡಿದ್ದಾರೆ ಈಗ ಪಾಲಿಕೆ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿರುವ ಶಶಿಧರ ಕುರೇರ ಅವರನ್ನೇ ಸ್ಮಾರ್ಟ ಸಿಟಿ MD ಯನ್ನಾಗಿ ನೇಮಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಲಿದೆ ಎಂದು ತಿಳಿದು ಬಂದಿದೆ
ಬೆಳಗಾವಿ ಮಹಾನಗರದಲ್ಲಿ ರಸ್ತೆ,ಚರಂಡಿ ರಸ್ತೆಗಳ ಅಗಲೀಕರಣ ಸೇರಿದಂತೆ ಹಲವಾರು ಕಾಮಗಾರಿಗಳನ್ನು ಯುದ್ದೋಪಾದಿಯಲ್ಲಿ ನಡೆಸಿರುವ ಶಶಿಧರ ಕುರೇರ ಅವರನ್ನೇ ಸ್ಮಾರ್ಟ ಸಿಟಿ MD ಯನ್ನಾಗಿ ನೇಮಿಸುವಂತೆ ಸ್ಥಳಿಯ ಜನಪ್ರತಿನಿಧಿಗಳು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಖೇಶ್ ಸಿಂಗ್ ಬಳಿ ಒತ್ತಾಯ ಮಾಡಿದ್ದಾರೆ
ಶಶಿಧರ ಕುರೇರ ಹೆಗಲಿಗೆ ಸ್ಮಾರ್ಟಸಿಟಿ ಯೋಜನೆಯ ಪೂರ್ಣಪ್ರಮಾಣದ ಜವಾಬ್ದಾರಿ ವಹಿಸಿದರೆ ಯೋಜನೆಯ ಕಾಮಗಾರಿಗಳು ತ್ವರಿತ ಗತಿಯಲ್ಲಿ ನಡೆಯಲು ಸಾದ್ಯ ಎನ್ನುವ ನಿರ್ಧಾರಕ್ಕೆ ಸ್ಥಳೀಯ ಜನಪ್ರತಿನಿಧಿಗಳು ಬಂದಿದ್ದಾರೆ ಎಂದು ಹೇಳಲಾಗಿದೆ