ಬೆಳಗಾವಿಯ ಸುವರ್ಣಸೌಧದ ಅಂಗಳದಲ್ಲಿ ಶ್ಯಾವಗಿ…..!!
ಬೆಳಗಾವಿ- ಉತ್ತರ ಕರ್ನಾಟಕದ ಶಕ್ತಿ ಕೇಂದ್ರ,ಈ ಭಾಗದ ಅಭಿವೃದ್ಧಿಗೆ ದಿಕ್ಸೂಚಿ ಆಗಬೇಕಿದ್ದ ಬೆಳಗಾವಿಯ ಸುವರ್ಣ ವಿಧಾನಸೌಧ,ಭೂತ ಬಂಗಲೆ ಆಗಿದೆ ಎಂದು ಯೋಚಿಸುವ ಬೆನ್ನಲ್ಲಿಯೇ ಈಗ ಇಲ್ಲಿ ಮತ್ತೊಂದು ವಿಚಿತ್ರ ಘಟನೆ ನಡೆದಿದೆ.
.
ಎರಡು ವರ್ಷಕ್ಕೊಮ್ಮೆ ಮೂರು ವರ್ಷಕ್ಕೊಮ್ಮೆ ಇಲ್ಲಿ ಹತ್ತು ಹನ್ನೆರಡು ದಿನ ಸರ್ಕಾರ ಅಧಿವೇಶನ ಮಾಡುತ್ತದೆ. ಅದೊಂದು ಇದೊಂದು ಅಂತಾ ಜಿಲ್ಲಾ ಮಟ್ಟದ ಕಚೇರಿಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ.ಸಿಎಂ ಬೊಮ್ಮಾಯಿ ಹೇಳಿದಂತೆ ಸಕ್ಕರೆ ಆಯುಕ್ತರ ಕಚೇರಿ ಸುವರ್ಣವಿಧಾನಸೌಧಕ್ಕೆ ಸ್ಥಳಾಂತರ ಆಗುತ್ತದೆ ಎನ್ನುವ ಹೇಳಿಕೆಯೂ ಸುಳ್ಳಾಗಿದೆ.ಇಲ್ಲಿಯ ಭದ್ರತೆಗಾಗಿ ಹಿರೇಬಾಗೇವಾಡಿ ಪೋಲೀಸ್ ಠಾಣೆಯ ಔಟ್ ಪೋಸ್ಟ್ ಕೂಡಾ ಇದೆ.ಆದಾಗ್ಯೂ ಸುವರ್ಣಸೌಧದ ಅಂಗಳದಲ್ಲಿ ಯಾರೋ ಪುಣ್ಯಾತ್ಮರು ಶ್ಯಾವಗಿ ಒಣಗಿಸಲು ಹಾಕಿ,ಈ ಸುವರ್ಣಸೌಧವನ್ನು ನೀವು ಬಳಕೆ ಮಾಡದಿದ್ದರೂ ನಾವು ಬಳಕೆ ಮಾಡುತ್ತೇವೆ.ಎನ್ನುವ ಸಂದೇಶವನ್ನು ಸರ್ಕಾರಕ್ಕೆ ರವಾನೆ ಮಾಡಿದ್ದಾರೆ.
ಸುವರ್ಣಸೌಧದ ಗೇಟ್ ನಲ್ಲಿ ಪೋಲೀಸ್ರು ಇರ್ತಾರೆ,ಎಲ್ಲ ರೀತಿಯ ವಿಚಾರಣೆ ಮಾಡಿ ಒಳಗೆ ಬಿಡ್ತಾರೆ,ಆದ್ರೆ ಬಿಗಿ ಭದ್ರತೆ ಭೇದಿಸಿ, ಪೋಲೀಸರ ಕಣ್ಣು ತಪ್ಪಿಸಿ ಸುವರ್ಣಸೌಧದ ಅಂಗಳದಲ್ಲಿ ಶ್ಯಾವಗಿ ಒಣಗಿಸಲು ಹಾಕಿದ್ದು ಈ ಸುವರ್ಣವಿಧಾನಸೌಧವನ್ನು ಸರ್ಕಾರ ಎಷ್ಟರ ಮಟ್ಟಿಗೆ ನಿರ್ಲಕ್ಷ್ಯ ಮಾಡಿದೆ ಎನ್ನುವದನ್ನು ತೋರಿಸುತ್ತದೆ.
ಬಿ.ಎಸ್ ಯಡಿಯೂರಪ್ಪ ಸಿಎಂ ಆಗುವ ಮೊದಲು ಉತ್ತರ ಕರ್ನಾಟಕದ ಮಠಾಧೀಶರು ನಡೆಸಿದ ಹೋರಾಟದಲ್ಲಿ ಭಾಗವಹಿಸಿ,ನಮ್ಮ ಪಕ್ಷ ಅಧಿಕಾರಕ್ಕೆ ಬಂದ್ರೆ,ಉತ್ತರ ಕರ್ನಾಟಕದ ಜನರಿಗೆ ಅನಕೂಲವಾಗುವ ರಾಜ್ಯಮಟ್ಟದ ಕಚೇರಿಗಳನ್ನು ಅಧಿಕಾರ ಸ್ವೀಕಾರ ಮಾಡಿದ 24 ಗಂಟೆಯೊಳಗಾಗಿ ಸ್ಥಳಾಂತರ ಮಾಡುವದಾಗಿ ಹೇಳಿದರೂ ಅವರೂ ಹೇಳಿದಂತೆ ನಡೆಯಲಿಲ್ಲ.
ಉತ್ತರ ಕರ್ನಾಟಕದವರೇ ಆಗಿರುವ ಬಸವರಾಜ್ ಬೊಮ್ಮಾಯಿ ಅವರು ಸಿಎಂ ಆಗಿ ಮೊದಲ ಬಾರಿಗೆ ಬೆಳಗಾವಿಯ ಸುವರ್ಣವಿಧಾನಸೌಧಕ್ಕೆ ಭೇಟಿ ನೀಡಿ ಸಕ್ಕರೆ ಆಯುಕ್ತರ ಕಚೇರಿಯನ್ನು ಸುವರ್ಣಸೌಧಕ್ಕೆ ಸ್ಥಳಾಂತರ ಮಾಡುವ ಆದೇಶವನ್ನು ಬೆಂಗಳೂರಿಗೆ ಹೋದ ತಕ್ಷಣ ಮಾಡುತ್ತೇನೆ ಎಂದು ನುಡಿದಂತೆ ನಡೆದರು.ಹೀಗಾಗಿ ಈಗ ಸಕ್ಕರೆಗೆ ಶ್ಯಾವಗಿ ಹತ್ತಿರ..ಹತ್ತಿರ ಆಗುತ್ತಿದೆ.
ಉತ್ತರ ಕರ್ನಾಟಕದ ಅಭಿವೃದ್ಧಿಗೆ ದಿಕ್ಸೂಚಿ ಆಗಬೇಕಿದ್ದ ಬೆಳಗಾವಿಯ ಸುವರ್ಣವಿಧಾನಸೌಧದ ಅಂಗಳ ಈಗ ಶ್ಯಾವಗಿ ಒಣಗಿಸುವ ಸ್ಥಳ ಆಗಿ ಪರಿವರ್ತನೆ ಆಗಿರುವದು ಇದರ ನಿರ್ಲಕ್ಷ್ಯದ ವಾಸ್ತವ ತಿಳಿಸಿದೆ. ಸಾಂಬ್ರಾ ಶ್ಯಾವಗಿ ಫೇಮಸ್ ಅಲ್ಲಿಯ ಜನ ರಸ್ತೆ ಪಕ್ಕದಲ್ಲಿ ರಾಶಿಗಟ್ಟಲೇ ಶ್ಯಾವಗಿ ಒಣಗಿಸುತ್ತಾರೆ.ಜಿಲ್ಲಾಡಳಿತ ಶ್ಯಾವಗಿ ಒಣಗಿಸಲು ಅವರಿಗೆ ವ್ಯವಸ್ಥೆ ಮಾಡಬೇಕು ಎನ್ನುವದಕ್ಕೆ ಈ ಘಟನೆ ಒಳ್ಳೆಯ ನಿದರ್ಶನ ಆಗಿದೆ.
ಸುವರ್ಣ ಸೌಧ ಹೇಳತೈತಿ ಈಗ… ನೀ..ಹಿಂಗ್ ನೋಡಿದರೇ ನನ್ನ ತಿರುಗಿ ನಾ.ಹಿಂಗ್ ನೋಡ್ತೇನ್ ನಿನ್ನ…!!!
ಕ್ಯಾಮರಾ ಪರ್ಸನ್ ಬಂಡಲ್ ಬಡಾಯಿ ಜೊತೆ ಸ್ಪೇಶಲ್ ಸಾಂಬ್ರಾ ಶ್ಯಾವಗಿ…ಸುವರ್ಣಸೌಧ ಬಂಡಲ್ ನ್ಯಸ್ ಬ್ಯರೋ ಬೆಳಗಾವಿ……