ಬೆಳಗಾವಿ-ಕೇಂದ್ರ ಸಚಿವ ಸುರೇಶ ಅಂಗಡಿ ಅವರ ಅಕಾಲಿಕ ಮರಣದಿಂದ ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ ಉಪ ಚುನಾವಣೆ ನಡೆಲಿದೆ.
ಸುರೇಶ್ ಅಂಗಡಿ ಅವರ ನಿಧನದ ಬಳಿಕ ಬೆಳಗಾವಿ ಜಿಲ್ಲಾ ರಾಜಕಾರಣ ಚುರುಕುಗೊಂಡಿದೆ.ಆಕಾಂಕ್ಷಿಗಳ ಸಂಖ್ಯೆಯೂ ಅಗಣಿತ,ಆದರೆ ಯಾರೊಬ್ಬರೂ ಟಿಕೆಟ್ ನನಗೆ ಬೇಕು,ನನಗೆ ಕೊಡಿ ಎಂದು ಕೇಳುತ್ತಿಲ್ಲ,ಎಲ್ಲ ಆಕಾಂಕ್ಷಿಗಳು ಗಪ್ ಚುಪ್ ಲಾಭಿ ನಡೆಸಿರುವದು ಸತ್ಯ.
ಇಂದು ಬಿಜೆಪಿ ರಾಜ್ಯಾದ್ಯಕ್ಷ ನಳೀನ್ ಕುಮಾರ್ ಕಟೀಲು ಬೆಳಗಾವಿಗೆ ಬಂದಿದ್ರು,ಸುರೇಶ ಅಂಗಡಿ ಅವರ ಮನೆಗೆ ಹೋಗಿ,ಸಾಂತ್ವನ ಹೇಳಿ ಸರ್ಕ್ಯುಟ್ ಹೌಸ್ ಗೆ ಮರಳುತ್ತಿದ್ದಂತೆಯೇ ಆಕಾಂಕ್ಷಿಗಳ ಆಟ ಶುರುವಾಯಿತು
ಒಬ್ಬೊಬ್ಬರಾಗಿ ಬಿಜೆಪಿ ಅದ್ಯಕ್ಷರನ್ನು ಭೇಟಿಯಾದ ಆಕಾಂಕ್ಷಿಗಳು ,ಸುರೇಶ್ ಅಂಗಡಿ ಅವರ ಕುಟುಂಬದವರು ಉಪ ಚುನಾವಣೆ ಎದುರಿಸಲು ಸಿದ್ಧವಾಗಿದ್ದರೆ ಅವರಿಗೇ ಟಿಕೆಟ್ ಕೊಡಿ ಅವರು ಇಲ್ಲಾ ಅಂದ್ರೆ ನನಗೆ ಟಿಕೆಟ್ ಕೊಡಿ,ನಾವು ಇಲೆಕ್ಷನ್ ನಿಲ್ಲೋದಕ್ಕೆ ರೆಡಿ, ಎಂದು ಮನವಿ ಮಾಡಿಕೊಂಡಿದ್ದಾರೆ.
ಇನ್ನೊಂದು ಮಹತ್ವದ ಬೆಳವಣಿಗೆ ಕೂಡಾ ಇವತ್ತೇ ನಡೆದಿದೆ,ಬಿಜೆಪಿ ರಾಜ್ಯಾದ್ಯಕ್ಷ ನಳೀನ್ ಕುಮಾರ್ ಕಟೀಲು ಸುರೇಶ್ ಅಂಗಡಿ ಅವರ ಮನೆಗೆ ಸಾಂತ್ವನ ಹೇಳಲು ಹೋದ ಸಂಧರ್ಭದಲ್ಲೇ,ಸುರೇಶ ಅಂಗಡಿ ಅವರ ಮಾವ ಲಿಂಗರಾಜ್ ಪಾಟೀಲ ಬಿಜೆಪಿ ಟಿಕೆಟ್ ಸುರೇಶ್ ಅಂಗಡಿ ಅವರ ಕುಟುಂಬದವರಿಗೆ ಕೊಡಬೇಕು ಎನ್ನುವ ಬೇಡಿಕೆ ಇಟ್ಟಿದ್ದು,ವಿಶೇಷವಾಗಿದೆ.
ಬಿಜೆಪಿ ಅದ್ಯಕ್ಷ ನಳೀನ್ ಕುಮಾರ್ ಕಟೀಲು ಇಂದು ಬೆಳಗಾವಿಯ ಸರ್ಕ್ಯುಟ್ ಹೌಸ್ ನಲ್ಲಿ ಬೆಳಗಾವಿ ಬಿಜೆಪಿ ನಾಯಕರ ಜೊತೆ ಮಹತ್ವದ ಚರ್ಚೆ ನಡೆಸಿದ್ದಾರೆ.ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ,ಮಾಜಿ ಶಾಸಕ ಸಂಜಯ ಪಾಟೀಲ ಸೇರಿದಂತೆ ಇನ್ನಿತರ ಬಿಜೆಪಿ ಪ್ರಮುಖ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು
ಬೆಳಗಾವಿ ಲೋಕಸಭಾ ಮತಕ್ಷೇತ್ರದ ಉಪ ಚುನಾವಣೆಯಲ್ಲಿ ಸುರೇಶ್ ಅಂಗಡಿ ಕುಟುಂಬದವರಿಗೆ ಟಿಕೆಟ್ ಕೊಡಿ ಎನ್ನುವ ಒಮ್ಮತದ ಕೂಗು ಕೇಳಿ ಬಂದಿದೆ,ಆದ್ರೆ ಬಿಜೆಪಿ ಹೈಕಮಾಂಡ್ ಯಾವ ನಿರ್ಧಾರ ಕೈಗೊಳ್ಳುತ್ತದೆ ಎನ್ನುವದನ್ನು ಉಹೆ ಮಾಡಲು ಸಾಧ್ಯವಿಲ್ಲ.