ಬೆಳಗಾವಿ- ಕಿತ್ತೂರ ಶಾಸಕ ಡಿಬಿ ಇನಾಮದಾರ ಈಗ ಸುದ್ಧಿಯಲ್ಲಿದ್ದಾರೆ ಎಸ್ ಎಂ ಕೃಷ್ಣಾ ಅವರ ಕಟ್ಟಾ ಶಿಷ್ಯರಾಗಿರುವ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ನೀಡಿ ಬಿಜೆಪಿ ಸೇರುವದು ಗ್ಯಾರಂಟಿ ಎಂದು ನಂಬಲರ್ಹ ಮೂಲಗಳು ತಿಳಿಸಿವೆ
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಂತ್ರಿ ಸ್ಥಾನ ಕೊಡಲಿಲ್ಲ ಎಂದು ಅವರ ಜೊತೆ ಮುನಿಸಿಕೊಂಡಿರುವ ಅವರು ಎಸ್ ಎಂ ಜೊತೆ ಬಿಜೆಪಿಗೆ ಸೇರಲು ತಯಾರಿ ಮಾಡಿಕೊಂಡಿದ್ದಾರೆ ಆದರೆ ಮಾದ್ಯಮಗಳಿಗೆ ಇದರ ಸುಳಿವು ನೀಡದ ಅವರು ಬಿಜೆಪಿ ಸೇರಲು ಮಾನಸೀಕವಾಗಿ ಸಿದ್ಧರಾಗಿದ್ದಾರೆ ಎಂದು ತಿಳಿದು ಬಂದಿದೆ
ಕಿತ್ತೂರ ಶಾಸಕ ಡಿಬಿ ಇನಾಮದಾರ ಅವರು ಮಂತ್ರಿ ಸ್ಥಾನ ಸಿಗದೇ ಇರುವದರಿಂದ ಹತಾಶರಾಗಿದ್ದಾರೆ ರಾಣಿ ಶುಗರ್ಸ ಚೇರಮನ್ ಆಗಿರುವ ಅವರು ಕಾರ್ಖಾನೆಯ ಆಡಳಿತ ಮಂಡಳಿಯ ಸಭೆಗೆ ಹೋಗುತ್ತಿಲ್ಲ ಏಕೆಂದರೆ ಅವರ ಬೆಂಬಲಿಗ ಸದಸ್ಯರು ತಮ್ಮದೇ ಆದ ಗುಂಪು ರಚಿಸಿಕೊಂಡು ಸ್ವಯಂ ನಿರ್ಧಾರಗಳನ್ನು ಕೈಗೊಳ್ಳುತ್ತಿರುವದರಿಂದ ಕಾರಖಾನೆಯಲ್ಲಿ ಅವರ ಆಟ ನಡೆಯುತ್ತಿಲ್ಲ
ಬೆಂಬಲಿಗ ನಿರ್ದೇಶಕರ ನಡೆಯಿಂದ ಮನನೊಂದಿರುವ ಅವರು ರಾಣಿ ಶುಗರ್ಸ ಅಧ್ಯಕ್ಷ ಸ್ಥಾನಕ್ಕೂ ರಾಜಿನಾಮೆ ನೀಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದ್ದು ಕಾರಖಾನೆಯ ಸ್ಕೋಡಾ ಕಾರನ್ನು ಕಾರಖಾನೆಯ ವ್ಯೆವಸ್ಥಾಪಕರಿಗೆ ಒಪ್ಪಿಸಿದ್ದಾರೆ ಎಂದು ಹೇಳಲಾಗಿದೆ
ಒಟ್ಟಾರೆ ಕಿತ್ತೂರ ಕ್ಷೇತ್ರದ ರಾಜಕೀಯದಲ್ಲಿ ಬದಲಾವಣೆಯ ಗಾಳಿ ಬೀಸಿದೆ ರಾಣಿ ಶುಗರ್ಸ ನಲ್ಲಿಯೂ ೯ ಜನ ನಿರ್ದೇಶಕರ ಗುಂಪು ಗಟ್ಟಿಯಾಗಿದ್ದು ರೈತರಿಗೆ ಪ್ರತಿ ಟನ್ ಕಬ್ಬಿಗೆ ೨೫೦೦ ರೂ ದರ ನೀಡುತ್ತಿರುವದರಿಂದ ರೈತರು ಇವರ ಪರವಾಗಿ ನಿಂತುಕೊಂಡಿದ್ದಾರೆ