ಬೆಳಗಾವಿ- ಬೆಳಗಾವಿಯಲ್ಲಿ ಚಿರತೆ ಶೋಧ ಕಾರ್ಯಾಚರಣೆ 25 ನೇಯ ದಿನಕ್ಕೆ ಕಾಲಿಟ್ಡಿದೆ,ಬೆಳಗಾವಿಗರು ಚಿರತೆ ಪೋಟೋ ಹಾಕಿ,ಅದರ ಮೇಲೆ ಹ್ಯಾಪಿ ಸಂಡೇ,ಗುಡ್ ಮಾರ್ನಿಂಗ್,ಸಂಡೇ ಇಸ್ ಹಾಲಿಡೇ ಅಂತಾ ಬರೆದಿರುವ ಚಿತ್ರಗಳನ್ನು ಸೋಶಿಯಲ್ ಮಿಡಿಯಾ ದಲ್ಲಿ ಹರಿಬಿಡುತ್ತಿದ್ದಾರೆ.
ಬೆಳಗಾವಿಯಲ್ಲಿ ಮನೆ ಮಾಡಿರುವ ಚಿರತೆ ಕುರಿತು,ಒಂದು ಕಡೆ ಚಿತ್ರ,ವಿಚಿತ್ರವಾದ ಟ್ರೋಲ್ ನಡೆಯುತ್ತಿದ್ದರೆ,ಇನ್ನೊಂದು ಕಡೆ ಚಿರತೆ ಶೋಧಕ್ಕಾಗಿ ನಿರಂತರವಾಗಿ ಕಾರ್ಯಾಚರಣೆ ನಡೆಯುತ್ತಿದೆ.ಇವತ್ತು ಭಾನುವಾರ ದೊಡ್ಡ ಪ್ರಮಾಣದ ಕಾರ್ಯಾಚರಣೆ ನಡೆಯುತ್ತಿಲ್ಲ.ಇವತ್ತು ಕೇವಲ 80 ಜನ ಅರಣ್ಯ ಇಲಾಖೆಯ ಸಿಬ್ಬಂಧಿಗಳು ಬೆಳಗಾವಿ ಗಾಲ್ಫ್ ಮೈದಾನದಲ್ಲಿ ಸರ್ಚಿಂಗ್ ನಡೆಸಿದ್ದಾರೆ.
ಇವತ್ತು ಬೆಳಗಾವಿ ಚಿರತೆಗೆ ಸಂಡೇ ಹಾಲಿಡೇ ಆದಂತಾಗಿದೆ.ಕಾರ್ಯಾಚರಣೆಯ ಅಬ್ಬರವೂ ಸ್ಥಬ್ಧವಾಗಿದೆ.ಪೋಲೀಸ್ ಸಿಬ್ಬಂಧಿಗಳು ಗಾಲ್ಫ್ ಮೈದಾನದ ಸುತ್ತುವರೆದು ಕಾವಲು ಕಾಯುತ್ತಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ