ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಮಂಧಿಸಿದಂತೆ ಮುರುಘಾಶ್ರೀಗಳನ್ನು ಚಿತ್ರದುರ್ಗದ ಪೋಲೀಸರು ಬಂಧಿಸಿದ್ದಾರೆ.ಇಂದು ರಾತ್ರಿ ಮಠದಲ್ಲೇ ಮುರುಘಾಶ್ರೀ ಗಳನ್ನು ಪೋಸ್ಕೋ ಪ್ರಕರಣದಡಿಯಲ್ಲಿ ಬಂಧಿಸಿರುವ ಚಿತ್ರದುರ್ಗ ಪೋಲೀಸರು ಶ್ರೀಗಳನ್ನು ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದಾರೆ.
ಮುರುಘಾಶ್ರೀ ಗಳಿಂದ ಲೈಂಗಿಕ ದೌರ್ಜನ್ಯ ನಡೆದಿರುವ ಕುರಿತು ಮೈಸೂರಿನ ನಜರಾಬಾದ್ ಠಾಣೆಯಲ್ಲಿ ದೂರು ದಾಖಲಾಗಿತ್ತು.ಲೈಂಗಿಕ ದೌರ್ಜನ್ಯಕ್ಕೊಳಗಾದ ಬಾಲಕಿಯರು ಒಡನಾಡಿ ಸಂಸ್ಥೆಯ ಸಹಕಾರದಿಂದ ಮುರುಘಾಶ್ರೀಗಳ ವಿರುದ್ದ ದೂರು ನೀಡಿದ್ದರು.
ಶ್ರೀಗಳ ವಿರುದ್ಧ ಪ್ರಕರಣ ದಾಖಲಾದ ಆರು ದಿನಗಳ ಬಳಿಕ,ಅವರನ್ನು ಬಂಧಿಸಲಾಗಿದ್ದು,ಮುರುಘಾ ಮಠದ ಸುತ್ತ ಬಿಗಿ ಪೋಲೀಸ್ ಬಂದೋಬಸ್ತಿ ಏರ್ಪಡಿಸಲಾಗಿದೆ.ಮಠದ ಹಿಂಬಾಗಿಲಿನಿಂದ ಶ್ರೀಗಳನ್ನು ಕಾರಿನಲ್ಲಿ ಪೋಲೀಸರು ಕರೆದೊಯ್ದ ಜಡ್ಜ್ ಎದುರು ಹಾಜರುಪಡಿಸುವ ಸಾಧ್ಯತೆ ಇದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ