ಬ್ರಿಟಿಷ್ ಕಲೆಕ್ಟರ್ ಥ್ಯಾಖ್ರೆ ಸಮಾಧಿ ಎಲ್ಲಿದೆ ಗೊತ್ತಾ…??

ಬೆಳಗಾವಿ- ಸ್ವಾತಂತ್ರ್ಯ ಹೋರಾಟದ ಬೆಳ್ಳಿಚುಕ್ಕೆ ವೀರರಾಣಿ ಕಿತ್ತೂರು ಚನ್ನಮ್ಮಾಜಿ ನಿಮಗೇಕೆ ಕೊಡಬೇಕು ಕಪ್ಪಾ ಎಂದು ಬ್ರಿಟಿಷರ ವಿರುದ್ಧ 1824 ರಲ್ಲಿ ಸಮರ ಸಾರಿ ಬ್ರಿಟಿಷ್ ಕಲೆಕ್ಟರ್ ಥ್ಯಾಖ್ರೆಯ ರುಂಡ ಚೆಂಡಾಡಿ 200 ವರ್ಷ ಕಳೆದಿವೆ ಆದ್ರೆ ಬ್ರಿಟಿಷ್ ಕಲೆಕ್ಟರ್ ಆಗಿದ್ದ ಥ್ಯಾಖ್ರೆಯ ಸಮಾಧಿ ಇರೋದು ಎಲ್ಲಿ ಅನ್ನೋದು ವಿಶೇಷ ಈತನ ಸಮಾಧಿ ಇರುವದು ಪಕ್ಕದ ಧಾರವಾಡದಲ್ಲಿ

ಬ್ರಿಟಿಷ್ ಕಲೆಕ್ಟರ್ ಆಗಿದೆ ಸೆಂಟ್ ಜಾನ್ ಥ್ಯಾಖ್ರೆಯ ಸಮಾಧಿ ಧಾರವಾಡದ ಎಪಿಎಂಸಿ ಮಾರುಕಟ್ಟೆ ಪಕ್ಕದಲ್ಲಿರುವ ದನದ ಪೇಠೆಯ ಹತ್ತಿರವಿದೆ.ಈತನ ಸ್ಮಾರಕ ಧಾರವಾಡದ ಚನ್ನಮ್ಮ ಪಾರ್ಕನಲ್ಲಿ ಇದೆ.

ಈಸ್ಟ್ ಇಂಡಿಯಾ ಕಂಪನಿಯ ರಾಜಕೀಯ ಏಜಂಟ್ ಆಗಿದ್ದ ಸೇಂಟ್ ಜಾನ್ ಥ್ಯಾಖ್ರೆ ಬ್ರಿಟಿಷ್ ಕಲೆಕ್ಟರ್ ಆಗಿದ್ದ. ವೀರ ರಾಣಿ ಕಿತ್ತೂರು ಚನ್ನಮ್ಮ ಸಂಸ್ಥಾನವನ್ನು ವಶಪಡಿಸಿಕೊಳ್ಳಲು ಈ ಥ್ಯಾಖ್ರೆ ಸಂಸ್ಥಾನದ ವಿರುದ್ಧ ಮಾಡಿ ಆ ಯುದ್ಧದಲ್ಲಿ ಮರಣ ಹೊಂದಿದ್ದ ಆವಾಗ ಥ್ಯಾಖ್ರೆಯ ಮುಖ್ಯಾಲಯ ಧಾರವಾಡದಲ್ಲಿ ಇರುವದರಿಂದ ಆತನನ್ನು ಧಾರವಾಡದಲ್ಲೇ ಧಪನ್ ಮಾಡಲಾಗಿತ್ತು ಧಾರವಾಡದ ಚನ್ನಮ್ಮ ಪಾರ್ಕನಲ್ಲಿ ಈತನ ಸ್ಮಾರಕವೂ ಇದೆ.

ಥ್ಯಾಖ್ರೆಯ ಕುಟುಂಬಸ್ಥರೂ ಈಗಲೂ ಸಮಯ ಸಿಕ್ಕಾಗ ಧಾರವಾಡಕ್ಕೆ ಬರ್ತಾರೆ ಸಮಾಧಿಗೆ ನಮನ ಸಲ್ಲಿಸುತ್ತಾರೆ ಎನ್ನುವ ಮಾಹಿತಿ ಇದೆ.

Check Also

ಅನಾಹುತ ಮಳೆಗೆ ಗೋಡೆ ಕುಸಿದು ಮಹಿಳೆ ಸಾವು

ಗೋಕಾಕ: ಗೋಕಾಕದ ಸಂಗಮ ನಗರದ ಫರೀದಾ ಎಂಬ ಮಹಿಳೆ ಗೋಡೆ ಕುಸಿದ ಪರಿಣಾಮ ಮೃತಪಟ್ಟಿದ್ದಾರೆ. ಇವರು ತಮ್ಮ ಮಗ ರಿಯಾಜ್ …

Leave a Reply

Your email address will not be published. Required fields are marked *