ಕೃಷ್ಣೆಯ ವಿರಹ…ಜಿಲ್ಲೆಯಲ್ಲಿ ಕೈ..ಕಲಹ
ಬೆಳಗಾವಿ- ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣಾ ಅವರು ಕಾಂಗ್ರೆಸ್ ಗೆ ಗುಡ್ ಬೈ ಹೇಳಿರುವ ವಿಷಯ ಈಗ ಬೆಳಗಾವಿ ಜಿಲ್ಲೆಯ ಹಲವಾರು ಕಾಂಗ್ರೆಸ್ ನಾಯಕರ ನಿದ್ದೆಗೆಡಿಸಿದೆ ಕೆಲವರು ಕೃಷ್ಣಾ ನೀ ಬೇಗನೆ ಬಾರೋ ಎಂದು ಮರಳಿ ಪಕ್ಷಕ್ಕೆ ಕರೆದರೆ ಇನ್ನು ಕೆಲವರು ಕೃಷ್ಣಾ ನೀ ಬಿಜೆಪಿಗೆ ಹೋಗೋ ಎನ್ನುವ ಮಂತ್ರ ಜಪಿಸುತ್ತ ಕುಳಿತಿದ್ದಾರೆ
ಹಾಗಾದರೆ ಎಸ್ ಎಂ ಕೃಷ್ಣಾ ಬಿಜೆಪಿಗೆ ಹೋದರೆ ಅವರ ಜೊತೆ ಜಿಲ್ಲೆಯ ಯಾವ ಯಾವ ಕಾಂಗ್ರೆಸ್ಸಿನ ಶಾಸಕರು ಎಸ್ಎಂಕೆ ಅವರನ್ನು ಹಿಂಬಾಲಿಸಿ ಬಿಜೆಪಿಗೆ ಹೋಗಬಹುದು ಎನ್ನುವ ಲೆಕ್ಕಾಚಾರ ಶುರುವಾಗಿದೆ
ಎಸ್ ಎಂ ಕೃಷ್ಣಾ ಅವರನ್ನು ಬೆಂಬಲಿ ಪ್ರಸಂಗ ಬಂದರೆ ರಾಜಿನಾಮೆ ನೀಡುವದಾಗಿ ಹೇಳಿಕೊಂಡಿರುವ ಸಂಸದ ಪ್ರಕಾಶ ಹುಕ್ಕೇರಿ,ಅವರ ಜೊತೆ ಕಿತ್ತೂರು ಶಾಸಕ ಡಿಬಿ ಇನಾಮದಾರ ಅವರು ಎಸ್ ಎಂ ಅವರನ್ನು ಬೆಂಬಲಿಸಿ ಕಾಂಗ್ರೆಸ್ ಗೆ ರಾಜಿನಾಮೆ ನೀಡಬಹುದು ಎನ್ನುವ ಸುದ್ಧಿ ಜಿಲ್ಲೆಯಲ್ಲಿ ಸಾಕಷ್ಟು ಪ್ರಚಾರ ಪಡೆದುಕೊಂಡಿದೆ
ಎಸ್ ಎಂ ಕೃಷ್ಣಾ ಅವರ ಮುಂದಿನ ನಡೆ ನಿಗೂಢವಾಗಿದೆ ಅವರ ನಿಲುವು ಸ್ಪಷ್ಠವಾದ ಬಳಿಕ ಜಿಲ್ಲೆಯ ಹಲವಾರು ಜನ ಶಾಸಕರು ಮತ್ತು ಮಾಜಿ ಶಾಸಕರು ಹಸ್ತ ಕ್ಕೆ ಗುಡ್ ಬೈ ಹೇಳಲಿದ್ದಾರೆ ಎನ್ನುವ ಸುದ್ಧಿ ಜಿಲ್ಲೆಯಲ್ಲಿ ವ್ಯಾಪಕ ಪ್ರಚಾರ ಪಡೆದುಕೊಂಡಿದೆ
ಕಿತ್ತೂರ ಧಣಿ ಡಿಬಿ ಇನಾಮದಾರ ಪ್ರಕಾಶ ಹುಕ್ಕೇರಿ ಹಾಗು ಜಿಲ್ಲೆಯ ಘಟಾನುಘಟಿ ಕಾಂಗ್ರೆಸ್ ನಾಯಕರು ಎಸ್ ಎಂ ಕೃಷ್ಣಾ ಅವರನ್ನು ಬೆಂಬಲಿಸುವ ಲಕ್ಷಣಗಳು ಕಂಡುಬಂದಿವೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ