ಬೆಳಗಾವಿ- ಬೆಳಗಾವಿ ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಹೆಸರಲ್ಲಿ ತೊಘಲಕ್ ದರ್ಬಾರ್ ನಡೆಯುತ್ತಿದೆ.ಬೇಕಾಬಿಟ್ಟಿ ಕಾಮಗಾರಿಗೆ ಇವತ್ತು ಮತ್ತೋರ್ವ ಬಲಿಯಾಗಿದ್ದು,ಈವರೆಗೆ ಸ್ಮಾರ್ಟ್ ವರ್ಕ್ ಗೆ ಇಬ್ಬರು ಬಲಿಯಾದಂತಾಗಿದೆ.
ಇಂದು ರಾತ್ರಿ8 ಗಂಟೆ ಸುಮಾರಿಗೆ ,ವ್ಯಕ್ತಿಯೊಬ್ಬ ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಬಿದ್ದು ಡಿವೈಡರ್ ನಿರ್ಮಿಸಲು ಹಾಕಲಾಗಿದ್ದ ಕಬ್ಬಣದ ರಾಡ್ ಗಳ ಮೇಲೆ ಬಿದ್ದು ತೀವ್ರ ರಕ್ತಸ್ರಾವದ ಪರಿಣಾಮ ನ್ಯು ಗಾಂಧಿನಗರದ ಮಹ್ಮದ ದಸ್ತಗೀರ ಮುಲ್ಲಾ,69 ಎಂಬಾತ ಮೃತಪಟ್ಟಿದ್ದಾನೆ.
ಬೆಳಗಾವಿ ಕೇಂದ್ರ ಬಸ್ ನಿಲ್ಧಾಣದ ಪ್ರವೇಶ ದ್ವಾರದ ಎದುರಲ್ಲೇ ಈ ದುರ್ಘಟನೆ ಸಂಭವಿಸಿದೆ. ಕಬ್ಬಿಣದ ರಾಡ್ ಗಳ ಮೇಲೆ ಬಿದ್ದ ವ್ಯೆಕ್ತಿಯ ತಲೆಯ ಪಕ್ಕ ಕಬ್ಬಣದ ರಾಡ್ ಚುಚ್ಚಿ ಸಾವು ಸಂಭವಿಸಿದೆ.
ಬೆಳಗಾವಿಯ ಹಲವು ಪ್ರಮುಖ ರಸ್ತೆಗಳಲ್ಲಿ ಡಿವೈಡರ್ ನಿರ್ಮಿಸಲು ಬಾರ್ ಬೆಂಡಿಂಗ್ ಮಾಡಲಾಗಿದ್ದು ತ್ವರಿತ ಗತಿಯಲ್ಲಿ ಈ ಬಾರ್ ಗಳ ಸುತ್ತಲು ಕಾಂಕ್ರೀಟ್ ಕಾಮಗಾರಿ ನಡೆಸದೇ ಅತ್ಯಂತ ಬೇಜವಾಬ್ದಾರಿಯಿಂದ ಗುತ್ತಿಗೆದಾರರು ಚೆಲ್ಲಾಟ ನಡೆಸಿದ್ದು ಇವರಿಗೆ ಲಗಾಮು ಹಾಕುವವರು ಯಾರು ? ಎನ್ನುವ ಪ್ರಶ್ನೆ ಈಗ ಬೆಳಗಾವಿ ಜನತೆಯನ್ನು ಕಾಡುತ್ತಿದೆ.
ಜಿಲ್ಲಾ ಉಸ್ತುವಾರಿ ಸಚಿವ ಗೋವೀಂದ್ ಕಾರಜೋಳ ಅವರು ಇಂದು ರವಿವಾರ ಮದ್ಯಾಹ್ನ ಬೆಳಗಾವಿಗೆ ಆಗಮಿಸಲಿದ್ದು ಸ್ಮಾರ್ಟ್ ಸಿಟಿ ಕಾಮಗಾರಿಗಳ ಪ್ರಗತಿ ಪರಶೀಲಿಸಿ ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸುವದು ಅತ್ಯಗತ್ಯವಾಗಿದೆ.