Breaking News

ದೆಹಲಿಗೆ ಹೋಗಿಲ್ಲ,ಬೆಂಗಳೂರಿಗೆ ಹೋಗಿದ್ದೆ- ಶ್ರದ್ಧಾ ಅಂಗಡಿ

ಬೆಳಗಾವಿ-ಸುಮಾರು ಎರಡು ವಾರಗಳ ಕಾಲ ಬೆಂಗಳೂರಲ್ಲೇ ಇದ್ದುಕೊಂಡು ಬಿಜೆಪಿ ಟಿಕೆಟ್ ಗಾಗಿ ನಿರಂತರ ಪ್ರಯತ್ನ ನಡೆಸಿದ ಸುರೇಶ ಅಂಗಡಿ ಅವರ ಪುತ್ರಿ ಶ್ರದ್ದಾ ಅಂಗಡಿ ಇವತ್ತು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಿ,ಬೆಳಗಾವಿಗೆ ಮರಳಿದ್ದಾರೆ.

ಇಂದು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಶ್ರದ್ಧಾ ಅಂಗಡಿ, ಬೆಳಗಾವಿ ಲೋಕಸಭಾ ಉಪಚುನಾವಣೆ ಹಿನ್ನಲೆ.
ಹೈಕಮಾಂಡ್ ಟಿಕೆಟ್ ನೀಡಿದ್ರೇ ಸ್ಪರ್ಧೆ ಮಾಡುತ್ತೇವೆ. ಟಿಕೆಟ್ ವಿಚಾರದ ಕುರಿತು ವರಿಷ್ಠರ ಭೇಟಿಗೆ ಹೋಗಿದ್ದೆ ಎಂದು ಶ್ರದ್ಧಾ ಶೆಟ್ಟರ್ ಹೇಳಿದರು.

ಸ್ಪರ್ಧೆ ಮಾಡುವಂತೆ ಅಭಿಮಾನಿಗಳು ಹಾಗೂ ಕಾರ್ಯಕರ್ತರ ಒತ್ತಡ ಇದೆ, ಮೊನ್ನೆ ನಡೆದ ಕೋರ್ ಕಮಿಟಿ ಸಭೆಯಲ್ಲಿ ಫ್ಯಾಮಿಲಿಗೆ ಟಿಕೆಟ್ ಕೊಡುವ ಕುರಿತು ಚರ್ಚೆಯಾಗಿದೆ, ಹೈಕಮಾಂಡ್ ಎನೂ ತೀರ್ಮಾನ ತೆಗೆದುಕೊಳ್ಳುತ್ತೆ ಅದು ಪೈನಲ್ ಅದಕ್ಕೆ ನಾವು ಭದ್ಧರಾಗಿದ್ದೇವೆ. ಅಂಗಡಿ ಕುಟುಂಬಸ್ಥರಿಗೆ ಕೊಡಬೇಕು ಅಂತಾ ಸಾಕಷ್ಟು ಒತ್ತಡ ಇದೆ. ಈ ವಿಚಾರ ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಶ್ರದ್ಧಾ ತಿಳಿಸಿದರು.

ನಾನು ದೆಹಲಿಗೆ ಹೋಗಿರಲಿಲ್ಲ ಬೆಂಗಳೂರಿಗೆ ಹೋಗಿದ್ದೆ.
ಟಿಕೆಟ್ ವಿಚಾರದಲ್ಲಿ ಯಾವ ವರಿಷ್ಠರು ಕರೆ ಮಾಡಿ ಮಾತಾಡಿಲ್ಲ. ಪಕ್ಷ ಎನೂ ತೀರ್ಮಾನ ತೆಗೆದುಕೊಳ್ಳುತ್ತೆ ಅದಕ್ಕೆ ನಾವು ಬದ್ದರಿದ್ದೇವೆ.
ತಂದೆಯವರು ಜನರ ಜೊತೆಗೆ ಬಹಳ ಒಳ್ಳೆ ಸಂಪರ್ಕ ಇಟ್ಟುಕೊಂಡಿದ್ದರು. ಮುಂದೆಯೂ ಜನರೊಂದಿಗೆ ಈ ಸಂಪರ್ಕ ಇಟ್ಟುಕೊಂಡು ಹೋಗುತ್ತೇವೆ.
ನಮ್ಮ ಜೊತೆಗೆ ಹಿಂದೆ ಇದ್ದವರ ಜೊತೆಗೆ ನಾವು ಇರುತ್ತೆವೆ ಎಂದು ಶ್ರದ್ಧಾ ಶೆಟ್ಟರ್ ಹೇಳಿದರು.

Check Also

ಆಪರೇಷನ್ ಸಿಂಧೂರ್ ನಲ್ಲಿ ಬೆಳಗಾವಿಯ ಸೊಸೆ…

ಬೆಳಗಾವಿ- ಬೆಳಗಾವಿ ವೀರರಾಣಿ ಕಿತ್ತೂರು ಚನ್ನಮ್ಮಾಜಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಬೆಳವಡಿ ಮಲ್ಲಮ್ಮನ ಕ್ರಾಂತಿಯ ನೆಲ, ದೇಶದಲ್ಲಿ ಕ್ರಾಂತಿ ಆದಾಗ …

Leave a Reply

Your email address will not be published. Required fields are marked *