ಬೆಳಗಾವಿ- ಸರ್ಕಾರ ರಾಜ್ಯದ ಮಹಾನಗರ ಪಾಲಿಕೆಗಳಿಗೆ ಪ್ರತಿ ವರ್ಷ ನಗರೋಥ್ಥಾನ ಯೋಜನೆಯಡಿಯಲ್ಲಿ ನೂರು ಕೋಟಿ ರೂ ಅನುದಾನ ಕೊಡುವ ನಿರ್ಧಾರ ಕೈಗೊಂಡಾಗಿನಿಂದ ರಾಜ್ಯದ ಮಹಾನಗರಗಳ ನಸೀಬು ಖುಲಾಯಿಸಿದೆ
ನೂರು ಕೋಟಿ ರೂ ಅನುದಾನದಲ್ಲಿ ಚನ್ನಮ್ಮ ವೃತ್ತದಿಂದ ಕೃಷ್ಣದೇವರಾಯ ಸರ್ಕಲ್ ವರೆಗಿನ ಭಾರತ ರತ್ನ ಡಾ ಬಿಆರ್ ಅಂಬೇಡ್ಕರ್ ರಸ್ತೆ ಈಗ ಫುಲ್ ಸ್ಮಾರ್ಟ್ ಆಗುತ್ತಿದೆ
ಈ ರಸ್ತೆಯ ವಿಭಾಜಕಗಳಲ್ಲಿ ಅತ್ಯಾಕರ್ಷಕ ಬೀದಿ ದೀಪಗಳನ್ನು ಅಳವಡಿಸುವ ಕಾರ್ಯ ಭರದಿಂದ ಸಾಗಿದೆ ಜೊತೆಗೆ ಈ ರಸ್ತೆಯ ಇಕ್ಕೆಲುಗಳಲ್ಲಿ ಬರುವ ಫುಟ್ ಪಾತ್ ಗಳನ್ನು ಸಿಂಗಾಪೂರ ಮಾದರಿಯಲ್ಲಿ ಹೈಟೆಕ್ ಮಾಡಲಾಗುತ್ತಿದೆ
ಈ ರಸ್ತೆಯಲ್ಲಿ ಬರುವ ಎಲ್ಲ ವಿದ್ಯುತ್ತ ಕಂಬಗಳನ್ನು ತೆರವು ಮಾಡಿ ಈ ರಸ್ತೆಯ ವಿದ್ಯುತ್ತ ವ್ಯವಸ್ಥೆಯನ್ನು ಅಂಡರ್ ಗ್ರೌಂಡ್ ಮಾಡಲಾಗಿದೆ
ರಸ್ತೆಯ ವಿಭಾಜಕಗಳಲ್ಲಿ ಬಣ್ಣ ಬಣ್ಣದ ಬೀದಿ ದೀಪ ಹಚ್ಚುವ ಜೊತೆಗೆ ಫುಟ್ ಪಾತ್ ಗಳಲ್ಲಿ ಸೈಲೆಂಟ್ ಬೆಳಕು ನೀಡುವ ಅತ್ಯಾಕರ್ಷಕ ಬೀದಿ ದೀಪಗಳನ್ನು ಅಳವಡಿಸಲಾಗುತ್ತಿದೆ
ಬೆಳಗಾವಿ ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿ ಸೇರಿ ಕಾಮಗಾರಿಗಳು ಟೆಂಡರ್ ಹಂತದಲ್ಲಿದ್ದು ಸ್ಮಾರ್ಟ ಸಿಟಿ ಕಾಮಗಾರಿ ಆರಂಭ ಆಗುವ ಮೊದಲೇ ಪಾಲಿಕೆ ಆಯುಕ್ತ ಸ್ಮಾರ್ಟ್ ಸಿಟಿ ಅಧಿಕಾರಿಯಾಗಿರುವ ಶಶಿಧರ ಕುರೇರ ನಗರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಚುರುಕುಗೊಳಿಸಿದ್ದು ಬೆಳಗಾವಿಯ ಅಂಬೇಡ್ಕರ್ ರಸ್ತೆ ಬೆಳಗಾವಿಯ ಚಳಿಗಾಲದ ಅಧಿವೇಶನದ ಹೊತ್ತಿಗೆ ಫುಲ್ ಸ್ಮಾರ್ಟ್ ಆಗಿ ಅದೇ ಸಂಧರ್ಭದಲ್ಲಿ ಉದ್ಘಾಟನೆಯಾಗುವ ಸಾಧ್ಯತೆ ಇದೆ
ಭಾರತ ರತ್ನ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ರಸ್ತೆಯ ಮಾದರಿಯಲ್ಲಿ ಕಾಲೇಜು ರಸ್ತೆ ಸಂಗೊಳ್ಳಿ ರಾಯಣ್ಣ ರಸ್ತೆ ಸ್ಮಾರ್ಟ್ ಆಗಬೇಕೆನ್ನುವದು ನಗರ ನಿವಾಸಿಗಳ ಆಸೆಯಾಗಿದೆ