Breaking News
Home / Breaking News / ನಾವು ಪೋಲಿಸ್ರು ಎಂದು ಹೆದರಿಸಿ 4.79 ಲಕ್ಷರೂ ಲೂಟಿ ಮಾಡಿದ್ದ, ನಕಲಿ ಪತ್ರಕರ್ತರು ಅರೆಸ್ಟ್..

ನಾವು ಪೋಲಿಸ್ರು ಎಂದು ಹೆದರಿಸಿ 4.79 ಲಕ್ಷರೂ ಲೂಟಿ ಮಾಡಿದ್ದ, ನಕಲಿ ಪತ್ರಕರ್ತರು ಅರೆಸ್ಟ್..

ಪೊಲೀಸರು ಪತ್ರಕರ್ತರೆಂದು ನಂಬಿಸಿ 4.79 ಲಕ್ಷ ಹಣದೊಂದಿಗೆ ಫರಾರಿಯಾಗಿದ್ದ 5 ನಕಲಿ ಪೊಲೀಸರು, ಪತ್ರಕರ್ತರ ಬಂಧನ : ಕಿತ್ತೂರ ಪೊಲೀಸ ಕಾರ್ಯಾಚರಣೆ

ಬೆಳಗಾವಿ, ಆ, 27: ನಾವು ಪೊಲೀಸರು ನಿಮ್ಮ ಕಾರಿನಲ್ಲಿ ಗಾಂಜಾ ಇದೆ, ಕಾರು ತಪಾಸಣೆ ಮಾಡಬೇಕು ಎಂದು ನಂಬಿಕೆ ಮೋಸ ಮಾಡಿ ಕಾರು ಸಮೇತ ಲಕ್ಷಾಂತರ ಹಣದೊಂದಿಗೆ ಫರಾರಿಯಾಗಿದ್ದ ನಾಲ್ಬರು ನಕಲಿ ಪೊಲೀಸರನ್ನು ಬಂಧಿಸುವಲ್ಲಿ ಜಿಲ್ಲೆಯ ಕಿತ್ತೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ದಿ. 19ರಂದು ಬೆಳಿಗ್ಗೆ ಮುಂಜಾನೆ 9.13ಕ್ಕೆ ಐವರು ನಕಲಿ ಪೊಲೀಸರು ಹಾಗೂ ಪತ್ರಕರ್ತರು ಬೆಳಗಾವಿಯ ರಾಮತೀರ್ಥ ನಗರದ ಅತಾವುಲ್ಲಾ ಮಹ್ಮದಹಯಾತ್ ಹೊನಗೇಕರ ಅವರು ಸಂಚರಿಸುತ್ತಿದ್ದ ಸಂದರ್ಭದಲ್ಲಿ ಐವರು ತಾವು ಪೊಲೀಸರು ಹಾಗೂ ಪತ್ರಕರ್ತರು ಎಂದು ಹೇಳಿ ನಿಮ್ಮ ಕಾರಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಇದೆ ಎಂದು ಹೆದರಿಸಿ ಕಿತ್ತೂರು ಠಾಣೆಗೆ ಬನ್ನಿ ಎಂದು ಹೇಳಿ 4 ಲಕ್ಷ 79 ಸಾವಿರ 250 ರೂಗಳನ್ನು ದೋಚಿ ಫರಾರಿಯಾಗಿದ್ದರು.

ಈ ಕುರಿತು ಬೆಳಗಾವಿಯ ಮಹ್ಮದಹಯಾತ್ ಅವರು ಕಿತ್ತೂರು ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ತನಿಖೆಯನ್ನು ಕೈಕೊಂಡಿದ್ದ ಪೊಲೀಸರು ಬೈಲಹೊಂಗಲ ಡಿಎಸ್ ಪಿ ಶಿವಾನಂದ ಕಟಗಿ ಅವರ ಮಾರ್ಗದರ್ಶನದಲ್ಲಿ ಕಿತ್ತೂರ ವೃತ್ತ ನಿರೀಕ್ಷಕ ಮಹಾಂತೇಶ ಹೊಸಪೇಟೆ ಮತ್ತು ಹನಮಂತ ಎಲ್ ಧರ್ಮಟ್ಟಿ ಪಿ.ಎಸ್.ಐ (ಕಾ.ಸು), ಕೆ.ಎಂ.ಕಲ್ಲೂರ ಪಿ.ಎಸ್.ಐ (ತ.ವಿ) ಕಿತ್ತೂರ, ಪ್ರವೀಣ ಕೋಲಿ ಪಿಎಸ್‌ಐ ದೊಡವಾಡ ಅವರ ತಂಡದ ಸಿಬ್ಬಂದಿಯವರು ಆರೋಪಿತರನ್ನು ಬಂಧಿಸಿದ್ದಾರೆ.

ಬಂಧಿತರಿಂದ 70,000 ರೂಪಾಯಿಯನ್ನು ಹಾಗೂ ಕೃತ್ಯಕ್ಕೆ ಬಳಸಿದ ಇಂಡಿಕಾ ಕಾರ ಗಾಡಿ ನಂ ಕೆ.ಎ-22/ಪಿ- 5752 ಮತ್ತು ಎರಡು ಮೋಟರ್ ಸೈಕಲ್ಲಗಳು ಹಾಗೂ ಆರೋಪಿಗಳಿಂದ ನಕಲಿ ಪ್ರೆಸ್ ಗುರುತಿನ ಚೀಟಿಯನ್ನು ವಶಪಡಿಸಿಕೊಂಡಿದ್ದಾರೆ.

ಈ ಪ್ರಕರಣ ಪತ್ತೆ ಮಾಡಲು ಕಿತ್ತೂರ ಪೊಲೀಸ್ ಠಾಣೆಯ ಸಿಬ್ಬಂದಿಯವರಾದ ಎ.ಆರ್.ಭಾವನವರ ಎ.ಎಸ್.ಐ.
ಜಿ.ಜಿ.ಹಂಪಣ್ಣವರ ಎ.ಎಸ್.ಐ. ಟಿ.ವಿ.ಸೋಮನು ಎ.ಎಸ್.ಐ. ಎನ್.ಎ.ಚಂದರಗಿ, ಆರ್.ಎಸ್.ಶೀಲ,
ಡಿ.ಎಮ್.ದರಗಾದ, ಎಮ್.ಎಮ್.ದ್ಯಾಮನಗೌಡರ, ಎಲ್.ಎಫ್. ಜಂಬಲವಾಡಿ, ಎಸ್.ಎ.ದಫೇದಾರ,
ಆರ್.ಎಸ್.ತೇಲ ಚಿ.ಎ.ಅಗಸಿಮನಿ, ಏ.ಐ.ಹಡಪದ, ಕೆ.ಎಸ್.ಮಧುರ,
ಎಸ್.ಎಚ್.ಹಾದಿಮನಿ, ಕೃಷ್ಣಾ ಭಜಂತ್ರಿ, ಅಧಿಕಾರಿ ಮತ್ತು ಸಿಬ್ಬಂದಿ ಅವರನ್ನು ಆರಕ್ಷಕ ಅಧೀಕ್ಷಕ ಸಂಜೀವ ಪಾಟೀಲ ಅವರು ಅಭಿನಂದಿಸಿದ್ದಾರೆ.

Check Also

ಜಗದೀಶ್ ಶೆಟ್ಟರ್ ಕುವೆಂಪು ನಗರಕ್ಕೆ ಹೋಗಿದ್ದು ಯಾಕೆ ಗೊತ್ತಾ.??

ಬೆಳಗಾವಿ-ಬೆಳಗಾವಿ ನಗರದಲ್ಲಿ ಬೆಳಗಿನ ಜಾವ ಕೋಳಿ ಕೂಗುವ ಮುನ್ನ ನಗರದಲ್ಲಿ ಜಗದೀಶ್ ಶೆಟ್ಟರ್ ಅವರ ಅವಾಜ್ ಕೇಳುತ್ತಿದೆ.ತಪ್ಪದೇ ದಿನನಿತ್ಯ ಚಹಾ …

Leave a Reply

Your email address will not be published. Required fields are marked *