Breaking News
Home / Breaking News / ಬೆಳಗಾವಿಯಲ್ಲಿ ನಡೆಯುವ ಎಲ್ಲ ಮರಾಠಿ ಕಾರ್ಯಕ್ರಮಗಳಿಗೆ ಮಹಾರಾಷ್ಟ್ರ ಸರ್ಕಾರ ಆರ್ಥಿಕ ನೆರವು ನೀಡಬೇಕೆನ್ನುವ ಠರಾವ್ ಪಾಸ್…!!

ಬೆಳಗಾವಿಯಲ್ಲಿ ನಡೆಯುವ ಎಲ್ಲ ಮರಾಠಿ ಕಾರ್ಯಕ್ರಮಗಳಿಗೆ ಮಹಾರಾಷ್ಟ್ರ ಸರ್ಕಾರ ಆರ್ಥಿಕ ನೆರವು ನೀಡಬೇಕೆನ್ನುವ ಠರಾವ್ ಪಾಸ್…!!

ಬೆಳಗಾವಿ- ಮಹಾರಾಷ್ಟ್ರದ ಚಂದಗಡ ಶಾಸಕ ಇತ್ತೀಚಿಗೆ ಬೆಳಗಾವಿಯಲ್ಲಿ ಎಂಈಎಸ್ ನಾಯಕರಿಂದ ಸತ್ಕಾರ ಸ್ವೀಕರಿಸಿ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕಾಗಿತ್ತು ನಾನು  ಬೆಳಗಾವಿ ಶಾಸಕನಾಗಬೇಕಾಗಿತ್ತು ಎಂದು ಗಡಿಕ್ಯಾತೆ ತೆಗೆದಿದ್ದ ರಾಜೇಶ್ ಪಾಟೀಲ ಇಂದು ಉಚಗಾಂವ ಸಾಹಿತ್ಯ ಸಮ್ಮೇಳನದಲ್ಲೂ ಪ್ರತ್ಯಕ್ಷ ರಾದರು

ಬೆಳಗಾವಿ ತಾಲೂಕಿನ ಉಚಗಾಂವನಲ್ಲಿ 18ನೇ ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಮರಾಠಿ ಸಾಹಿತ್ಯ ಸಮ್ಮೇಳನದಲ್ಲೂ‌ ಗಡಿ ವಿವಾದ ಕೆಣಕಿದ್ದಾರೆ

*ಮತ್ತೆ ಗಡಿ ವಿವಾದ ಕೆಣಕಿರುವ ಚಂದಗಡ NCP ಶಾಸಕ ರಾಜೇಶ್ ಪಾಟೀಲ್ ಸಾಹಿತ್ಯ ಸಮ್ಮೇಳನದಲ್ಲಿ ಮಾರನಾಡಿ ನನ್ನ ತಂದೆ ಎಂಎಲ್‌ಎ ಆದಾಗ ಗಡಿಭಾಗದ ಮರಾಠಿ ಜನರ ಸ್ಮರಿಸಿ ಪ್ರಮಾಣ ವಚನ ಸ್ವೀಕರಿಸಿದ್ರು ಕರ್ನಾಟಕದ ಗಡಿಭಾಗ ಮಹಾರಾಷ್ಟ್ರದಲ್ಲಿ ಇದ್ದಿದ್ರೆ ಬೆಳಗಾವಿ ಎಂಎಲ್‌ಎ ಆಗಿರ್ತಿದ್ದೆ ಅಂತಾ ಸ್ಮರಿಸಿದ್ರು’ ಆದರೆ ಆ ವೇಳೆ ಮಹಾರಾಷ್ಟ್ರ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ’ಗಡಿವಿವಾದ ಬಗೆಹರಿಸಲು ಆಗಿನ ಸರ್ಕಾರ ಮುಂದೆ ಬರಲಿಲ್ಲ’

*’ಹೀಗಾಗಿ ಮಹಾರಾಷ್ಟ್ರದ ರಾಜಕೀಯ ನಾಯಕರು ಗಮನ ಸೆಳೆಯಲು ನಾನೂ ಅದೇ ರೀತಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದೇನೆ ನಾನೂ ಸಹ ಗಡಿಭಾಗದ ಮರಾಠಿಗರನ್ನು ಸ್ಮರಿಸಿ ಪ್ರಮಾಣ ವಚನ ಸ್ವೀಕರಿಸಿದೆ’ ಎಂದರು

ಸಾಹಿತ್ಯ ಸಮ್ಮೇಳನದಲ್ಲಿ ಹೊರಡಿಸಿದ ಠರಾವುಗಳನ್ನು ಮಹಾರಾಷ್ಟ್ರ ಸರ್ಕಾರದ ಗಮನಕ್ಕೆ ತರುವೆ* ನಿಮ್ಮ ಪ್ರತಿನಿಧಿಯಾಗಿ ಈ ಠರಾವುಗಳನ್ನು ಮಹಾರಾಷ್ಟ್ರ ಸರ್ಕಾರದ ಗಮನಕ್ಕೆ ತರುವೆ ಎಂದು ಉಚಗಾಂವ ಮರಾಠಿ ಸಮ್ಮೇಳನದಲ್ಲಿ ಎನ್‌ಸಿಪಿ ಶಾಸಕ ರಾಜೇಶ್ ಪಾಟೀಲ್ ಭರವಸೆ ಕೊಟ್ಟಿದ್ದಾರೆ

ಬೆಳಗಾವಿ ತಾಲೂಕಿನ ಉಚಗಾಂವ ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ 4 ಠರಾವು

1. ಕರ್ನಾಟಕ – ಮಹಾರಾಷ್ಟ್ರ ಗಡಿವಿವಾದ ಸುಪ್ರೀಂಕೋರ್ಟ್ ನಲ್ಲಿದೆ‌. ದೀರ್ಘಕಾಲದ ವಿವಾದಿಂದ ಎರಡು ಭಾಷಿಕರ ಮಧ್ಯೆ, ಎರಡು ರಾಜ್ಯಗಳ ಮಧ್ಯೆ ವೈರತ್ವ ಭಾವನೆ ನಿರ್ಮಾಣವಾಗಿದೆ. ಹೀಗಾಗಿ ಗಡಿವಿವಾದ ಇತ್ಯರ್ಥಕ್ಕೆ ಕೇಂದ್ರ ಸರ್ಕಾರಕ್ಕೆ ಮಹಾರಾಷ್ಟ್ರ ಸರ್ಕಾರ ಒತ್ತಾಯಿಸಬೇಕು.

2. ಗಡಿಭಾಗದಲ್ಲಿ ಶೇಕಡ 15ಕ್ಕಿಂತ ಹೆಚ್ಚಿರುವ ಮರಾಠಿಗರ ಅನುಕೂಲಕ್ಕಾಗಿ ಸರ್ಕಾರಿ ಕಚೇರಿಗಳಲ್ಲಿ ಮರಾಠಿ ದಾಖಲಾತಿ ನೀಡುವ ವ್ಯವಸ್ಥೆಯಾಗಬೇಕು.

3.ವಿವಿಧತೆಯಲ್ಲಿ ಏಕತೆ ನಮ್ಮ ದೇಶಧ ವೈಶಿಷ್ಟತೆ. ಹೀಗಾಗಿ ದೇಶದ ರಾಷ್ಟ್ರ ಹಾಗೂ ರಾಷ್ಟ್ರ ಭಾಷೆಗೆ ಪ್ರಥಮ ಆದ್ಯತೆ ನೀಡಿ ಸರ್ವ ಧರ್ಮ ಸರ್ವ ಭಾಷಿಕರನ್ನು ಒಗ್ಗೂಡಿಸುವ ಪ್ರಯತ್ನ ಮಾಡಬೇಕು.

4. ಗಡಿಭಾಗದಲ್ಲಿ ನಡೆಯುವ ಎಲ್ಲಾ ಸಾಹಿತ್ಯ ಸಮ್ಮೇಳನ ಹಾಗೂ ಮರಾಠಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಹಾರಾಷ್ಟ್ರ ಸರ್ಕಾರ ಆರ್ಥಿಕ ಸಹಾಯ ನೀಡಬೇಕು.

Check Also

ದ ಮೇಕರ್ ಆಫ್ ನ್ಯೂ ಇಂಡಿಯಾ ಪುಸ್ತಕ ರೆಡಿ ಮಾಡಿದವರು ಯಾರು ಗೊತ್ತಾ..??

ಪ್ರಾಮಿಸ್ಡ್ ನೇಷನ್’ ಪ್ರಧಾನಿಗೆ ಅರ್ಪಣೆ * ಹುಬ್ಬಳ್ಳಿಯ ‘ಸೆನ್ಸ್ ಎಸೆನ್ಸ್’ ಸಂಸ್ಥೆಯಿಂದ ಅಂಧರಿಗಾಗಿ ಸಿದ್ಧಪಡಿಸಿದ ಪುಸ್ತಕ ಬೆಂಗಳೂರು ದೇಶದ ಏಳು …

Leave a Reply

Your email address will not be published. Required fields are marked *