ಬೆಳಗಾವಿ-ಬೆಳಗಾವಿ ನಗರದಲ್ಲಿ ಕಂತ್ರೀ ನಾಯಿಗಳ ಹಾವಳಿ ಹೆಚ್ಚಾಗಿದೆ ಎಲ್ಲಿ ನೋಡಿದಲ್ಲಿ ಬೀದಿ ನಾಯಿಗಳ ಹಿಂಡು ನೋಡಲು ಸಿಗುತ್ತಿದ್ದು ಕಂತ್ರೀ ನಾಯಿಗಳ ಬೌವ್..ಬೌವ್ ಚಳವಳಿಯಿಂದ ಬೆಳಗಾವಿ ನಗರ ನಿವಾಸಿಗಳ ನಿದ್ದೆ ಹಾರಿ ಹೋಗಿದೆ
ಬೀದಿ ನಾಯಿಗಳ ಉಪಟಳದಿಂದಾಗಿ ನಗರದ ಜನ ಬೆಸತ್ತು ಹೋಗಿದ್ದು ಈ ಕಂತ್ರಿ ನಾಯಿಗಳನ್ನು ಕಂಟ್ರೋಲ್ ಮಾಡುವರ್ಯಾರು ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ
ಜಿಲ್ಲಾಧಿಕಾರಿಗಳ ಕಚೇರಿ ಆವರಣ ಕೋರ್ಟ ಕಂಪೌಂಡ್,ನಲ್ಲಿ ನಾಯಿಗಳ ಹಿಂಡೇ ಬೀಡು ಬಿಟ್ಟದೆ ಜತೆಗೆ ನಗರದ ಹರ ವಲಯದಲ್ಲಿ ಬೀದಿ ನಾಯಿಗಳ ಹಾವಳಿಯಿಂದ ಮಕ್ಕಳು ಮನೆ ಬಿಟ್ಟು ಹೊರಗೆ ಬಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ
ಬೆಳಗಾವಿ ಮಹಾನಗರ ಪಾಲಿಕೆ ಪ್ರತಿ ವರ್ಷ ನಾಯಿಗಳ ಸಂತಾನ ಹರಣ ಚಿಕಿತ್ಸೆಗಾಗಿ 50 ಲಕ್ಷ ಖರ್ಚು ಮಾಡುತ್ತಿದೆ ಆದರೂ ಕೂಡಾ ನಾಯಿಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ ಬಹುಶ ಆಪರೇಶನ್ ಫೇಲ್ ಆಗುತ್ತಿದೆಯೇ ಎನ್ನುವ ಅನುಮಾನ ಮೂಡುತ್ತಿದೆ
ಈ ಕುರಿತು ಬೆಳಗಾವಿ ಪಾಲಿಕೆ ಕ್ರಮ ಕೈಗೊಂಡು ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸಬೇಕಾಗಿದೆ
Check Also
ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…
ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …