ಬೆಳಗಾವಿ ನಗರದ ಪ್ರತಿಷ್ಠಿತ
ಸಂಗೊಳ್ಳಿ ರಾಯಣ್ಣ ಅರ್ಬನ್ ಕೋ. ಸೊಸೈಟಿಗೆ ಆರ್ಥಿಕ ಮುಗ್ಗಟ್ಟು ಎದುರಾಗಿದೆ ಗ್ರಾಹಕರ ಠೇವಣಿ ಹಣವನ್ನು ಸೊಸೈಟಿ ಮರಳಿಸದೇ ಇರುವದರಿಂದ ಸೊಸೈಟಿಯ ಶಾಖೆಗಳ ಎದುರು ಗ್ರಾಹಕರು ಪರದಾಡುತ್ತಿದ್ದಾರೆ
ಠೇವಣಿದಾರ ಹಣ ಕೊಡಲಾಗದೆ
ಆಡಳಿತ ಮಂಡಳಿ ಮೌನಕ್ಕೆ ಶರಣಾಗಿರುವದರಿಂದ ಗ್ರಾಹಕರು ಕಂಗಾಲಾಗಿದ್ದಾರೆ
ಖ್ಯಾತ ನಿರ್ಮಾಪಕ ಆನಂದ ಅಪ್ಪುಗೊಳ ಒಡೆತನದ ಸೊಸೈಟಿ ಇದಾಗಿದ್ದು
ಬೆಳಗಾವಿ ಜಿಲ್ಲೆಯಲ್ಲಿ 50ಕ್ಕೂ ಹೆಚ್ಚು ಬ್ರಾಂಚ್ ಹೊಂದಿದೆ
ಮೂರ್ನಾಲ್ಕು ದಿನಗಳಿಂದ ಠೇವಣಿ ಹಣ ಸಿಗದೆ ಗ್ರಾಹಕರ ಪರದಾಟ ಶುರುವಾಗಿದ್ದು
ಕೆಲವು ಬ್ರ್ಯಾಂಚ್ ಗಳಲ್ಲಿ ಠೇವಣಿ ವಾಪಸ್ ಗಾಗಿ ಗ್ರಾಹಕರ ಗಲಾಟೆ ಮಾಡುತ್ತಿದ್ದಾರೆ
ಕಳೆದ 18 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಸೊಸೈಟಿ ಜಿಲ್ಲೆಯಾದ್ಯಂತ ಪ್ರಸಿದ್ಧಿ ಪಡೆದಿತ್ತು
ಸೊಸೈಟಿಯಲ್ಲಿ 300 ಕೋಟಿ ಹಣ ಠೇವಟಿ ಇಟ್ಟ ಗ್ರಾಹಕರು
ಗ್ರಾಹಕರಿಗೆ ಈ ಪೈಕಿ 150 ಕೋಟಿ ಹಣ ಪಾವತಿಸಿದ ಸೊಸೈಟಿ
150 ಕೋಟಿ ಠೇವಣಿ ಹಣ ಪಾವತಿಸಬೇಕಾಗಿದೆ
ಸಂಗೊಳ್ಳಿ ರಾಯಣ್ಣ ಅರ್ಬನ್ ಸೊಸೈಟಿ ಈಗ ಏಕಾಏಕಿ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ ಈ ಹಿಂದೆ ಇದೇ ರೀತಿಯ ಸಂಕಷ್ಟ ಎದುರಾಗಿದ್ದಾಗ ಸೊಸೈಟಿಯ ಸಂಸ್ಥಾಪಕ ಆನಂದ ಅಪ್ಪುಗೋಳ ಅವರು ಸಂಕಷ್ಟ ದೂರ ಮಾಡುವಲ್ಲಿ ಯಶಸ್ವಿ ಆಗಿದ್ದರು ಆದರೆ ಈ ಬಾರಿ ಸೊಸೈಟಿಯ ಎಲ್ಲ ಶಾಖೆಗಳಲ್ಲಿ ಎಲ್ಲ ಠೇವಣಿದಾರರು ಠೇವಣಿ ವಾಪಸ್ ಪಡೆಯಲು ಮುಗಿಬಿದ್ದಿರುವದರಿಂದ ಆಡಳಿತ ಮಂಡಳಿ ಪೇಚಿಗೆ ಸಿಲುಕಿದೆ