ಪೌರತ್ವ ಕಾಯ್ದೆಯಿಂದ ಭಾರತೀಯ ಮಸ್ಲೀಂ ರಿಗೆ ಯಾವುದೇ ತೊಂದರೆ ಇಲ್ಲ .ಕುರಾನ್ ಮೇಲೆ ಆಣೆ- ಮಂಜುನಾಥ ಶ್ರೀಗಳು
ಬೆಳಗಾವಿ- ಕೇಂದ್ರ ಸರ್ಕಾರ ಜಾರಿಗೆ ದಿರುವ CAA ಮತ್ತು NRC ಕಾಯ್ದೆಯಿಂದ ಭಾರತೀಯ ಮುಸ್ಲೀಂ ರಿಗೆ ಯಾವುದೇ ತೊಂದರೆ ಇಲ್ಲ ಮುಸ್ಲೀಂ ರ ಪವಿತ್ರ ಗ್ರಂಥ ಕುರಾನ್ ಮೇಲೆ ಆಣೆ ಎಂದು ಮಂಜುನಾಥ ಶ್ರೀಗಳು ಭರವಸೆ ನೀಡಿದರು
ಬೆಳಗಾವಿಯಲ್ಲಿ ವಿವಿಧ ಹಿಂದೂ ಸಂಘಟನೆಗಳು ಪೌರತ್ಚ ಕಾಯ್ದೆಯ ಬೆಂಬಲಿಸಿ ನಡೆಸಿದ ಬೃಹತ್ ರ್ಯಾಲಿ ಉದ್ದೇಶಿಸಿ ಹುಕ್ಕೇರಿ ಇಂಚಗೀರಿ ಮಠದ ಶ್ರೀ ಮಂಜುನಾಥ ಮಹಾಸ್ವಾಮಿಗಳು ಮಾತನಾಡಿ ಹಿಂದುಗಳು ಶಾಂತವಾಗಿದ್ದಾರೆ ಅಂದ್ರೆ ಅದು ಅವರ ದೌರ್ಬಲ್ಯವಲ್ಲ ಶಾಂತಿ ಬಿಟ್ಟು ಅಶಾಂತಿಗೆ ಇಳಿದ್ರೆ ಪರಿಸ್ಥಿತಿ ಬೇರೆನೆ ಇರುತ್ತದೆ ಆದ್ರೆ ಹಿಂದೂಗಳು ಯಾವಾಗಲೂ ಶಾಂತಿ ಬಿಟ್ಟು ಹೋಗುವದಿಲ್ಲ ಇದನ್ನು ಅರ್ಥ ಮಾಡಿಕೊಳ್ಳಬೇಕು , ಅಪಘಾನಿಸ್ತಾನ ,ಬಾಂಗ್ಲಾದೇಶ,ಪಾಕಿಸ್ತಾನದಿಂದ ಅನಧಿಕೃತವಾಗಿ ತುಡುಗಿನಿಂದ ನುಸುಳಿ ಬಂದವರಿಗೆ ಮಾತ್ರ ಪೌರತ್ವ ಕಾಯ್ದೆ ಅನ್ವಯಿಸುತ್ತದೆ ಎಂದು ಮಂಜುನಾಥ ಶ್ರೀಗಳು ಹೇಳಿದ್ರು.
NRC ಮತ್ತು CAA ಇದು ಕೇವಲ ಟ್ರೇಲರ್ ಪಿಕ್ಚರ್ ಅಭೀ ಬಾಕಿ ಹೈ ಎಂದು ಹೇಳಿದ ಮಂಜುನಾಥ ಶ್ರೀಗಳು ಬೇರೆ ಬೇರೆ ದೇಶಗಳಿಗೆ ಆಕ್ರಮವಾಗಿ ನುಸುಳಿ ಹೋದ್ರೆ ಕಠಿಣ ಶಿಕ್ಷೆ ಇದೆ ,ಆದ್ರೆ ಭಾರತಕ್ಕೆ ನುಸುಳಿ ಬಂದವರ ವಿರುದ್ಧ ಕ್ರಮ ಕೈಗೊಂಡರೆ ಮಮತಾ ಬ್ಯಾನರ್ಜಿಯಂತ ಹುಚ್ವಿ ಹುಚ್ಚಾಟ ಮಾಡ್ತಾರೆ , ಇನ್ನು ಕೆಲವರು ಪೌರತ್ವ ಕಾಯ್ದೆ ಮುಸ್ಲೀಂ ವಿರೋಧಿ ಎಂದು ಬಿಂಬಿಸುತ್ತಿವೆ ಆದರೆ ಇದು ಪೌರತ್ವ ಕೊಡೋ ಕಾಯ್ದೆ ಹೊರತು ಪೌರತ್ವ ಕಿತ್ತುಕೊಳ್ಳುವ ಕಾಯ್ದೆ ಅಲ್ಲ ಅನ್ನೋದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಮಂಜುನಾಥ ಶ್ರೀಗಳು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೀತ ಷಾ ಅವರು ಪೌರತ್ವ ಕಾಯ್ದೆ ಜಾರಿಗೆ ತಂದಿದ್ದಕ್ಕೆ ಅವರಿಗೆ ಎಲ್ಲರೂ ಅಭಿನಂಧಿಸಬೇಕು ಎಂದರು