ಮೋಹನ್ ಮೋರೆಯಿಂದ ಯು ಟರ್ನ…ಸುರೇಶ ಅಂಗಡಿ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆ
ಬೆಳಗಾವಿ- ನಾಮಪತ್ರ ವಾಪಸ್ ಪಡೆದಿರುವ ಮೋಹನ್ ಮೋರೆ ಯು ಟರ್ನ ಪಡೆದು ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿ ಅವರನ್ನು ಬೆಂಬಲಿಸಿ ಬಿಜೆಪಿ ಸೇರ್ಪಡೆಯಾಗಿದ್ದಾರೆ
ಸುರೇಶ ಅಂಗಡಿ ಅವರ ಗೃಹ ಕಚೇರಿಯಲ್ಲಿ ಮೋಹನ್ ಮೋರೆ ತಮ್ಮ ಬೆಂಬಲಿಗರೊಂದಿಗೆ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾದರು
ಈ ಸಂಧರ್ಭದಲ್ಲಿ ಮಾತನಾಡಿದ ಸುರೇಶ ಅಂಗಡಿ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ತಮಗೆ ಅಭೂತಪೂರ್ವ ಬೆಂಬಲ ವ್ಯೆಕ್ತವಾಗುತ್ತಿದ್ದು ಹಲವಾರು ಜನ ನಾಯಕರು ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ ಎಂದು ಸಂತಸ ವ್ಯೆಕ್ತ ಪಡಿಸಿದರು
ಬಿಜೆಪಿ ಬೆಂಬಲಿಸಿದ ೬ ಜನ ಪಕ್ಷೇತರರು.
6 ಜನರಿಂದ ನಾಮಪತ್ರ ವಾಪಾಸ್.
ಮೊಹನೆ ಮೋರೆ ಸೇರಿ 6 ಜನರನ್ನು ಪಕ್ಷಕ್ಕೆ ಸ್ವಾಗತ.
100 ಜನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಕೃತ್ಯ ಕಾಂಗ್ರೆಸ್ ಮಾಡಿತ್ತು.
ಸದ್ಯ ಕಾಂಗ್ರೆಸ್ ಶಡ್ಯಂತ್ರ ವಿಫಲಗೊಂಡಿದೆ.
ಕಾಂಗ್ರೆಸ್ ನೇರವಾಗಿ ಚುನಾವಣೆ ಎದುರಿಸಬೇಕು ಎಂದು
ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿ ಗಂಭೀರ ಆರೋಪ ಮಾಡಿದರು
ಬಿಜೆಪಿ ಮುಖಂಡ ಎಂಬಿ ಝಿರಲಿ ಮಾತನಾಡಿ ಬಿಜೆಪಿ ಇಂದು ಭವ್ಯ,ಸಮೃದ್ಧ,ಮತ್ತು ಶಕ್ತಿ ಶಾಲಿ ನವಭಾರತ ನಿರ್ಮಾಣಕ್ಕೆ ಬುನಾದಿ ಹಾಕುವ ಪ್ರಣಾಳಿಕೆ ಬಿಡುಗಡೆ ಮಾಡಿದೆ ರೈತರ ಕಲ್ಯಾಣಕ್ಕಾಗಿ ಪಶು ಸಂಗೋಪನೆಗೆ ಉತ್ತೇಜನ ನೀಡುವ ಹಲವಾರು ಯೋಜನೆಗಳನ್ನು ಜಾರಿಗೆ ತರುವ ಅಂಶಗಳು ಪ್ರಣಾಳಿಕೆಯಲ್ಲಿವೆ, ಆರ್ಟಿಕಲ್ 370 ಗೆ ತಿದ್ದು ಪಡಿ ಮಾಡಿ ಅದನ್ನು ಕಾಶ್ಮೀರದಲ್ಲಿ ರದ್ದು ಪಡಿಸಿ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಸಂದೇಶ ನೀಡುವ ಅಂಶ ಪ್ರಣಾಳಿಕೆಯಲ್ಲಿದೆ ಎಂದು ಝಿರಲಿ ಹೇಳಿದರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ