*ಬೆಳಗಾವಿ:-* ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಕಾವು ರಂಗೇರಿದ್ದು ಬೆಳಗಾವಿಯ ರೈತ ಮಹಿಳೆಯೋಬ್ಬಳು ಸುಮಲತಾ ಅಂಬರೀಶ್ಗೆ ಸಪೋರ್ಟ್ ಮಾಡಲು ಕುಮಾರಸ್ವಾಮಿ ವಿರುದ್ದ ತೋಡೆತಟ್ಟಲು ಮಂಡ್ಯಕ್ಕೆ ತೆರಳಲು ನಿರ್ಧರಿಸಿದ್ದಾಳೆ.
ಬೆಳಗಾವಿಯ ರೈತ ಮಹಿಳೆ ಜಯಶ್ರೀ ಗುರಣ್ಣವರ್ ಈ ಹಿಂದೆ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ದ ಕಬ್ಬಿನ ಬಾಕಿ ಬಿಲ್ ಗೆ ಸಂಬಂದಿಸಿದಂತೆ ಕುಮಾರಸ್ವಾಮಿ ವಿರುದ್ದ ಸಮರಸಾರಿದ್ದಳು ಈಗ ಸುಮಲತಾ ವಿರುದ್ದ ಕುಮಾರಸ್ವಾಮಿ ಪುತ್ರ ಸ್ಫರ್ಧೆ ಮಾಡಿರುವುದರಿಂದ ಗಂಡು ಮೆಟ್ಟಿದ ನೆಲದ ಹೆಣ್ಣು ಜಯಶ್ರೀ ಸುಮಲತಾ ಅಂಬರೀಶ್ ಪರವಾಗಿ ಮಂಡ್ಯದಲ್ಲಿ ಎರಡುದಿನಗಳ ಕಾಲ ಮತಯಾಚಿಸಲಿದ್ದಾಳೆ.
ನಾಳೆ ನಾಡಿದ್ದು ಎರಡು ದಿನ ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ಪರ ಮತಯಾಚಿಸಲಿದ್ದೇನೆ ನಾಳೆ ಬೆಳಿಗ್ಗೆ ಜಯಶ್ರೀ ಗುರಣ್ನವರ ಮಂಡ್ಯದತ್ತ ಪ್ರಯಾಣ ಬೆಳೆಸಲಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
Check Also
ಕರ್ನಾಟಕ ರಾಜ್ಯೋತ್ಸವ: ನಾಳೆ ಮಂಗಳವಾರ ಪೂರ್ವಭಾವಿ ಸಭೆ
ಬೆಳಗಾವಿ, -ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯನ್ನು ನವಂಬರ್ 1, 2024 ರಂದು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ (ಅಕ್ಟೋಬರ್ 8) ಜಿಲ್ಲಾ ಪಂಚಾಯತ …