ಬೆಳಗಾವಿ- ಇಲೆಕ್ಷನ್ ಬಂದಾಗ ಕಲೆಕ್ಷನ್ ಮಾಡಲು ಬಾಲ ಬಿಚ್ವುವ,ಕಾಲು ಕೆದರಿ ಜಗಳ ಮಾಡುವ,ಸ್ವಯಂ ಘೋಷಿತ ಎಂಇಎಸ್ ನಾಯಕ ಶುಭಂ ಶಳಕೆ ನನ್ನು ಬೆಳಗಾವಿ ಪೋಲೀಸರು ಬಂಧಿಸಿದ್ದಾರೆ.
ಪ್ರಶಾಂತವಾಗಿರುವ ಬೆಳಗಾವಿಯಲ್ಲಿ ಭಾಷಾ ವೈಷಮ್ಯದ ವಿಷ ಬೀಜ ಬಿತ್ತಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಶುಭಂ ಶಳಕೆ ಇತ್ತೀಚಿಗೆ ಜೈ ಕರ್ನಾಟಕ ಎಂದು ಘೋಷಣೆ ಕೂಗಿದ ಮಹಾರಾಷ್ಟ್ರದ ಉದ್ಯಮಿಯ ಕಾರ್ಖಾನೆಯ ಕಚೇರಿಯ ಗೋಡೆಯ ಮೇಲೆ ಜೈ ಮಹಾರಾಷ್ಟ್ರ ಎಂದು ಬರೆದು ಪುಂಡಾಟಿಕೆ ನಡೆಸಿ ನಾಡವಿರೋಧಿ ಹೇಳಿಕೆ ನೀಡಿದ್ದ ಶುಭಂ ಶಳಕೆನ ಪುಂಡಾಟಿಕೆಗೆ ಬೆಳಗಾವಿ ಪೋಲೀಸರು ಬ್ರೇಕ್ ಹಾಕಿದ್ದಾರೆ.
ಇಲೆಕ್ಷನ್ ಬಂದಾಗ ರಾಜಕೀಯ ಪಕ್ಷಗಳ ಗಮನ ಸೆಳೆಯಲು ಕಿಡಗೇಡಿ ಕೃತ್ಯಗಳನ್ನು ಮಾಡುತ್ತಲೇ ಬಂದಿರುವ ಶುಭಂ ಶಳಕೆ ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ವೈಷಮ್ಯದ ಬೀಜ ಬಿತ್ತುವ ನೀಚ ಕೆಲಸಕ್ಕೆ ಮುಂದಾಗಿದ್ದ, ಈ ಹಿಂದೆ ಲೋಕಸಭೆ ಚುನಾವಣೆಗೂ ಸ್ಪರ್ದಿಸಿದ್ದ ಈತ ಈ ಬಾರಿ ಜೈಲು ಪಾಲಾಗಿದ್ದಾನೆ.ಬೆಳಗಾವಿಯ ಮಾಳಮಾರುತಿ ಠಾಣೆಯ ಸಿಪಿಐ ಕಾಲಿಮಿರ್ಚಿ ಶುಭಂ ಶಳಕೆಯನ್ನು ಬಂಧಿಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ