Breaking News
Home / Breaking News / ಕುಟ್ಟಲವಾಡಿ ಗ್ರಾಮದಲ್ಲಿ ಫನ್ ವಲ್ರ್ಡ್- ವಾಟರ್ ಪಾರ್ಕ್‍ಗೆ ಚಾಲನೆ

ಕುಟ್ಟಲವಾಡಿ ಗ್ರಾಮದಲ್ಲಿ ಫನ್ ವಲ್ರ್ಡ್- ವಾಟರ್ ಪಾರ್ಕ್‍ಗೆ ಚಾಲನೆ

ಕುಟ್ಟಲವಾಡಿ ಗ್ರಾಮದಲ್ಲಿ ಫನ್ ವಲ್ರ್ಡ್- ವಾಟರ್ ಪಾರ್ಕ್‍ಗೆ ಚಾಲನೆ

ಬೆಳಗಾವಿ- ರಾಜ್ಯದಲ್ಲಿನ ಪ್ರವಾಸೋದ್ಯಮ ಬೆಳೆವಣಿಗೆ ಕೇವಲ ಸರಕಾರದಿಂದ ಮಾತ್ರ ಸಾಧ್ಯವಾಗುವುದಿಲ್ಲ, ಖಾಸಗಿ ಸಹಭಾಗೀತ್ವ ತುಂಬಾ ಅಗತ್ಯವಿದೆ ಎಂದು ಪ್ರವಾಸಾಭಿವೃದ್ಧಿ ಇಲಾಖೆಯ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.

ಬೆಳಗಾವಿ ಹೊರವಲಯದ ಕುಟ್ಟಲವಾಡಿ ಗ್ರಾಮದಲ್ಲಿ ಇಂದು ಖಾಸಗಿ ಒಡೆತನದ ಫನ್ ವಲ್ರ್ಡ್- ವಾಟರ್ ಪಾರ್ಕ್‍ಗೆ ಚಾಲನೆ ನೀಡಿ ಮಾತನಾಡಿದ ಅವರು, ಖಾಸಗಿವಲಯ ಪ್ರವಾಸಿಗರನ್ನು ಸೆಳೆಯಲು ಹಾಕಿಹೊಳ್ಳಲು ಯೋಜನೆಗಳಿಂದ ಸಾರ್ವಜನಿಕರಿಗೆ ಮನರಂಜನೆಯ ಜೊತೆಗೆ ಉದ್ಯೋಗಾವಕಾಶ ಸೃಷ್ಟಿಗೊಂಡು  ಸ್ಥಳೀಯರಿಗೆ ಹೆಚ್ಚು ಅನುಕೂಲವಾಗಲಿದೆ. ಆರ್ಥಿಕಭಿವೃದ್ಧಿಗೂ ಸಹಾಯವಾಗಲಿದೆ. ಮಜರಂಜನಾ ಯೋಜನೆಗಳನ್ನು ಕಾರ್ಯಗತಗೊಳಿಸುವ ಯುವಶಕ್ತಿಗೆ ಸರಕಾರ ವಿಶೇಷ ಪ್ರೋತ್ಸಾಹ ನೀಡಲಿದೆ ಎಂದು ಹೇಳಿದರು.

ರಾಜ್ಯದಲ್ಲಿನ ಪ್ರವಾಸಿ ಸ್ಥಳಗಳ ಅಭಿವೃದ್ಧಿಗೆ ಸರಕಾರ ವಿಶೇಷ ಆದ್ಯತೆ ನೀಡುತ್ತಿದ್ದು, ಜೋಯಿಡಾದಲ್ಲಿ ಅಂತರರಾಷ್ಟ್ರೀಯ ಮಟ್ಟದ ಪ್ರವಾಸಿಕೇಂದ್ರವನ್ನು ಅಭಿವೃದ್ಧಿಗೊಳಿಸಲಾಗಿದೆ. ಪ್ರವಾಸಿ ತಾಣಗಳಲ್ಲಿ ಮೂಲಭೂತಸೌಕರ್ಯಗಳನ್ನು ನೀಡುವಲ್ಲಿ ಸರಕಾರ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡು ಕಾರ್ಯತತ್ಪರವಾಗಿದೆ ಎಂದು ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.
ಬೆಳಗಾವಿ ಸಂಸದ ಸುರೇಶ ಅಂಗಡಿ ಮಾತನಾಡಿ, ಬೆಳಗಾವಿಯಲ್ಲಿ ಫನ್‍ವಲ್ರ್ಡ್- ವಾಟರ್‍ಪಾರ್ಕ ಆರಂಭಿಸುವುದರಿಂದ  ಬೆಳಗಾವಿ ಭಾಗದ  ಸಾರ್ವಜನಿಕರು ಕೊಲ್ಲಾಪುರ ಮತ್ತು ಇತರೆಡೆ ಮನರಂಜನಾ ಕೇಂದ್ರಗಳಿಗೆ ಹೋಗುವ ಪರಿಸ್ಥಿತಿಯಿಂದ ಮುಕ್ತಿ  ದೊರಕಿದಂತಾಗಿದೆ.  ಬೆಳಗಾವಿ ಸ್ಮಾರ್ಟ್‍ಸಿಟಿಯಾಗಿ ಅಭಿವೃದ್ಧಿಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಬೆಳಗಾವಿ ಹೊರವಲಯದ ಪ್ರದೇಶಗಳನ್ನೂ ಅದರ ವ್ಯಾಪ್ತಿಗೆ ಒಳಪಡಲಿದೆ. ಯುವಕರು ಉದೋಗಾವಕಾಶ ಸೃಷ್ಟಿಸುವ ಹೊಸ ಹೊಸ ಪ್ರಯೋಗಗಳಿಗೆ ಮುಂದಾಗಬೇಕೆಂದು ಕರೆ ನೀಡಿದರು.

ಫನ್‍ವಲ್ರ್ಡ್ ಕೇಂದ್ರವನ್ನು ಆರಂಭಿಸಿದ ಯಶನೀಶ್ ಡೆವಲಪರ್ ಮಾಲೀಕರ ಕಾರ್ಯವನ್ನು ಸಚಿವ ಆರ್.ವಿ.ದೇಶಪಾಂಡೆ ಹಾಗೂ ಸಂಸದ ಸುರೇಸ ಅಂಗಡಿ ಅಭಿನಂದಿಸಿದರು.

ಬೆಳಗಾವಿ ರೈಲ್ವೆ ಮೂರನೇ ಗೇಟ್‍ದಿಂದ ಸುಮಾರು 9 ಕಿಲೋಮೀಟರ್ ಅಂತರದಲ್ಲಿರುವ ಫನ್‍ವಲ್ರ್ಡ್‍ಕ್ಕೆ ಇಂದು ಪೂಜಾ ಕಾರ್ಯದೊಂದಿಗೆ ಚಾಲನೆ ನೀಡಲಾಗಿದ್ದ, ನಾಡಿದ್ದು, 29ರಂದು ಸಾರ್ವಜನಿಕರಿಗೆ ಪ್ರವೇಶ ದೊರೆಯಲಿದೆ. ಮೇ 15ರವರೆಗೆ ಮೂಲ ಶುಲ್ಕದಲ್ಲಿ ಶೇಕಡಾ 25%ರಷ್ಟು ರಿಯಾಯಿತಿ ದೊರೆಯಲಿದೆ. ಈಗಾಗಲೇ ವಿವಿಧ ವಿನ್ಯಾಸದ ಆಕರ್ಷಕ ವಾಟರ್ ಪಾರ್ಕಗಳನ್ನು ನಿರ್ಮಿಸಲಾಗಿದ್ದು, ಇನ್ನುಳಿದ ಮನರಂಜನಾ ಕೇಂದ್ರಗಳ ತಯಾರಿ ಕಾರ್ಯ ಭರದಿಂದ ನಡೆಯುತ್ತಿದೆ

Check Also

ಹೃದಯಾಘಾತದಿಂದ ನರೇಗಾ ಕಾರ್ಮಿಕ ಸಾವು

ಬೈಲಹೊಂಗಲ: ತಾಲ್ಲೂಕಿನ ವಕ್ಕುಂದ ಗ್ರಾಮದಲ್ಲಿ ಕೂಲಿ ಕಾರ್ಮಿಕರೊಬ್ಬರು ಹೃದಯಾಘಾತದಿಂದ ಸ್ಥಳದಲ್ಲಿಯೇ ಸೋಮವಾರ ಸಾವನ್ನಪ್ಪಿದ್ದಾರೆ. ಮಲ್ಲೇಶ ಲಕ್ಷ್ಮಣ ಸಂಬರಗಿ (55) ಮೃತ …

Leave a Reply

Your email address will not be published. Required fields are marked *