ಬೆಳಗಾವಿ-ರಾಜ್ಯ ಸರ್ಕಾರದ ಇಚ್ಛಾಶಕ್ತಿ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರ ವಿಶೇಷ ಪ್ರಯತ್ನದ ಫಲವಾಗಿ ಗಡಿನಾಡ ಗುಡಿಯಲ್ಲಿ ಭಾಷಾ ಬಾಂಧವ್ಯ ಬೆಳೆಸುವ ಮಹತ್ವದ ಕಾರ್ಯ ನಡೆದಿದೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ರಾಜಹಂಸಗಡ ಗ್ರಾಮದಲ್ಲಿರುವ ಗುಡ್ಡದ ಮೇಲಿನ ಕೋಟೆಯನ್ನು ಅಭಿವೃದ್ಧಿ ಪಡಿಸಿ ಈ ಕೋಟೆಯ ಮುಂಬಾಗದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಭವ್ಯವಾದ ಪ್ರತಿಮೆ ನಿರ್ಮಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ 3.5 ಕೋಟಿ ರೂಗಳನ್ನು ಮಂಜೂರು ಮಾಡಿದ್ದು 50 ಲಕ್ಷ ರೂ ವೆಚ್ಚದಲ್ಲಿ 54 ಅಡಿ ಎತ್ತರದ ಶಿವರಾಯನ ಮೂರ್ತಿ ನಿರ್ಮಿಸುವ ಕಾರ್ಯ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿಯ ಖ್ಯಾತ ಮೂರ್ತಿಕಾರ ಜೆ ಜೆ ಪಾಟೀಲ ಅವರು 54 ಅಡಿ ಎತ್ತರದ ಶಿವರಾಯನ ಮೂರ್ತಿಯನ್ನು ಸಿದ್ಧಪಡಿಸಲಾಗುತ್ತಿದೆ ಬೆಳಗಾವಿಯ ಅನಿಗೋಳದಲ್ಲಿ ಜೆ ಜೆ ಪಾಟೀಲ ಅವರ ಕುಟೀರದಲ್ಲಿ ಮೂರ್ತಿ ಸಿದ್ಧವಾಗುತ್ತಿದೆ.
ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಮರಾಠಾ ಸಮಾಜದ ಮುಖಂಡರ ಜೊತೆ ಮೂರ್ತಿಯ ಕಾಮಗಾರಿಯನ್ನು ಪರಶೀಲಿಸಿದರು. ಇನ್ನೆರಡು ತಿಂಗಳಲ್ಲಿ ಶಿವರಾಯ ರಾಜಹಂಸಗಡದ ಸಿಂಹಾಸನದಲ್ಲಿ ವೀರಾಜಮಾನವಾಗುವದು ಖಚಿತವಾದಂತಾಗಿದೆ.
ಈ ರಾಜಹಂಸಗಡದ ಕೋಟೆ ನೇರಾ ನೇರ ಸುವರ್ಣ. ವಿಧಾನಸೌಧದ ಎದರಿನ ಗುಡ್ಡದ ಮೇಲಿದೆ. ಸುವರ್ಣ ವಿಧಾನ ಸೌಧದ ಎದುರು ವೀರರಾಣಿ ಕಿತ್ತೂರು ಚನ್ನಮ್ಮಾಜಿಯ ಮೂರ್ತಿ ಸ್ಥಾಪನೆ ಆಗಬೇಕು ಎನ್ನುವದು ಗಡಿನಾಡ ಕನ್ನಡಿಗರ ಒತ್ತಾಯವಾಗಿದೆ.ಈ ಕಾರ್ಯವನ್ನು ಸರ್ಕಾರ ಆದಷ್ಟು ಬೇಗನೆ ನೆರವೇರಿಸಲಿ.ಗಡಿನಾಡ ಗುಡಿಯಲ್ಲಿ ಬಾಷಾ ಸಾಮರಸ್ಯ ಇನ್ನಷ್ಟು ಗಟ್ಟಿಗೊಳಿಸುವ ಕಾರ್ಯ ಆದಷ್ಟು ಬೇಗ ಸಾಕಾರಗೊಳ್ಳಲಿ.
ಬೆಳಗಾವಿಯ ಸುವರ್ಣಸೌಧ ಮತ್ತು ರಾಜಹಂಸಗಡ ಈ ಎರಡೂ ಸ್ಥಳಗಳು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಇರುವದು ವಿಶೇಷ.