Breaking News

ಅಪಾಯದ ಅಂಚಿನಲ್ಲಿ ಕನ್ನಡ ಶಾಲೆ,ಜನಪ್ರತಿನಿಧಿಗಳ ಕಣ್ಣುಮುಚ್ಚಾಲೆ,ಯಾರಿಗೆ ಬರೆಯಲಿ ವೇದನೆಯ ಓಲೆ..

ಬೆಳಗಾವಿ

ಗಡಿಭಾಗದ ಕನ್ನಡ ಶಾಲೆಗಳನ್ನ ಉಳಿಸುತ್ತೇವೆ ಅಂತ ಸರ್ಕಾರ ಬರೀ ಮಾತಿನಲ್ಲೆ ಮನೆಕಟ್ಟುತ್ತಿದೆ. ಆದ್ರೆ ಕನ್ನಡ ಶಾಲೆಯ ವಾಸ್ತವ ಸ್ಥಿತಿ ನೊಡಿದ್ರೆ ಅಯ್ಯೋ ಅನಿಸುತ್ತದೆ. ಒಂದು ಕಡೆ ಕನ್ನಡ ಶಾಲೆಗಳಿಗೆ ಸ್ವಂತ ಕಟ್ಟಡ ಇಲ್ಲದೆ ಪರದಾಡುತ್ತಿದ್ದರೆ, ಇನ್ನೊಂದು ಕಡೆ ಸ್ವಂತ ಕಟ್ಟಡ  ಇದ್ದರೂ ಯಾವಾಗ ಮುರುದು ಬೀಳುತ್ತೊ ಅನ್ನೋ ಭಯ  ಇನ್ನೊಂದು ಕಡೆ. ಭಯದ ನಡೆಯೂ ಶಾಲೆ ಕಲಿಯುತ್ತಿದ್ದಾರೆ ಕನ್ನಡ ಶಾಲೆಯ ಚಿಕ್ಕ ಮಕ್ಕಳು. ಅರೆ ಎಲ್ಲಿದೆ ಈ ಸ್ಥಿತಿ ಅಂತಿರಾ. ಹಾಗಿದ್ರೆ ಪುಲ್ ಬಾಗ್ ಗಲ್ಲಿಯ ಶಾಲೆಗೆ ಹೋಗಿ ನೋಡಿದರೆ ಪರಿಸ್ಥಿತಿಯ ಅರ್ಥ ವಾಗುತ್ತದೆ

ಎರಡನೇ ರಾಜ್ಯಧಾನಿ ಅಂತ ಕರೆಸಿಕೊಳ್ಳುವ ಗಡಿ ಜಿಲ್ಲೆ ಬೆಳಗಾವಿಯಲ್ಲಿನ ಕೆಲವು ಕನ್ನಡ  ಪಾಥಮಿಕ ಶಾಲೆಯ  ವಾಸ್ತವ ಸ್ಥಿತಿ ನೋಡಿದ್ರೆ  ಅಯ್ಯೋ ಅನಿಸುತ್ತದೆ. ನಾವು ಹೆಳೊಕೆ ಹೊರಟಿರೋದು ಯಾವುದೋ ಕುಗ್ರಾಮದ  ಕಥೆಯಲ್ಲ ಬದಲಿಗೆ  ಬೆಳಗಾವಿ ಮದ್ಯಭಾಗದಲ್ಲಿರುವ ಪುಲ್ಲಭಾಗ್ ಗಲ್ಲಿಯ  ಪ್ರಾಥಮಿಕ ಶಾಲೆಯ ಕಥೆ. ಪುಲ್ಲಭಾಗ ಗಲ್ಲಿಯ ಪ್ರಾಥಮಿಕ ಶಾಲೆಯ ನಂಬರ್ 7 ರ ಕಥೆ­ವ್ಯಥೆ. ಇದು ಸುಮಾರು 1947 ರಲ್ಲಿ ಪ್ರಾರಂಭವಾದ  ಈ ಶಾಲೆ ತುಂಬಾ ಹಳೆಯ ಶಾಲೆಯಾಗಿದೆ. ಆದ್ರೆ 1977 ರಲ್ಲಿ ಮತ್ತೆ ಕಟ್ಟಡ ನವಿಕರಣ ಮಾಡಿ  ಹೊಸ ಕಟ್ಟಡ ಕಟ್ಟಲಾಯಿತು. ಆದ್ರೆ ಈ ಕಟ್ಟಡದ ಮೇಲಿನ  ಅಂತಸ್ತು  ಕಳಪೆ ಕಾಮಗಾರಿಯಿಂದ ಕೂಡಿದ್ದು ಶಾಲೆಯ ಮೇಲ್ಛಾವಣಿ ಸೀಮೆಂಟ್ ಉದಿರಿ ಬಿದ್ದು ಅಪಾಯದ  ಅಂಚಿನಲ್ಲಿದೆ. ಕಟ್ಟದ ಕಿಡಿಕಿ ಬಾಗಿಲು ಸಂಪೂರ್ಣ ಹಾಳಾಗಿದ್ದು ಅವ್ಯವಸ್ಥೆಯ ಆಗರವಾಗಿದೆ. ಮುಂಜಾಗ್ರತವಾಗಿ  ಮೇಲಿನ ಅಂತಸ್ಥಿನ ಬದಲಾಗಿ ಮಕ್ಕಳನ್ನ ಕೆಳಗಿನ ಶಾಲೆಯಲ್ಲಿ  ಪಾಠ ಮಾಡಲಾಗುತ್ತಿದೆ. ಆದ್ರೆ ಎರಡು ಕ್ಲಾಸಿನ್ ಮಕ್ಕಳನ್ನ ಒಂದೇ ಕೊಠಡಿಯಲ್ಲಿ ಕುಡ್ರಿಸಿ ಪಾಠಮಾಡಲಾಗುತ್ತಿದೆ. ಆದರೆ ಮಕ್ಕಳಿಗೆ ತುಂಬಾ ತೊಂದ್ರೆ ಅನುಭವಿಸುತ್ತಿದ್ದಾರೆ. ಮಕ್ಕಳಿಗೆ ಕೊಠಡಿ ಸಮಸ್ಯೆ ಎದುರಾಗಿದೆ. ಇನ್ನು ಇದೇ ಶಾಲೆಯಲ್ಲಿ ಅಂಗನವಾಡಿಯ ಮಕ್ಕಳನ್ನೂ ಇಲ್ಲಿ ಇಡಲಾಗಿದೆ. ಅಂಗನವಾಡಿಯ ಮಕ್ಕಳಿಗೆ ಕೊಠಡಿಯ ಅಭಾವ  ಎದುರಾಗಿದೆ.ಈ ಕುರಿತು ಶಾಲೆಯ ಸಿಬ್ಬಂದಿಗಳು ಮೇಲಾಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನೆ ಆಗಿಲ್ಲ. ಇನ್ನು ಸ್ಥಳಿಯ ಜನಪ್ರತಿನಿದಿಗಳು ಇದರ ಬಗ್ಗೆ ಗಮನ ಹರಿಸುತ್ತಿಲ್ಲ. ಸಭೆ ಸಮಾರಂಭದಲ್ಲಿ ಮೋಜು ಮಸ್ತಿ ಮಾಡಿಕೊಂಡು ಸುತ್ತಾಡುತ್ತಿದ್ದಾರೆ. ಮಕ್ಕಳಿಗೆ ಶಾಲೆಯ ಕಟ್ಟಡದಿಂದ ಅಪಾಯವಾಗುವ ಮುನ್ನ  ಎಚ್ಚೆತ್ತು ಕ್ರಮ ಕೈಗೊಳ್ಳಬೇಕಾಗಿದೆ. ಜನಪ್ರತಿನಿದಿಗಳಿಗೆ ಅದ್ಯಾವ ದೇವರು ಕನಸಲ್ಲಿ ಬಂದು ಹೇಳಬೇಕೊ ಗೊತ್ತಿಲ್ಲ.

Check Also

ಯು.ಟಿ ಖಾದರ್ ಹೊಸ ಇತಿಹಾದ, ಬೆಳಗಾವಿ ಸುವರ್ಣಸೌಧದೊಳಗೆ “ಅನುಭವ ಮಂಟಪ.

ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಸನ್ಮಾನ್ಯ ಶ್ರೀ ಯು. ಟಿ. ಖಾದರ್ ಅವರ ನೇತೃತ್ವದಲ್ಲಿ, ಜನಮಾನಸದಲ್ಲಿ ಸದಾ ಸ್ಮರಣೀಯವಾಗಿ ಉಳಿಯುವ ಮತ್ತೊಂದು …

Leave a Reply

Your email address will not be published. Required fields are marked *