ಬೆಳಗಾವಿ-ಪೈಲಟ್ ಸಮಯ ಪ್ರಜ್ಞೆಯಿಂದ 48ಜನ ಪ್ರಯಾಣಿಕರ ಪ್ರಾಣ ಉಳಿದಿದೆ. ಬೆಳಗಾವಿಯಿಂದ ಮುಂಬೈಗೆ ಹೊರಟ್ಟಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಎದುರಾಗಿ, ಇಂಜಿನ್ ನಲ್ಲಿ ತಾಂತ್ರಿಕ ದೋಷ ಕಾಣ್ತಿದ್ದಂತೆ ಹದಿನೈದೇ ನಿಮಿಷದಲ್ಲಿ ಪೈಲೇಟ್ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ ಲ್ಯಾಂಡಿಂಗ್ ಮಾಡಿದ ಘಟನೆ ನಡೆದಿದೆ.
ಮಧ್ಯಾಹ್ನ 2.30ಕ್ಕೆ ಮತ್ತೊಂದು ವಿಮಾನದ ವ್ಯವಸ್ಥೆ ಮಾಡಿದ ಸ್ಟಾರ್ ಏರ್ ಕಂಪನಿ ಪ್ರಯಾಣಿಕರನ್ನು ಮುಂಬಯಿ ಗೆ ರವಾನಿಸಿದೆ.
ಬೆಂಗಳೂರಿನಿಂದ ಬೆಳಗಾವಿಗೆ ಬರುತ್ತಿರುವ ವಿಮಾನದ,ಇಂಜಿನ್ ನಲ್ಲಿ ತಾಂತ್ರಿಕ ದೋಷ ಆಗಿರುವ ಕುರಿತು ಮಾಹಿತಿ ಪಡೆಯುತ್ತಿರುವ ವಿಮಾನಯಾನ ಸಂಸ್ಥೆ ,ಈಗಾಗಲೇ ಇಂಜಿನಿಯರ್ ಅವರಿಂದ ತುರ್ತು ಭೂಸ್ಪರ್ಶ ಆದ ವಿಮಾನ ಪರಿಶೀಲನೆ ಮಾಡಲಾಗುತ್ತಿದೆ.