22 ರಂದು ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರದ ಉದ್ಘಾಟನೆ ನಡೆಯಲಿದೆ.ಎಲ್ಲರಿಗೂ ಅಯೋಧ್ಯೆಗೆ ಹೋಗಲು ಸಾಧ್ಯವಾಗುವದಿಲ್ಲ.ಆದ್ರೆ ಶ್ರೀರಾಮನಿಗಾಗಿ ತಪಸ್ಸು ಮಾಡಿ,ಶ್ರೀರಾಮನನ್ನು ಶಬರಿ ಭೇಟಿ ಮಾಡಿದ ಸ್ಥಳ ಬೆಳಗಾವಿ ಜಿಲ್ಲೆಯಲ್ಲಿದೆ.22 ರಂದು ಈ ಸ್ಥಳಕ್ಕೆ ಹೋಗಬಹುದಾಗಿದೆ.ಯಾಕಂದ್ರೆ ಶಬರಿಯ ಮಂದಿರವೂ ಇಲ್ಲಿದೆ.
ಬೆಳಗಾವಿ-ಇದೇ ತಿಂಗಳು 22ರಂದುಅಯೋಧ್ಯಯಲ್ಲಿ ಶ್ರೀರಾಮ ಭವ್ಯ ದೇಗುಲ ಲೋಕಾರ್ಪಣೆಗೊಳ್ಳಲಿದೆ. ಈ ಕ್ಷಣಕ್ಕಾಗಿ ಈಗ ಇಡೀ ದೇಶವೇ ಕಾತುರದಿಂದ ಕಾದು ನೋಡುತ್ತಿದೆ. ಹೌದು ಗಡಿ ಜಿಲ್ಲೆ ಬೆಳಗಾವಿಗು ಶ್ರೀರಾಮನಿಗೆ ನಂಟಿದೆ. ರಾಮನ ಕಾರಣದಿಂದಲೇ ಬೆಳಗಾವಿ ಜಿಲ್ಲೆಯ ಒಂದು ಪಟ್ಟಣಕ್ಕೆ ರಾಮದುರ್ಗ ಎಂಬ ಹೆಸರು ಬಂದಿದೆ. ಅಷ್ಟೇ ಅಲ್ಲ ರಾಮನಿಗಾಗಿ ಅನೇಕ ವರ್ಷಗಳ ತಪ್ಪಸು ಮಾಡಿದ ಶಬರಿಗೆ ಕೊನೆಗೂ ಶ್ರೀರಾಮ ದರ್ಶನ ಕೊಟ್ಟ, ಜೊತೆಗೆ ಶಬರಿ ಭಕ್ತಿಗೆ ಮೆಚ್ಚಿ ವರ ಕೊಟ್ಟಿರೋ ಐತಿಹಾಸಿಕ ಕ್ಷೇತ್ರವು ಬೆಳಗಾವಿ ಜಿಲ್ಲೆಯ ಜಿಲ್ಲೆಯಲ್ಲಿ ಇದೆ.ಈ ಕ್ಷೇತ್ರಗಳಿಗೆ ಉತ್ತರ ಭಾರತದಿಂದ ನಾಗಾ ಸಂಪ್ರದಾಯದ ಸಾಧುಗಳು ನಿರಂತರವಾಗಿ ಬರುತ್ತಾರೆ. ಜಿಲ್ಲೆಗೆ ರಾಮ ಬಂದು ಹೋಗಿದ್ದರ ಬಗ್ಗೆ ಅನೇಕ ಕುರುಹುಗಳು ಇಂದಿಗೂ ಇವೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣ ಇದೊಂದು ಐತಿಹಾಸಕ ಸ್ಥಳವಾಗಿದೆ. ಇಲ್ಲಿಗೆ ಸ್ವತಃ ಶ್ರೀರಾಮ ಭೇಟಿ ನೀಡಿದ್ದ ಕಾರಣಕ್ಕಾಗಿಯೇ ಈ ಪಟ್ಟಣಕ್ಕೆ ರಾಮದುರ್ಗ ಎಂಬ ಹೆಸರು ಬಂದಿದೆ. ಜೊತೆಗೆ ರಾಮದುರ್ಗ ತಾಲೂಕಿನ ಸುರೇಬಾನ್ ಬಳಿ ಇರೋ ಶಬರಿ ಕೊಳ್ಳ ಐತಿಹಾಸ ಕೇಂದ್ರವಾಗಿದೆ. ಇದೇ 22ರಂದು ಅಯೋಧ್ಯಯಲ್ಲಿ ರಾಮನ ದೇವಸ್ಥಾನ ಲೋಕಾರ್ಪಣೆಗೊಳ್ಳಲಿದೆ. ಈ ಸಂದರ್ಭದಲ್ಲಿ ಶ್ರೀರಾಮ ಓಡಾಡಿದ ಎಲ್ಲಾ ಸ್ಥಳಗಳನ್ನು ಜನ ಕೂತುಹಲದಿಂದ ಹುಡುಕುತ್ತಿದ್ದಾರೆ. ಶ್ರೀರಾಮನಿಗೂ ಬೆಳಗಾವಿ ಜಿಲ್ಲೆಗೂ ಅನಿನಾಭ ನಂಟಿದೆ. ಜಿಲ್ಲೆಯಲ್ಲಿಯೂ ಶ್ರೀರಾಮ ನಡೆದಾಡಿದ ಬಗ್ಗೆ ಮಾತುಗಳು ಇವೆ. ರಾಮಾಯಣದಲ್ಲಿ ರಾಮನಿಗಾಗಿ ಶಬರಿ ತಪ್ಪಸು ಮಾಡಿರೋ ಬಗ್ಗೆ ಉಲ್ಲೇಖವಿದೆ. ಶಬರಿ ತಪ್ಪಸು ಮಾಡಿದ್ದ ಶಬರಿ ಆಶ್ರಯ ಸುರೇಬಾನ್ ಗ್ರಾಮದಿಂದ ಕೇವಲ ಮೂರು ಕಿ ಮೀ ಅಂತರದಲ್ಲಿ ಇದೆ. ಇಲ್ಲಿ ಶಬರಿ ದೇವಾಲಯ, ರಾಮನ ದೇವಾಲಯ, ಶಬರಿ ತಪ್ಪಸು ಮಾಡಿದ್ದ ಸ್ಥಳ, ಎರಡು ಸಿಹಿ ನೀರಿನ ಪುಷ್ಕರ್ಣಿಗಳು ಇಂದಿಗೂ ಇವೆ. ಇಲ್ಲಿಗೆ ಉತ್ತರ ಭಾರತದ ಅನೇಕ ನಾಗಾ ಸಾಧುಗಳು ಬಂದು ಭೇಟಿ ಕೊಟ್ಟು, ತಂಗಿ ಇಲ್ಲಿಂದ ಮುಂದೆ ನಡೆಯುವುದು ಇಂದಿಗು ನಡೆದುಕೊಂಡು ಬಂದಿದೆ. ಶಬರಿಯೂ ಈಗಿನ ಮಧ್ಯಪ್ರದೇಶದ ಶಭರ ಮಹಾರಾಜನ ಒಬ್ಬಳೇ ಸುಂದರಿ ಮಗಳು ಎಂಬ ಹಿನ್ನೆಲೆ ಇದೆ. ಶಬರಿಯ ಮದುವೆಯ ಸ್ವಯಂವರ ನಡೆಸಲು ತಂದೆ ಶಭರ ಮಹಾರಾಜ ನಿಶ್ಚಯ ಮಾಡಿರುತ್ತಾನೆ. ಈ ಸ್ವಯಂ ವರಕ್ಕೆ ಅಷ್ಟು ದಿಕ್ಕುಗಳಿಂದ ಬೇಟೆಯಾಡಿದ ಪ್ರಾಣಿಗಳ ತಲೆಗಳನ್ನು ಕತ್ತರಿಸಿ ತಂದು ಮಂಟಕ್ಕೆ ಶೃಂಗರಿಸಲಾಗಿರುತ್ತದೆ.ತನ್ನ ಸ್ವಯಂವರಕ್ಕಾಗಿ ಇಷ್ಟೊಂದು ಪ್ರಾಣಿಗಳ ಜೀವ ತೆಗೆಯುವುದನ್ನು ನೋಡಲಾಗಿದೆ ಜೀವನದಲ್ಲಿ ಹಿಂಸೆಗಿಂತ ಅಹಿಂಸಾ ಮಾರ್ಗ ಒಳ್ಳೆಯದು ಎಂದು ಶಬರಿಗೆ ವೈರಾಗ್ಯ ಬರುತ್ತದೆ. ಸುಖ, ಸಂಪತ್ತು, ರಾಜ ವೈಭವವನ್ನು ತೊರೆದು ಶಬರಿ ದೇಶ ಸಂಚಾರಕ್ಕಾಗಿ ಮುಂದಾಗುತ್ತಾರೆ. ಅಲ್ಲಿಂದ ಸುರೇಬಾನ್ ಪಕ್ಕದ ಅರಣ್ಯದಲ್ಲಿ ಬಂದು ನೆಲೆಸುತ್ತಾರೆ ಎಂಬ ಇತಿಹಾಸ ಇದೆ.
ಶಬರಿ ಆಶ್ರಮದಲ್ಲಿ ಶಬರಿಗಾಗಿ ರಾಮನಿಗಾಗಿ ಅನೇಕ ವರ್ಷಗಳ ಕಾಲ ತಪ್ಪಸ್ಸು ಮಾಡುತ್ತಾಳೆ. ಕೊನೆಗೂ ಶಬರಿಯ ತಪ್ಪಿಸಿಗೆ ಮೆಚ್ಚಿ ಶ್ರೀರಾಮ ಲಕ್ಷ್ಮಣನ ಜೊತೆಗೆ ಈ ಆಶ್ರಮಕ್ಕೆ ಭೇಟಿ ನೀಡುತ್ತಾನೆ. ಹೀಗೆ ಬಂದ ಶ್ರಿರಾಮನಿಗೆ ಶಬರಿ ತಾನು ತಿಂದಿದ್ದ ಬಾರಿ ಹಣ್ಣನ್ನು ಕೊಡುತ್ತಾಳೆ. ಅವಳ ಭಕ್ತಿಗೆ ಮೆಚ್ಚಿ ಶ್ರೀರಾಮ ಇದನ್ನು ತಿನ್ನುತ್ತಾನೆ. ಶಬರಿಯ ಭಕ್ತಿಗೆ ಮೆಚ್ಚಿನ ಶ್ರೀರಾಮ ನಿನಗೆ ಏನು ವರ ಬೇಕು ಕೇಳು ಎಂದು ಶಬರಿ ಬಳಿ ಕೇಳುತ್ತಾನೆ. ಶ್ರೀರಾಮನಿಗೆ ಶಬರಿ ನಿನ್ನ ತೊಡೆಯ ಮೇಲೆ ಪ್ರಾಣ ಬಿಡುವ ಅವಕಾಶ ಕೊಡು ಎಂದು ಕೇಳುತ್ತಾಳೆ. ಶಬರಿ ರಾಮನ ತೊಡೆಯ ಮೇಲೆ ಮಲಗಿದ್ದಾಗ ರಾಮನು ಸುತ್ತಲೂ ನೀರಿಗಾಗಿ ವೀಕ್ಷಿಸಿದ್ರು ಎಲ್ಲೂ ನೀರು ಕಾಣಲ್ಲ. ಈ ವೇಳೆಯಲ್ಲಿ ರಾಮ ಬಾಣ ಪ್ರಯೋಗ ಮಾಡಿ ನೀರು ತರಿಸುತ್ತಾನೆ. ಇದಕ್ಕೆ ಸಾಕ್ಷಿ ಎಂಬತೆ ಇಲ್ಲಿ ಇಂದಿಗೂ ಎರಡು ಹೊಂಡಗಳು ಇವೆ. ಶ್ರೀರಾಮ ಬಾಣ ಪ್ರಯೋಗ ಮಾಡಿದ ಐತಿಹಾಸಕ ಸ್ಥಳವು ಇಲ್ಲಿದೆ. ಇಲ್ಲಿ ಎಂದಿಗೂ ನೀರು ಬತ್ತಿಲ್ಲ. ಇಲ್ಲಿನ ಸಿಹಿ ನೀರನ್ನು ಜನ ಇಂದಿಗೂ ಮನೆಗೆ ಕೊಂಡೆಯುತ್ತಾರೆ. ನೀರಿಗೆ ಅಘಾದ ಶಕ್ತಿ ಇದೆ ಎಂದು ನಂಬಿದ್ದಾರೆ.
ಶ್ರೀರಾಮ ಹಾಗೂ ಶಬರಿ ಭೇಟಿಯಾದ ಸ್ಥಳ ಈಗ ಶಬರಿ ಕೊಳ್ಳ ಎಂದೇ ಖ್ಯಾತಿ ಗಳಿಸಿದೆ. ಶಬರಿ ಕೊಳ್ಳದ ಪಕ್ಕದಲ್ಲಿಯೇ ಒಂದು ಫಾಲ್ಸ್ ಸಹ ಇದೆ. ಇಲ್ಲಿ ಮಳೆಗಾಲದಲ್ಲಿ 100 ಅಡಿಗೂ ಮೇಲಿಂದ ನೀರು ಧುಮ್ಮಕ್ಕಿತ್ತದೆ. ಇಲ್ಲಿಗೆ ಅನೇಕ ಪ್ರವಾಸಿಗರು ಭೇಟಿ ನೀಡುತ್ತಾರೆ. ಇನ್ನೂ ಶಬರಿ ದೇವಾಲಯವನ್ನು ಜಕಣಾಚಾರಿ ನಿರ್ಮಾಣ ಮಾಡಿದ್ರು ಎನ್ನುವ ನಂಬಿಕೆಯೂ ಇದೆ. ಇಲ್ಲಿ ಶಬರಿಗೆ ನಿತ್ಯ ಪೂಜೆ ಸಲ್ಲಿಕೆ ಮಾಡಲಾಗುತ್ತದೆ. ಮದುವೆ ಸೇರಿ ಅನೇಕ ಶುಭ ಕಾರ್ಯಕ್ರಮಗಳ ಶಬರಿ ಕ್ಷೇತ್ರದಲ್ಲಿ ನಿರಂತರವಾಗಿ ನಡೆಯುತ್ತವೆ. ಇನ್ನೂ ಉತ್ತರ ಭಾತರದಿಂದಲು ಅನೇಕ ನಾಗಾಸಾಧುಗಳು ಇಲ್ಲಿಗೆ ಬರುತ್ತಾರೆ. ಬಂದು ಇಲ್ಲಿ ಉಳಿದು ಇಲ್ಲಿಂದು ಮುಂದೆ ಸಾಗುವುದು ಪ್ರತಿತಿಯಾಗಿದೆ. ಅಯೋಧ್ಯಯಿಂದ ಶ್ರೀರಾಮ ಕಿಷ್ಕಿಂದೆಗೆ ಹೋಗುವ ಮಾರ್ಗದಲ್ಲಿ ಶಬರಿ ಆಶ್ರಮಕ್ಕೆ ಹೋಗಲು ರಾಮದುರ್ಗ ಮಾರ್ಗದಲ್ಲಿ ಬಂದಿದ್ದನು, ಹೀಗಾಗಿ ರಾಮದುರ್ಗ ಎಂಬ ಹೆಸರು ಬಂತು ಎಂಬ ಇತಿಹಾಸವಿದೆ.