ಎತ್ತುಗಳ ಭಾರ ಇಳಿಸುವ
ಸಾಧನ ಸಂಶೋಧನೆಯ
ಮೂಲ ಇಲ್ಲಿದೆ!ಮಹಾರಾಷ್ಟ್ರದ
ಈ ಸಂಶೋಧಕರಿಗೆ ಪ್ರಶಂಸೆಯ
ಅಭಿನಂದನೆಗಳ ಮಹಾಪೂರ!
ಕಳೆದ ಕೆಲವು ದಿನಗಳಿಂದ
ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ
ಹರಿದಾಡುತ್ತಿದೆ.ಚಕ್ಕಡಿಗಳಲ್ಲಿ ತುಂಬಲಾಗುವ
ಮಿತಿಮೀರಿದ ಭಾರವನ್ನು ಎಳೆಯುವ
ಎರಡು ಎತ್ತುಗಳ ಭಾರವನ್ನು ಕಡಿಮೆ
ಮಾಡಬಹುದಾದ ಚಕ್ರವೊಂದನ್ನು
ನೊಗದ ಮುಂಭಾಗಕ್ಕೆ ಜೋಡಿಸಲಾಗಿದೆ.
ಇದರಿಂದ ಎತ್ತುಗಳ ಮೇಲಿನ ಭಾರ
ಕಡಿಮೆಯಾಗುತ್ತದೆ.ಈ ಸಾಧನವನ್ನು
ಸಂಶೋಧಿಸಿದ್ದು ಮಹಾರಾಷ್ಟ್ರದ
ಇಸ್ಲಾಮಪುರದಲ್ಲಿ.ಮಹಾರಾಷ್ಟ್ರದಲ್ಲಿ
ಸುಮಾರು 200 ಸಕ್ಕರೆ ಕಾರ್ಖಾನೆಗಳಿವೆ.
ಇವುಗಳಿಗೆ ಕಬ್ಬು ಪೂರೈಸುವ
ರೈತರು ಚಕ್ಕಡಿಯ ತುಂಬ ಕಬ್ಬು
ತುಂಬುತ್ತಾರೆ.ಇದನ್ನು ಎಳೆದೊಯ್ಯುವ
ಎತ್ತುಗಳು ಹೈರಾಣಾಗುತ್ತವೆ.ಎತ್ತುಗಳ
ಭಾರ ಕಡಿಮೆ ಮಾಡಬೇಕೆಂದು
ಸಂಶೋಧನೆಗೆ ಕೈಹಾಕಿದ
ಇಂಜನಿಯರ್ ಗಳ ತಂಡವೊಂದು
ಕೊನೆಗೂ ಯಶಸ್ವಿಯಾಗಿದೆ.ಇದರ
ಪೆಟೆಂಟ್ ಗೂ ಅರ್ಜಿ ಹಾಕಲಾಗಿದೆ.
ಈ ಸಂಶೋಧನೆಯು ಗ್ರಾಮೀಣ
ಭಾಗದಲ್ಲಿ ಹೊಸ ಆಶಾಭಾವನೆಗೆ
ಕಾರಣವಾಗಿದ್ದು ರೈತರು ಸಂಶೋಧನೆಯನ್ನು
ತಮ್ಮ ಚಕ್ಕಡಿಗಳಿಗೆ ಅಳವಡಿಸಿಕೊಳ್ಳುವಲ್ಲಿ ಯಾವದೇ ಸಂದೇಹವಿಲ್ಲ.
ಅಶೋಕ ಚಂದರಗಿ
ಬೆಳಗಾವಿ 9620114466