ಬೆಳಗಾವಿ- ಬೆಳಗಾವಿಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿಲ್ಲ ನಿಮ್ಮ ಏಜನ್ಸಿ ಕ್ಯಾನ್ಸಲ್ ಮಾಡುತ್ತೇವೆ ಎಂದು ರಾಜ್ಯ ನಗರಾಭಿವೃದ್ಧಿ ಇಲಾಖೆ ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆಯ ಪ್ರೋಜೆಕ್ಟ ಮ್ಯಾನೇಜ್ಮೆಂಟ್ ಕನ್ಸಲ್ಟನ್ಸಿ ಪೂನಾ ಮೂಲದ ಲೆಹರ್ ಕಂಪನಿಗೆ ನೋಟೀಸ್ ಜಾರಿ ಮಾಡುತ್ತಿದ್ದಂತೆಯೇ ಕಂಪನಿ ಈಗ ಎಚ್ಚೆತ್ತುಕೊಂಡು ಗುರುವಾರ ಬೆಳಗಾವಿಯಲ್ಲಿ ಸಭೆ ನಡೆಸಿದರು
ಲೆಹರ್ ಕಂಪನಿಯ ಪ್ರತಿನಿಧಿಗಳು ಬೆಳಗಾವಿಯಲ್ಲಿ ಸಭೆ ನಡೆಸಿ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳ ಕುರಿತು ಬೆಳಗಾವಿ ಮಹಾನಗರ ಪಾಲಿಕೆ ಮತ್ತು ಬುಡಾ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದರು ಈ ಸಂಧರ್ಭದಲ್ಲಿ ಲೆಹರ್ ಕಂಪನಿ ಪ್ರಸ್ರುತಪಡಿಸಿದ ಪ್ರಾತ್ಯಕ್ಷಿಕಕ್ಕೆ ಪಾಲಿಕೆ ಅಧಿಕಾರಿಗಳು ಇದಕ್ಕೆ ತೃಪ್ತರಾಗದೇ ಕಂಪನಿಯ MD ಬೆಳಗಾವಿಗೆ ಬಂದು ಕಾಮಗಾರಿಗಳ ಬಗ್ಗೆ ಖಾತ್ರಿ ಪಡಿಸಬೇಕು ಇಲ್ಲದಿದ್ದರೆ ಕಂಪನಿಯ ವಿರುದ್ಧ ಕ್ರಿಮಿನಲ್ ಕೇಸ್ ಹಾಕುವದಾಗಿ ಎಚ್ಚರಿಕೆ ನೀಡಿದರು
ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಬೆಳಗಾವಿ ನಗರದಲ್ಲಿ ಯಾವ ಯಾವ ಕಾಮಗಾರಿಗಳನ್ನು ನಡೆಸಬೇಕು ನಗರದ ಕೋಟೆ ಕೆರೆಯನ್ನು ಯಾವ ರೀತಿ ಡೆವಲಪ್ ಮಾಡಬೇಕು ನಗರದ ಪಾರ್ಕಗಳನ್ನು ಯಾವ ರೀತಿ ಅಭಿವೃದ್ಧಿ ಮಾಡಬೇಕು ಅನ್ನೋದರ ಬಗ್ಗೆ PMC ಯೋಜನೆ ರೂಪಿಸಿದ್ದು ಇದರ ಬಗ್ಗೆ ಪಾಲಿಕೆ ಅಧಿಲಾರಿಗಳು ಸಮ್ಮತಿ ನೀಡಲಿಲ್ಲ ಮೊದಲೇ ನಾಲ್ಕು ತಿಂಗಳು ವಿಳಂಬವಾಗಿದೆ ಕಂಪನಿಯ ಹಿರಿಯ ಅಧಿಕಾರಿಗಳು ಬೆಳಗಾವಿಗೆ ಬಂದು ಸಭೆ ನಡೆಸುವ ವರೆಗೂ ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಪಾಲಿಕೆ ಆಯುಕ್ತ ಶಶಿಧರ ಕುರೇರ ಖಡಕ್ ಎಚ್ಚರಿಕೆ ನೀಡಿದರು
.PMC ಫಿಕ್ಸ ಆದ ಬಳಿಕ ಲೆಹರ್ ಕಂಪನಿ ಮೊದಲ ಬಾರಿಗೆ ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆಯ ಬಗ್ಗೆ ಬೆಳಗಾವಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು ಮೊದಲ ಸಭೆಯಲ್ಲಿ ಕಂಪನಿಗೆ ಮಂಗಳಾರತಿ ಆಗಿದೆ