ಬೆಳಗಾವಿ-ಕಳೆದ ಒಂದು ತಿಂಗಳಿನಿಂದ ತಾಲ್ಲೂಕಿನ ಜನರ ಕುತೂಹಲಕ್ಕೆ ಕಾರಣವಾಗಿದ್ದ ಬೈಲಹೊಂಗಲದ ಸೋಮೇಶ್ವರ್ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಬಾಳೇಕುಂದರಗಿ ಪ್ಯಾನಲ್ ನ 9 ಜನ ಅಭ್ಯರ್ಥಿಗಳು ವಿಜಯಶಾಲಿಗಳಾಗಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.
ಕಾರ್ಖಾನೆಯ ಆಡಳಿತ ಮಂಡಳಿಗೆ 17 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಾಳೇಕುಂದರಗಿ ಪ್ಯಾನೆಲ್ ನ 9 ಜನ ಸದಸ್ಯರು ಜಯಶಾಲಿಗಳಾಗಿ ಬಹುಮತ ಪಡೆದುಕೊಂಡಿದ್ದು ಮಾಜಿ ಶಾಸಕ ಮಹಾಂತೇಶ್ ದೊಡ್ಡಗೌಡ್ರ ನೇತ್ರತ್ವದ ಪ್ಯಾನೆಲ್ ನಿಂದ 8 ಜನ ಅಭ್ಯರ್ಥಿಗಳು ಚುನಾಯಿತರಾಗಿದ್ದಾರೆ.
ಬಾಳೇಕುಂದರಗಿ ಪ್ಯಾನೆಲ್ ನಿಂದ, ಬಸವರಾಜ್ ಬಾಳೇಕುಂದರಗಿ,ರಾಜು ಕುಡಸೋಮಣ್ಣವರ,ಮಹಾಂತೇಶ್ ಮತ್ತಿಕೊಪ್ಪ,ಕಾರ್ತಿಕ ಮಲ್ಲೂರ,ಅಶೋಕ ಯರಗೊಪ್ಪ,ಮಲ್ಲಪ್ಪ ಅಷ್ಟಗಿ,ಅದೃಶ್ಯಪ್ಪಾ ಕೊಟಬಾಗಿ,ಅಶೋಕ ಬಾಳೇಕುಂದರಗಿ,ಹಾಗೂ ರಾಮಚಂದ್ರ ಕಕ್ಕಯ್ಯನವರ ಅವರು ಚುನಾಯಿತರಾಗಿದ್ದಾರೆ.
ಮಹಾಂತೇಶ್ ದೊಡಗೌಡ್ರ ನೇತ್ರತ್ವದ ರೈತ ಪ್ಯಾನೆಲ್ ನಿಂದ,ಉಮೇಶ ಬಾಳಿ,ರಾಚಪ್ಪ ಮಟ್ಟಿ,ಪ್ರಕಾಶ ಮೂಗಬಸವ,ಅನೀತಾ ಮೆಟಗುಡ್ಡ,ಕಸ್ತೂರಿ ಸೋಮನಟ್ಟಿ,ಸಣ್ಣಭಿಮಶೆಪ್ಪ ಅಂಬಡಗಟ್ಟಿ,ರಾಜಶೇಖರ ಎತ್ತಿನಮನಿ,ಶ್ರೀಶೈಲಪ್ಪ ಶರಣಪ್ಪನವರ,ಒಟ್ಟು ಎಂಟು ಜನ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಬಾಳೇಕುಂದರಗಿ ಪ್ಯಾನೆಲ್ ವಿಜಯಶಾಲಿಗಳಾಗಿದ್ದು ಫಲಿತಾಂಶ ಪ್ರಕಟವಾದ ಬಳಿಕ ಬಾಳೇಕುಂದರಗಿ ಗುಂಪಿನ ಬೆಂಬಲಿಗರು ಗುಲಾಲು ಹಾರಿಸಿ,ಸಿಹಿ ಹಂಚಿ ಸಂಭ್ರಮಿಸಿದರು.ಒಟ್ಟಾರೆ ಬೈಲಹೊಂಗಲದ ಸೋಮೇಶ್ವರ ಸಕ್ಕರೆ ಫ್ಯಾಕ್ಟರಿಯಲ್ಲಿ ಬಾಳೇಕುಂದರಗಿ ಪ್ಯಾನೆಲ್ ಮತ್ತೆ ಗೆಲುವಿನ ವಿಕ್ಟರಿ ಮಾಡಿದೆ.