Home / Breaking News / ಅಂಜಲಿ ನಿಂಬಾಳ್ಕರ್ ಕ್ಷಮೆಯಾಚಿಸಲಿ- ಕರವೇ

ಅಂಜಲಿ ನಿಂಬಾಳ್ಕರ್ ಕ್ಷಮೆಯಾಚಿಸಲಿ- ಕರವೇ

ಖಾನಾಪೂರ ಕ್ಷೇತ್ರದ ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ಮನಗುತ್ತಿ ಘಟನೆಯ ವಾಸ್ತವತೆಯನ್ನು ತಿಳಿದುಕೊಳ್ಳದೇ ಕರ್ನಾಟಕ ಸರ್ಕಾರದ ವಿರುದ್ಧ ಟ್ವೀಟ್ ಮಾಡುವ ಮೂಲಕ ಕನ್ನಡಿಗರಿಗೆ ಅವಮಾನ ಮಾಡಿದ್ದಾರೆಂದು ಕರ್ನಾಟಕ ರಕ್ಷಣಾ ವೇದಿಕೆಯ ಬೆಳಗಾವಿ ಜಿಲ್ಲಾ ಘಟಕ ಆರೋಪಿಸಿದೆ.

ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಅವರು ಪತ್ರಿಕಾ ಪ್ರಕಟಣೆ ಹೊರಡಿಸಿ ಶಾಸಕಿ ಅಂಜಲಿ ನಿಂಬಾಳ್ಕರ್ ಟ್ವೀಟ್ ಮಾಡಿದ್ದನ್ನು ಖಂಡಿಸಿದ್ದಾರೆ.

ಅಂಜಲಿ ನಿಂಬಾಳ್ಕರ್ ಒಬ್ಬ ಶಾಸಕಿಯಾಗಿ ಮನಗುತ್ತಿಯ ಘಟನೆಯ ಕುರಿತು ಸಮಗ್ರ ಮಾಹಿತಿ ಪಡೆದುಕೊಂಡು ಟ್ವೀಟ್ ಮಾಡಬೇಕಿತ್ತು ಮನಗುತ್ತಿಯಲ್ಲಿ ಸರ್ಕಾರದಿಂದದಾಗಲಿ,ಜಿಲ್ಲಾಡಳಿತದಿಂದಾಗಲಿ,ಅಥವಾ ಕನ್ನಡಿಗರಿಂದಾಗಲಿ ಶಿವಾಜಿ ಮೂರ್ತಿಗೆ ಅವಮಾನವಾಗಿಲ್ಲ,ಮೂರ್ತಿ ಪ್ರತಿಷ್ಠಾಪನೆ ಮಾಡಿದವರೇ ಮೂರ್ತಿಯನ್ನು ತೆರವು ಮಾಡಿದ್ದು,ಅಂಜಲಿ ನಿಂಬಾಳ್ಕರ್ ಅವರು ಕರ್ನಾಟಕ ಸರ್ಕಾರ ಕ್ಷಮೆಯಾಚಿಸಬೇಕೆಂದು ಟ್ವೀಟ್ ಮಾಡಿ ಮಹಾರಾಷ್ಟ್ರ ಸರ್ಕಾರದ ಪರವಾಗಿ ವಕಾಲತ್ತು ವಹಿಸಿ ಕನ್ನಡದ ನೆಲಕ್ಕೆ ದ್ರೋಹ ಮಾಡಿದ್ದಾರೆ ಎಂದು ದೀಪಕ ಗುಡಗನಟ್ಟಿ ಆಕ್ರೋಶ ವ್ಯೆಕ್ತಪಡಿಸಿದ್ದಾರೆ.

ಅಂಜಲಿ ನಿಂಬಾಳ್ಕರ್ ಅವರು ಮಹಾರಾಷ್ಟ್ರ ಸರ್ಕಾರವನ್ನು ಓಲೈಸಲು ಕರ್ನಾಟಕ ಸರ್ಕಾರದ ವಿರುದ್ಧ ಟ್ವೀಟ್ ಮಾಡಿ ಕನ್ನಡಿಗರನ್ನು ಅವಮಾನಿಸಿದ್ದು ಅಂಜಲಿ ನಿಂಬಾಳ್ಕರ್ ಬಹಿರಂಗವಾಗಿ ಕ್ಷಮೆ ಯಾಚಿಸದಿದ್ದರೆ ಅವರ ವಿರುದ್ಧ ಜಿಲ್ಲೆಯಾದ್ಯಂತ ಹೋರಾಟ ಮಾಡುವದಾಗಿ ಕರವೇ ಎಚ್ಚರಿಕೆ ನೀಡಿದೆ.

Check Also

ಬೆಳಗಾವಿಯಲ್ಲಿ ಗಾಂಜಾ,,,ಮಾಂಜಾ…ಮಟಕಾ ದಂಧೆಗೆ ಮಹಾ ಬ್ರೇಕ್….!

ಬೆಳಗಾವಿ- ಡಿಸಿಪಿ ವಿಕ್ರಮ್ ಅಮಟೆ ಅವರು ಬೆಳಗಾವಿಗೆ ಬಂದ ಬಳಿಕ,ನಗರದಲ್ಲಿ ಪೋಲೀಸ್ ಖದರ್ ಕಾಣಿಸುತ್ತಿದೆ. ಬೆಳಗಾವಿ ಮಹಾನಗರ ಮತ್ತು ಜಿಲ್ಲೆಯಾದ್ಯಂತ …

Leave a Reply

Your email address will not be published. Required fields are marked *