ಬೆಳಗಾವಿ-ಉತ್ತರ ಕರ್ನಾಟಕದ ಅಭಿವೃದ್ಧಿಯ ದಿಕ್ಸೂಚಿ,ಗಡಿನಾಡಿನ ಹೆಮ್ಮೆಯ ಕಿರೀಟ ಬೆಳಗಾವಿಯ ಸುವರ್ಣ ವಿಧಾನ ಸೌಧ ಮುಂದಿನ ಚಳಗಾಲದ ಅಧಿವೇಶನ ನಡೆಯುವ ಹೊತ್ತಿಗೆ ಲೇಸರ್ ಶೋ ನಿಂದ ಕಂಗೊಳಿಸಲಿದೆ
ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಲೇಸರ್ ಶೋ ಅಳವಡಿಕೆಗೆ ಲೋಕೋಪಯೋಗಿ ಇಲಾಖೆಯ ಎಲೆಕ್ಟ್ರಿಕಲ್ ವಿಭಾಗ ಇ- ಟೆಂಡರ್ ಕರೆದಿದೆ
ಅತ್ಯಾಕರ್ಷಕ ಶೈಲಿಯಲ್ಲಿ 43.50 ಲಕ್ಷ ರೂ ವೆಚ್ಚದಲ್ಲಿ ಲೇಸರ್ ಶೋ ಅಳವಡಿಸಲು ಯೋಜನೆ ರೂಪಿಸಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ
ಅತ್ಯಾಧುನಿಕ ಶೈಲಿಯಲ್ಲಿ ಅತ್ಯಾಕರ್ಷಕವಾಗಿರುವ ಬಣ್ಣ,ಬಣ್ಣದ ಹೊಗೆಯನ್ನು ಉಗುಳುವ,ನೋಡುಗರ ಮನವನ್ನು ಸೆಳೆಯುವ,ಸುವರ್ಣ ಸೌಧದತ್ತ ಎಲ್ಲರನ್ನು ಕೈ ಬೀಸಿ ಕರೆಯುವ ಲೇಸರ್ ಶೋ ಇದಾಗಲಿದೆ
ಲೋಕೋಪಯೋಗಿ ಇಲಾಖೆ ಲೇಸರ್ ಶೋ ಕಂಟ್ರೋಲ್ ಮಾಡಲು Pangolin LD2000 Professional & Intro Laser Designing and 3D Animation software ಅನ್ನು ಇನಸ್ಟಾಲ್ ಮಾಡಲು ನಿರ್ಧರಿಸಿದೆ
ಲೋಕೋಪಯೋಗಿ ಇಲಾಖೆ ಈ ಲೇಸರ್ ಶೋ ವನ್ನು ನಾಲ್ಕು ತಿಂಗಳಲ್ಲಿ ಪೂರ್ಣ ಗೊಳಿಸುವ ಯೋಜನೆ ಸಿದ್ಧವಾಗಿದೆ
2012 ರಲ್ಲಿ ರಾಷ್ಟ್ರಪತಿ ಪ್ರಣವ ಮುಖರ್ಜಿ ಅವರು ಸುವರ್ಣ ವಿಧಾನ ಸೌಧವನ್ನು ಉದ್ಘಾಟಿಸಿದ್ದರು ಈ ಸಂಧರ್ಭದಲ್ಲಿ ಜಗದೀಶ ಶೆಟ್ಟರ್ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು
ಸರ್ಕಾರ ಈ ಸುವರ್ಣ ಸೌಧದ ನಿರ್ವಹಣೆಗೆ ಪ್ರತಿ ವರ್ಷ ಕೋಟಿಗಟ್ಟಲೇ ಹಣವನ್ನು ಖರ್ಚು ಮಾಡುತ್ತಿದೆ ಸುವರ್ಣ ಸೌಧದಲ್ಲಿ,ರಾಕ್ ಗಾರ್ಡನ್.ಕೃತಕ ಜಲಪಾತ,ಬೃಂದಾವನ ಮಾದರಿಯ ಉದ್ಯಾನವನ ನಿರ್ಮಿಸಿದರೆ ಮತ್ತಷ್ಟು ಪ್ರವಾಸಿಗರನ್ನು ಇಲ್ಲಿ ಸೆಳೆಯ ಬಹುದಾಗಿದೆ
Check Also
ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!
ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …