ಬೆಳಗಾವಿಯ ಸುವರ್ಣ ಸೌಧಕ್ಕೆ ಅಗತ್ಯ ಚೇರಿಗಳ ಸ್ಥಳಾಂತರಕ್ಕೆ ನಾಳೆಯೇ ತೀರ್ಮಾಣ- ಈಶ್ವರಪ್ಪ
ಬೆಳಗಾವಿ- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆಯ ಸಚಿವರಾದ ಕೆ.ಎಸ್.ಈಶ್ವರಪ್ಪ ಅವರು ಇಂದು ಬೆಳಗಾವಿ ಹಾಗೂ ಉತ್ತರ ಕರ್ನಾಟಕ ಭಾಗದ ಜನರಿಗೆ ಸಿಹಿ ಸುದ್ಧಿ ನೀಡಿದ್ದಾರೆ
ಬೆಳಗಾವಿ ಬಸ್ ನಿಲ್ಧಾಣದಲ್ಲಿ ಹೊಸ ಬಸ್ ಗಳನ್ನು ಸೇವೆಗೆ ಸಮರ್ಪಿಸಿದ ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಈಶ್ವರಪ್ಪ ಸುವರ್ಣಸೌಧಕ್ಕೆ ಇಲಾಖೆಗಳ ಕಚೇರಿಗಳ ಸ್ಥಳಾಂತರಕ್ಕೆ ಅಗತ್ಯವಿರುವ ಕನಿಷ್ಠ ಕೊಠಡಿಗಳನ್ನು ನೀಡಲು ಸಭಾಧ್ಯಕ್ಷರಿಗೆ ಕೋರುತ್ತೇವೆ ನಾಳೆ ಬೆಂಗಳೂರಿನ ಸಭೆಯಲ್ಲಿ ಚರ್ಚಿಸಿ ಇಲಾಖೆಯ ಕಚೇರಿಯ ಸ್ಥಳಾಂತರ ಕುರಿತು ತೀರ್ಮಾನ ಮಾಡುತ್ತೇವೆ ಎಂದು ಈಶ್ವರಪ್ಪ ಭರವಸೆ ನೀಡಿದ್ದಾರೆ
ಉ.ಕ.ಜನರಿಗೆ ಅನುಕೂಲ ಕಲ್ಪಿಸಲು ಸುವರ್ಣಸೌಧದಲ್ಲಿ ಕಚೇರಿ ಆರಂಭ ಮಾಡುತ್ತೇವೆ ಗಡಿ, ಭಾಷೆ ಹಾಗೂ ಜಲ ವಿವಾದವನ್ನು ಕೆಲವರು ಪ್ರಚಾರಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ ನೆಲ-ಜಲ ಹಿತರಕ್ಷಣೆ ರಾಜೀ ಪ್ರಶ್ನೆಯೇ ಇಲ್ಲ ಎಂದು ಈಶ್ವರಪ್ಪ ಹೇಳಿದ್ದಾರೆ
ನಾಡದ್ರೋಹ ಕೆಲಸ ದೇಶದಲ್ಲಿ ಅಲ್ಲಲ್ಲಿ ಕಂಡು ಬರುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೂಕ್ತ ಕ್ರಮ ಕೈಗೊಳ್ಳಲಿವೆ.ಕೆಲವು ವ್ಯಕ್ತಿ ಮತ್ತು ಸಂಘಟನೆಗಳಿಂದ ಗಡಿ ವಿವಾದ ಕೆಣಕುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದ ಅವರು ಪೌರತ್ವ ಕಾಯ್ದೆ ತಿದ್ದುಪಡಿಯ ಉದ್ಧೇಶ ನೆರೆಯ ಮೂರು ದೇಶಗಳ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡುವ ಉದ್ದೇಶವಾಗಿದೆ ಜೀವ ಬೆದರಿಕೆಗೆ ಹೆದರಲ್ಲ. ಈಗಾಗಲೇ ದೂರು ನೀಡಲಾಗಿದೆ ಎಂದು ಈಶ್ವರಪ್ಪ ತಿಳಿಸಿದ್ದಾರೆ
ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡಿ ಉದ್ಧವ ಠಾಕ್ರೆ ಒಬ್ಬ ಮುಖ್ಯಮಂತ್ರಿಯಾಗಿ ಗಡಿ ವಿವಾದ ಬಗ್ಗೆ ಅವಿವೇಕತನದ ಹೇಳಿಕೆ ನೀಡುವುದು ಅವರಿಗೆ ಶೋಭೆ ತರುವುದಿಲ್ಲ ಗಡಿ ವಿವಾದ ಮುಗಿದ ಅಧ್ಯಾಯದ ಬಗ್ಗೆ ವಿನಾಕಾರಣ ಹೇಳಿಕೆ ನೀಡುವುದು ಸೂಕ್ತವಲ್ಲ ಎಂದು ಸವದಿ ಉದ್ಧವ ಠಾಕ್ರೆ ವಿರುದ್ಧ ಕಿಡಿಕಾರಿದರು
ಪರಮೋಚ್ಛ ನ್ಯಾಯಾಲಯದಲ್ಲಿ ಪ್ರಕರಣವಿದೆ. ರಾಜ್ಯದ ಪರ ತೀರ್ಪು ಬರುವ ವಿಶ್ವಾಸವಿದೆ ಎಂದು ಸವದಿ ಹೇಳಿದರು
***
ಬೆಳಗಾವಿಯಲ್ಲಿ ಈಗ ಡಿಸಿಎಂ ಲಕ್ಷ್ಮಣ ಸವದಿ ಅವರ ಸೇವಾ ಅವಧಿ…!!!
ಬೆಳಗಾವಿ – ಬೆಳಗಾವಿ ಜಿಲ್ಲೆಯವರಾದ ಡಿಸಿಎಂ, ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರ ಸೇವಾ ಪರ್ವ ಬೆಳಗಾವಿ ಜಿಲ್ಲೆಯಲ್ಲಿ ಆರಂಭವಾಗಿದೆ
ಸಾರಿಗೆ ಸಚಿವರು ಇಂದು ಬೆಳಗಾವಿ ಬಸ್ ನಿಲ್ಧಾಣದಲ್ಲಿ ಹೊಸ ಬಸ್ ಗಳನ್ನು ಸೇವೆಗೆ ಸಮರ್ಪಿಸಿ ಹೊಸ ಬಸ್ ನಿಲ್ಧಾಣದ ಕಾಮಗಾರಿಯನ್ನು ಪರಶೀಲಿಸಿ ಬೆಳಗಾವಿ ಜಿಲ್ಲೆಯ ಅಭಿವೃದ್ಧಿಯ ಕುರಿತು ವಿಶೇಷ ಲಕ್ಷ್ಯ ವಹಿಸಿ ಎಲ್ಲರ ಗಮನ ಸೆಳೆದಿದ್ದಾರೆ.