ಸುವರ್ಣ ಸುದ್ಧಿ, ಕೆಲಸಕ್ಕೆ ಸೇರಿದ ಶಾವಗಿ ಸಾಂವಕ್ಕ ಮತ್ತು ಮಲ್ಲಮ್ಮ…
ಬೆಳಗಾವಿ – ಸುವರ್ಣಸೌಧದ ಅಂಗಳದಲ್ಲಿ ಶಾವಗಿ ಒಣಗಿಸಿ ಕೆಲಸದಿಂದ ವಜಾ ಆಗಿದ್ದ ಮಲ್ಲಮ್ಮ ಮತ್ತು ಸಾಂವಕ್ಕ ಇಬ್ಬರನ್ನೂ ಕೆಲಸಕ್ಕೆ, ಮರು ನೇಮಕ ಮಾಡಲಾಗಿದ್ದು ಈಗ ಇಂದಿನಿಂದ ಇಬ್ಬರೂ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇತ್ತೀಚಿಗೆ ಬೆಳಗಾವಿಯ ಸುವರ್ಣ ವಿಧಾನಸೌಧದ ಅಂಗಳದಲ್ಲಿ ಶಾವಗಿ ಒಣಗಿಸಿದ ಹಿನ್ನಲೆಯಲ್ಲಿ ಮಲ್ಲಮ್ಮ ಮತ್ತು ಸಾಂವಕ್ಕ ಎಂಬ ಇಬ್ಬರು ದಿನಗೂಲಿ ನೌಕರರನ್ನು ಕೆಲಸದಿಂದ ವಜಾ ಮಾಡಲಾಗಿತ್ತು. ಸರ್ಕಾರ ಬಡಪಾಯಿ ಮಹಿಳೆಯರ ವಿರುದ್ಧ ಕ್ರಮಕೈಗೊಂಡು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯೆಕ್ತ ಪಡಿಸಿದ ಹಿನ್ನಲೆಯಲ್ಲಿ ಜಿಲ್ಲಾಡಳಿತ ವಜಾಗೊಂಡ ಇಬ್ಬರೂ ಮಹಿಳೆಯರನ್ನು ಮರುನೇಮಿಸಿ ವಿವಾದವನ್ನು ಅಂತ್ಯಗೊಳಿಸಿದೆ.
ಇಂದು ಬೆಳ್ಳಂ ಬೆಳಗ್ಗೆ ರಾಜ್ಯದ ಎಲ್ಲ ಸುದ್ಧಿವಾಹಿನಿಗಳಲ್ಲಿ ಮಲ್ಲಮ್ಮಳಿಗೆ ಮತ್ತು,ಸಾಂವಕ್ಕ ಇಬ್ಬರಿಗೂ ಆದ ಅನ್ಯಾಯದ ಕುರಿತು ಸುದ್ಧಿ ಪ್ರಸಾರ ಆಗುತ್ತಿದ್ದಂತೆ, ಎಚ್ಚೆತ್ತುಕೊಂಡ ಜಿಲ್ಲಾಡಳಿತ ಇವತ್ತು ಮರುನೇಮಕ ಮಾಡಿದ್ದು ಸಂತಸದ ಸುದ್ಧಿಯಾಗಿದೆ.
ಸಾಂವಕ್ಕ ಎಂಬ ಮಹಿಳೆ ಶ್ಯಾವಗಿ ತಂದು ಮಲ್ಲಮ್ಮಳಿಗೆ ಕೊಟ್ಟಿದ್ದಳು,ಇಬ್ಬರೂ ಸುವರ್ಣ ವಿಧಾನಸೌಧದಲ್ಲೇ ದಿನಗೂಲಿ ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಶ್ಯಾವಗಿ ಒಣಗಿಸಿದ ಪೋಟೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆದ ಬಳಿಕ ಬೆಳಗಾವಿ ಜಿಲ್ಲಾಧಿಕಾರಿ ಸುವರ್ಣಸೌಧಕ್ಕೆ ಭೇಟಿ ನೀಡಿ ಮಲ್ಲಮ್ಮ ಮತ್ತು ಸಾಂವಕ್ಕನನ್ನು ವಿಚಾರಣೆ ನಡೆಸಿದ್ದರು. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗುತ್ತಿಗೆದಾರನನ್ನು ರಕ್ಷಣೆ ಮಾಡಲು ಹೋಗಿ ಇಬ್ಬರು ಮುಗ್ಧ ಮಹಿಳೆಯರನ್ನು ಬಲಿ ಪಶು ಮಾಡಿದ್ದರು . ಈ ಸುದ್ಧಿ ಬೆಂಗಳೂರಿನ ವಿಧಾನಸೌಧಕ್ಕೆ ಬಿಸಿ ಮುಟ್ಟಿಸಿದ ಬಳಿಕ ಕೆಲಸ ಕಳೆದಕೊಂಡಿದ್ದ ಮಲ್ಲಮ್ಮ ಮತ್ತು ಸಾಂವಕ್ಕ ಇಬ್ಬರಿಗೂ ಮತ್ತೆ ಕೆಲಸ ಸಿಕ್ಕಿದೆ.
ಅದಲ್ಲದೆ ಬೆಳಗಾವಿ ಜಿಲ್ಲಾಧಿಕಾರಿಗಳ ವಿಶೇಷ ಕಾಳಜಿಯಿಂದಾಗಿ ಬಡಪಾಯಿ ಮಲ್ಲಮ್ಮಳಿಗೆ ಆಶ್ರಯ ಮನೆ ಮಂಜೂರಾಗಿದ್ದು ,ಸಣ್ಣ ಕೋಣೆಯಲ್ಲಿ ವಾಸವಾಗಿದ್ದ. ಮಲ್ಲಮ್ಮಳಿಗೆ ಶ್ಯಾವಗಿ ಪ್ರಕರಣ, ಆಸರೆ ನೀಡಿದಂತಾಗಿದ್ದು ಮಲ್ಲಮ್ಮಳಿಗೆ ಮನೆ ಕಟ್ಟಿಸಿ ಕೊಡಲು ಬಸ್ತವಾಡ ಗ್ರಾ ಪಂ ಪಿಡಿಓ ಪ್ರಕ್ರಿಯೆ ಶುರು ಮಾಡಿದ್ದಾರೆ.