Breaking News
Home / ಬೆಳಗಾವಿ ನಗರ / ಎಸ್ ಎಂ ಕೃಷ್ಣಾ ರಾಜಿನಾಮೆಯಿಂದ ಬಿಜೆಪಿಗೆ ಲಾಭ

ಎಸ್ ಎಂ ಕೃಷ್ಣಾ ರಾಜಿನಾಮೆಯಿಂದ ಬಿಜೆಪಿಗೆ ಲಾಭ

ಬೆಳಗಾವಿ:29 ರಾಜ್ಯದಲ್ಲಿ ಹಿರಿಯ ಕಾಂಗ್ರೆಸಿಗರನ್ನು ಕಡೆಗಣಿಸಿದ ಹಿನ್ನಲೆಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಮ್.ಕೃಷ್ಣ ಕಾಂಗ್ರೆಸ್ ಪಕ್ಷಕ್ಕೆ ಮನನೊಂದು ರಾಜೀನಾಮೆ ನೀಡಿದ್ದಾರೆ ಎಂದು ಬಿಜೆಪಿ ಯುವ ಮುಖಂಡರು ಶಶಿಕಾಂತ ಸಿದ್ನಾಳ ಆರೋಪಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುತ್ಸದಿಯಾದ ಎಸ್.ಎಮ್.ಕೃಷ್ಣಾರ ಕೊಡುಗೆ ಅಪಾರವಾಗಿದೆ. ಅಂಥ ಹಿರಿಯರ ಮಾಗ೯ದಶ೯ನ ರಾಜಕೀಯ ಪಕ್ಷಕ್ಕೆ ಬೇಕಿದೆ. ಆದ್ದರಿಂದ ಅವರು ಬಿಜೆಪಿಗೆ ಸೇಪ೯ಡೆಗೊಂಡರೆ ಹೆಚ್ಚಿನ ಬಲ ಬರುತ್ತದೆ ಎಂದು ಸಿದ್ನಾಳ ತಿಳಿಸಿದ್ದಾರೆ.
ಅಲ್ಲದೆ ಬೆಳಗಾವಿ ಜಿಲ್ಲೆಯಲ್ಲಿ ಸತತ ನಾಲ್ಕು ಬಾರಿ ಕಾಂಗ್ರೆಸ್ ಪಕ್ಷದಿಂದ ಸಂಸದರಾ ಎಸ್.ಬಿ.ಸಿದ್ನಾಳ ಸೇರಿದಂತೆ ಪ್ರಮುಖ ಜಿಲ್ಲೆಯ ಹಿರಿಯ ಕಾಂಗ್ರೆಸಿಗರನ್ನು ಸಿದ್ದರಾಮಯ್ಯನ ನೇತ್ರತ್ವದ ಪಕ್ಷ ಕಡೆಗಣಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮೂಲ ಕಾಂಗ್ರೆಸಿಗರನ್ನು ಕಡೆಗಣಿಸಿ ಪಕ್ಷಕ್ಕೆ ವಲಸಿ ಬಂದವರಿಂದ ಮನನೊಂದ ಕಾಂಗ್ರೆಸ್ ಪಕ್ಷದ ಹಿರಿಯರಿಗೆ ಗೌರವ ನೀಡುತ್ತಿಲ್ಲ ಎಂಬುದು ಮಾಜಿ ಮುಖ್ಯಮಂತ್ರಿ ಎಸ್.ಎಮ್.ಕೃಷ್ಣರ ರಾಜೀನಾಮೆ ನೀಡಿರುವುದರಿಂದ ಜನತೆಗೆ ಕಾಂಗ್ರೆಸಿನ ಬಣ್ಣ ತಿಳಿಯುತ್ತಿದೆ.
ಬೆಳಗಾವಿ ಜಿಲ್ಲೆಯಲ್ಲಿ ತಮ್ಮ ತಂದೆ ಎಸ್.ಬಿ.ಸಿದ್ನಾಳ ಹಾಗೂ ದಿ. ಶಂಕ್ರಾನಂದ ಅವರು ಕಾಂಗ್ರೆಸ್ ಕಟ್ಟಿ ಬೆಳೆಸಲು ಶ್ರಮಿಸಿದ್ದಾರೆ. ಜಿಲ್ಲೆಯ ಹಾಗೂ ರಾಜ್ಯದ ಮೂಲ ಕಾಂಗ್ರೆಸಿಗರು ಕಾಂಗ್ರೆಸ್ ಪಕ್ಷದ ನಡುವಳಿಕೆಯಿಂದ ಬೇಸತ್ತು ರಾಜೀನಾಮೆ ನೀಡುತ್ತಿರುವುದು ವಿಪಯಾ೯ಸದ ಸಂಗತಿಯಾಗಿದೆ.
ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ದಿಟ್ಟತನಕ್ಕೆ ಇಡಿ ವಿಶ್ವವೇ ಭಾರತದತ್ತ ನೋಡುತ್ತಿದೆ. ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪನವರು ನಾಯಕತ್ವ ವಹಿಸಿಕೊಂಡಿರುವುದು ಯುವಕರಲ್ಲಿ ಚೈತನ್ಯ‌ ಮೂಡಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಿರಿಯ ರಾಜಕಾರಣಿ ಮಾಜಿ ಮುಖ್ಯಮಂತ್ರಿ ಎಸ್.ಎಮ್.ಕೃಷ್ಣಾರ ರಾಜೀನಾಮೆಯಿಂದ ಬಿಜೆಪಿ ಪಕ್ಷಕ್ಕೆ ಲಾಭವಾಗಲಿದೆ ಎಂದು ಶಶಿಕಾಂತ ಸಿದ್ನಾಳ ಪ್ರಕಟಣೆಯಲ್ಲಿ ಭವಿಷ್ಯ ನುಡಿದಿದ್ದಾರೆ.

 

Check Also

ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…

ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …

Leave a Reply

Your email address will not be published. Required fields are marked *