ಬೆಳಗಾವಿ: ಹಾವು ಕಂಡರೆ ಕೆಲವರು ಭಕ್ತಿ ಭಾವದಿಂದ ಕೈ ಮುಗಿಯುತ್ತಾರೆ. ಆದರೆ ಇನ್ನು ಕೆಲವರು ಭಯಭೀತರಾಗುತ್ತಾರೆ. ಹಾವುಗಳ ಬಗ್ಗೆ ಜನರಿಗೆ ಇರುವ ಭೀತಿ ನಿವಾರಣೆಗಾಗಿ ಮಾನವ ಬಂಧುತ್ವ ವೇದಿಕೆ ನಾಗರ ಪಂಚಮಿ ನಿಮಿತ್ಯ ಬೆಳಗಾವಿ ನಗರದಲ್ಲಿ ವಿಶೇಷ ಜನಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಬೆಳಗಾವಿ ನಗರದ ಗೋವಾವೇಸ್ ವೃತ್ತದಲ್ಲಿರುವ ಮಂಗಲ ಕಾರ್ಯಾಲಯವೊಂದರಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಉರಗ ಪ್ರೇಮಿ ಆನಂದ ಚಿಟ್ಟಿ ಅವರು ಹಲವು ಜಾತಿಯ ಹಾವುಗಳನ್ನು ಪ್ರದರ್ಶಿಸಿ ಹಾವುಗಳ ಬಗ್ಗೆ ಸಮಗ್ರವಾದ ಮಾಹಿತಿ ನೀಡಿದರು.
ಹಾವು ಪರಿಸರ ಸ್ನೇಹಿ, ರೈತ ಸ್ನೇಹಿಯಾಗಿದ್ದು, ಹಾವಿನ ಬಗ್ಗೆ ಭಯ ಪಡುವ ಅಗತ್ಯವಿಲ್ಲ. ಹಾವು ಎಂದಿಗೂ ಹಾಲು ಸೇವನೆ ಮಾಡುವುದಿಲ್ಲ. ಧರ್ಮದ ಹೆಸರಿನಲ್ಲಿ ಹಾವಿಗೆ ಹಾಲು ಎರೆಯುವುದು ಅಂಧ ಶೃದ್ಧೆ. ಹಾವಿಗೆ ಹಾಲು ಎರೆಯುವ ಬದಲು ಹಸಿದ ಹೊಟ್ಟೆಗಳಿಗೆ ಹಾಲುನಿಸಿ ಎಂದು ಹೇಳಿದರು.
ಒಂದು ಕಡೆ ಹಾವಿನ ಕುರಿತು ಜನರಲ್ಲಿರುವ ಅಂಧ ಶೃದ್ಧೆಯ ಬಗ್ಗೆ ಆನಂದ ಚಿಟ್ಟಿ ಉಪನ್ಯಾಸ ನೀಡುತ್ತಿದ್ದರೇ ಇನ್ನೊಂದೆಡೆ ಪ್ರದರ್ಶನಕ್ಕೆ ಇಡಲಾಗಿದ್ದ ಹಾವುಗಳನ್ನು ಕಂಡು ಜನ ನಾಗಪ್ಪನಿಗೆ ಕೈ ಮುಗಿದು ನಾಗ ಪಂಚಮಿಯ ಆಶಿರ್ವಾದ ಪಡೆಯುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.
ನಾಗರ ಪಂಚಮಿಯ ನಿಮಿತ್ಯ ನಡೆದ ಈ ಕಾರ್ಯಕ್ರಮವನ್ನು ಮಾಜಿ ಶಾಸಕ ಪರಶುರಾಮ ನಂದಿಹಳ್ಳಿ, ರಾಮ ಆಪ್ಟೆ ಉದ್ಘಾಟಿಸಿದರು. ಹಾವುಗಳ ಪ್ರದರ್ಶನ ನೋಡಲು ನಾಗಪ್ಪನ ಪ್ರತ್ಯಕ್ಷ ದರ್ಶನ ಮಾಡಲು ಜನ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.
Check Also
ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…
ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …