ಬೆಳಗಾವಿ- ಪ್ರತಿ ವರ್ಷ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆದ ಸಂಧರ್ಭದಲ್ಲಿ ಕಾವೇರಿ ಗಲಾಟೆ,ಕಬ್ಬಿನ ಬಾಕಿ ಬಿಲ್ ಗಲಾಟೆ,ಹಲವಾರು ಗಲಾಟೆಗಳ ಸುಳಿವಿಗೆ ಸಿಲುಕಿ ಬೆಳಗಾವಿ ಅಧಿವೇಶನ ವ್ಯರ್ಥವಾಗುತ್ತ ಬಂದಿದೆ ಆದರೆ ಈ ಬಾರಿ ಶಿಕ್ಷಣ ಮಂತ್ರಿ ಮೋಬೈಲ್ ನಲ್ಲಿ ಅಶ್ಲೀಲ ಚಿತ್ರ ನೋಡಿದ ಪ್ರಕರಣ ರಾಜ್ಯಸರ್ಕಾರವನ್ನು ಪೇಚಿಗೆ ಸಿಲುಕಿಸಲಿದೆ
ಪ್ರತಿಪಕ್ಷಗಳು ಬೆಳಗಾವಿ ಅಧಿವೇಶನದಲ್ಲಿ ತನ್ವೀರ ಸೇಠ ಪ್ರಕರಣವನ್ನು ಮುಂದಿಟ್ಟುಕೊಂಡು ರಾಜ್ಯಸರ್ಕಾರದ ಚಳಿ ಬಿಡಿಸಲು ತಂತ್ರ ರೂಪಿಸಿದ್ದು ತನ್ವೀರ ಸೇಠ ರಾಜಿನಾಮೆ ಕೊಡುವ ವರೆಗೂ ಉಭಯ ಸಧನಗಳಲ್ಲಿ ಸುಸುತ್ರವಾಗಿ ಕಲಾಪಗಳು ನಡೆಯುವ ಲಕ್ಷಣಗಳು ಕಾಣಿಸುತ್ತಿಲ್ಲ
ಅಡಳಿತಾರೂಢ ಕಾಂಗ್ರೆಸ್ ಪಕ್ಷ ಹಳೆಯ ನೋಟುಗಳ ರಾದ್ಧಾಂತ ಸಾರ್ವಜನಿಕರು ಹೊಸ ನೋಟುಗಳನ್ನು ಪಡೆಯಲು ಪರದಾಡುತ್ತಿರುವ ವಿಷಯವನ್ನು ಮುಂದಿಟ್ಟುಕೊಂಡು ಪ್ರತಿಪಕ್ಷ ಬಿಜೆಪಿಯ ಬಾಯಿ ಮುಚ್ಚಿಸಲು ಪ್ರತಿತಂತ್ರ ರೂಪಿಸಿದೆ ಎಂದು ಹೇಳಲಾಗಿದೆ
ಬೆಳಗಾವಿಯಲ್ಲಿ ನವ್ಹೆಂಬರ ೨೧ ರಿಂದ ಬೆಳಗಾವಿಯ ಸುವರ್ಣ ಸೌಧದಲ್ಲಿ ಆರಂಭವಾಗಲಿರುವ ಚಳಿಗಾಲದ ಅಧಿವೇಶನ ಈ ಬಾರಿಯೂ ಗದ್ದಲ ಗಲಾಟೆಯಲ್ಲಿ ಕೊಚ್ಚಿ ಹೋಗುವ ಸಾಧ್ಯತೆಗಳೆ ಹೆಚ್ಚು ಮಹಾದಾಯಿ,ಹಾಗು ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಮೇಲೆ ಉತ್ತರ ಕರ್ನಾಟಕದ ಶಾಸಕರು ಪಕ್ಷಾತೀತವಾಗಿ ಧ್ವನಿ ಎತ್ತಿದರೆ ಮಾತ್ರ ಈ ಅಧಿವೇಶನ ಸಾರ್ಥಕ
Check Also
ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??
ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …