ಬೆಳಗಾವಿ- ಬೆಳಗಾವಿಯ ಶಿವಗಂಗಾ ರೂಲರ್ ಸ್ಕೇಟಿಂಗ್ ರಿಂಗ್ ನಲ್ಲಿ ರಾಷ್ಟ್ರಮಟ್ಟದ ಇನ್ ಲೈನ್ ಹಾಕಿ ಮತ್ತು ರೋಲರ್ ಹಾಕಿ ಪಂದ್ಯಾವಳಿಗಳು ನಡೆಯುತ್ತಿವೆ ಇಂದು ಮಹಾರಾಷ್ಟ್ರ ಮತ್ತು ಕರ್ನಾಟಕ ತಂಡಗಳ ನಡುವೆ ನಡೆದ ಲೀಗ್ ಪಂದ್ಯದಲ್ಲಿ ಕರ್ನಾಟಕ ತಂಡ ಮಹಾರಾಷ್ಟ್ರ ತಂಡವನ್ನು 4-0 ಗೋಲುಗಳಿಂದ ಪರಾಭವಗೊಳಿಸಿದೆ
ಇಂದು ಕರ್ನಾಟಕ ಮತ್ತು ಮಹಾರಾಷ್ಟ್ರ ತಂಡಗಳ ನಡುವೆ ನಡೆದ ಲೀಗ್ ಪಂದ್ಯದಲ್ಲಿ ಕರ್ನಾಟಕ ನಾಲ್ಕು ಗೋಲುಗಳನ್ನು ಹೊಡೆಯುವ ಮೂಲಕ ಮಹಾರಾಷ್ಟ್ರ ತಂಡವನ್ನು 4-0 ಗೋಲುಗಳಿಂದ ವಿಜಯ ಸಾಧಿಸಿತು
ಜ್ಯುನಿಯರ್ ಲೀಗ್ ಪಂದ್ಯಾವಳಿಯಲ್ಲಿ ಅಲೀಶಾ ಕ್ಲಬ್ ಮತ್ತು ಸ್ಕೇಟ್ ಮಾಸ್ಟರ್ ಪೂನಾ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಪೂನಾ ಸ್ಕೇಟ್ ಮಾಸ್ಟರ್ ತಂಡ ಅಲೀಶಾ ಕ್ಲಬ್ ತಂಡವನ್ನು 11-0 ಗೋಲುಗಳಿಂದ ಪರಾಭವ ಗೊಳಿಸಿತು
ಪಂಜಾಬ ಮತ್ತು ಪೂನಾ ನಡುವೆ ನಡೆದ ಇನ್ ಲೈನ್ ಹಾಕಿಯಲ್ಲಿ ಪಂಜಾಬ ತಂಡ ಪೂನಾ ತಂಡವನ್ನು 5-2 ಗೋಲುಗಳಿಂದ ಪರಾಭವಗೊಳಿಸಿತು
ಅಂಪೈರ್ ಗಳಾಗಿ ಎಡಿ ಶರ್ಮಾ,ಗುರುಪಿತ್ ಸಿಂಗ್ ಅಜಯ ಮೆಹರಾ,ಅಮರ್ ಸಿಂಗ್ ಮತ್ತು ನರೇಶ ಶರ್ಮಾ ಅವರು ಕಾರ್ಯ ನಿರ್ವಹಿಸಿದರು
ರೂಲರ್ ಹಾಕಿ ಯಲ್ಲಿ ನಿಖಿಲ್ ಚಂಡಕ ಅವರು ಎರಡು ಪಂದ್ಯಗಳಲ್ಲಿ ಆರು ಗೋಲುಗಳನ್ನು ಮಾಡಿದರೆ ಪಂಜಾಬಿನ ಗುರುಪಿತ್ ಸಿಂಗ್ ಇನ್ನ ಲೈನ್ ಹಾಕಿ ಪಂದ್ಯದಲ್ಲಿ ನಾಲ್ಕು ಗೋಲುಗಳನ್ನು ಮಾಡುವದರ ಮೂಲಕ ಸಾಧನೆ ಮಾಡಿದ್ದಾರೆ
ರೂಲರ್ ಹಾಕಿಯಲ್ಲಿ ಲೀಗ್ ಪಂದ್ಯಗಳು ನಡೆಯುತ್ತಿದ್ದು ಶನಿವಾರ ಅಂತಿಮ ಪಂದ್ಯ ನಡೆಯಲಿದೆ ಎಂದು ಶಿವಗಂಗಾ ಸ್ಕೇಟಿಂಗ್ ರೂವಾರಿ ಜ್ಯೋತಿ ಚಿಂಡಕ ತಿಳಿಸಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ