ಬೆಳಗಾವಿ-ಪೊಲೀಸ್ ಠಾಣೆಗೆ ಆವರಣಕ್ಕೆ ನುಗ್ಗಿ ಬೆಂಕಿ ಹಚ್ಚಿದವರು ದೇಶದ್ರೋಹಿಗಳು ಎಂದು ಬೆಂಗಳೂರಿನ ಗಲಬೆ ಕುರಿತು,ಬೆಳಗಾವಿಯಲ್ಲಿ ಕೇಂದ್ರ ಸಚಿವ ಸುರೇಶ್ ಅಂಗಡಿ ಹೇಳಿಕೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಬೆಂಗಳೂರಿನ ಡಿ.ಜೆ.ಹಳ್ಳಿಯಲ್ಲಿ ನಡೆದ ಘಟನೆ ಅತ್ಯಂತ ಖಂಡನೀಯವಾಗಿದೆ.ಇಂದು ಇಡೀ ಜಗತ್ತು ಭಾರತದತ್ತ ಮುಖ ಮಾಡಿ ನೋಡುತ್ತಿದೆ,
ದೇಶದಲ್ಲಿ ಕೊರೊನಾ ಮಹಾಮಾರಿ ಇದ್ದು ಶಾಂತತೆ ಕಾಪಾಡಬೇಕು, ದೇಶದ ಆರ್ಥಿಕತೆ ಸುಧಾರಿಸಲು ಪ್ರಧಾನಿ ಕೆಲಸ ಮಾಡುವ ವೇಳೆ ಕೆಲವು ದುಷ್ಟ ಶಕ್ತಿ ದೇಶದ್ರೋಹಿಗಳ ಷಡ್ಯಂತ್ರ ಇದಾಗಿದೆ ಎಂದು ಸುರೇಶ್ ಅಂಗಡಿ ಕಿಡಿಕಾರಿದ್ದಾರೆ.
ಸಿಎಂ ಬಿಎಸ್‌ವೈ, ಗೃಹ ಸಚಿವ ಬೊಮ್ಮಾಯಿ ಕಾನೂನು ಕಾಪಾಡುವ ಕೆಲಸ ಮಾಡ್ತಿದಾರೆ,
ಬಿಜೆಪಿ ಆಡಳಿತ ಕೆಡಿಸಿ ಕೆಟ್ಟ ಹೆಸರು ತರಲು ಕೆಲವರಿಂದ ವ್ಯವಸ್ಥಿತ ಷಡ್ಯಂತ್ರ ನಡೆದಿದೆ.ಬೆಂಗಳೂರಿನಲ್ಲಿ ಗಲಬೆ ಮಾಡಿದವರು ದೇಶದ್ರೋಹಿಗಳು ಎಂದರು.
ಪೊಲೀಸ್ ಠಾಣೆ, ಆಸ್ಪತ್ರೆ ಮೇಲೆ ಬೆಂಕಿ ಹಚ್ಚಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ವಾರಿಯರ್ ರೀತಿ ಕೆಲಸ ಮಾಡುವ ಮಾಧ್ಯಮಗಳ ಮೇಲೆ ಹಲ್ಲೆ ಮಾಡಿದವರು ದೇಶದ್ರೋಹಿಗಳು, ಸುವರ್ಣನ್ಯೂಸ್ ಇರಲಿ ಬೇರೆ ಮಾಧ್ಯಮ ಇರಲಿ ಅವರ ಮೇಲೆ ಹಲ್ಲೆ ಖಂಡನೀಯ, ಕಾನೂನು ಕೈಯಲ್ಲಿ ತಗೆದುಕೊಂಡು ವ್ಯವಸ್ಥಿತವಾಗಿ ಷಡ್ಯಂತ್ರ ಮಾಡ್ತಿದಾರೆ ಅನಿಸುತ್ತೆ ಎಂದು ಬೆಳಗಾವಿಯಲ್ಲಿ ರೇಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಹೇಳಿದರು.