ಬೆಳಗಾವಿ- ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಿಸಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರೇ ಈಗ ಈ ಸೌಧವನ್ನು ಸಮಾಧಿ ಮಾಡುವ ನಿರ್ಧಾರ ಕೈಗೊಂಡಿದ್ದಾರೆ ,ಈ ಬಾರಿಯೂ ಚಳಿಗಾಲದ ಅಧಿವೇಶನವನ್ನು ಬೆಂಗಳೂರಲ್ಲೇ ನಡೆಸುವ ನಿರ್ಧಾರ ಕೈಗೊಂಡಿದ್ದಾರೆ.
ಚಳಿಗಾಲ ಅಧಿವೇಶನ ಮತ್ತೆ ಬೆಂಗಳೂರಲ್ಲಿಯೇ ನಡೆಸಲು ತೀರ್ಮಾಣ ಮಾಡಿರುವ ಸಿಎಂ ಯಡಿಯೂರಪ್ಪ ಮತ್ತೆ ಬೆಳಗಾವಿಗೆ ಅನ್ಯಾಯ ಮಾಡಿದ್ದಾರೆ,
ಎರಡು ವರ್ಷಗಳಿಂದ ಬೆಳಗಾವಿಯಲ್ಲಿ ಅಧಿವೇಶನ ನಡೆಸದೇ ಸುವರ್ಣಸೌಧ ಕಡೆಗಣನೆ ಮಾಡುತ್ತಿರುವ ಯಡಿಯೂರಪ್ಪ ತಾವೇ ನಿರ್ಮಿಸಿದ ಸುವರ್ಣ ಸೌಧಕ್ಕೆ ನಿರ್ಲಕ್ಷ್ಯ ಮಾಡುವ ಮೂಲಕ ,ಉತ್ತರ ಕರ್ನಾಟಕದ ಕಣ್ಣಿಗೆ ಸುಣ್ಣ ಬಳದಿದ್ದಾರೆ.
ಅಂದಾಜು 500ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾದ ಸುವರ್ಣಸೌಧ ಈಗ ಕೇವಲ ಶೋ ಪೀಸ್ ಆಗಿದೆ. ಉತ್ತರ ಕರ್ನಾಟಕ ಆಶೋತ್ತರಕ್ಕೆ ಸ್ಪಂಧಿಸಲು ನಿರ್ಮಾಣವಾದ ಸುವರ್ಣಸೌಧ ಈಗ ಭೂತ ಬಂಗಲೆ ಆಗಲಿದೆ.
ಉತ್ತರ ಕರ್ನಾಟಕದ ಶಾಸಕರು ಚಳಿಗಾಲ ಅಧಿವೇಶನ ಬೆಳಗಾವಿಯಲ್ಲಿ ನಡೆಸುವ ಕುರಿತು ಪ್ರಶ್ನೆ ಮಾಡದಿರುವುದಕ್ಕೆ ಇಲ್ಲಿಯ ಜನ ಆಕ್ರೋಶ ವ್ಯೆಕ್ತ ಪಡಿಸಿದ್ದಾರೆ.
ಬಿಜೆಪಿ ಸರ್ಕಾರದಿಂದ ಸುವರ್ಣಸೌಧ ಪದೇ ಪದೇ ನಿರ್ಲಕ್ಷ್ಯ ಕ್ಕೊಳಗಾಗುತ್ತಿದೆ. ಕಳೆದ ಬಾರಿ ಪ್ರವಾಹ ಹಿನ್ನೆಲೆಯಲ್ಲಿ ಅಧಿವೇಶನ ರದ್ದು, ಮಾಡಿದ ಸರ್ಕಾರ ಈ ಬಾರಿ ಕೊರೊನಾ ನೆಪ ಹೇಳಿ ಚಳಿಗಾಲದ ಅಧಿವೇಶನವನ್ನು ಬೆಂಗಳೂರಲ್ಲೇ ನಡೆಸಲು ತೀರ್ಮಾಣ ಕೈಗೊಂಡಿರುವುದು.ದುರ್ದೈವ