Breaking News

ಕರಾಳ ದಿನಾಚರಣೆ ನಾಳೆ ಒಂದು ಕಡೆ ಕರವೇ ಮೀಟಿಂಗ್ ಇನ್ನೊಂದು ಕಡೆ ಎಂಈಎಸ್ ಮೀಟೀಂಗ್

ಬೆಳಗಾವಿ- ರಾಜ್ಯೋತ್ಸವದ ದಿನ ನಾಡವಿರೋಧಿ ಎಂಈಎಸ್ ಆಚರಿಸುವ ಕರಾಳ ದಿನಾಚರಣೆಯ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಸಮರ ಸಾರಿದ್ದು ಅಧ್ಯಕ್ಷ ಟಿ ಎ ನಾರಾಯಯಣ ಗೌಡ್ರು ಇಂದು ರಾತ್ರಿ ಬೆಳಗಾವಿಗೆ ಧಾವಿಸಲಿದ್ದಾರೆ

ಇಂದು ರಾತ್ರಿ ಬೆಳಗಾವಿಗೆ ಆಗಮಿಸುವ ಅವರು ನಾಳೆ ಬೆಳಿಗ್ಗೆ ಕರವೇ ಪದಾಧಿಕಾರಿಗಳ ಸಭೆ ನಡೆಸಿ ಕರಾಳ ದಿನವನ್ನು ತಡೆಯಲು ಹೋರಾಟದ ರೂಪರೇಷೆಗಳನ್ನು ರೂಪಿಸಲಿದ್ದಾರೆ

ಕನ್ನಡಿಗರು ಹಬ್ಬ ಆಚರಿಸುವ ದಿನ ಕನ್ನಡದ ನೆಲದಲ್ಲಿ ಕರಾಳ ದಿನಕ್ಕೆ ಅವಕಾಶ ಕೊಡಬಾರದು ಸರ್ಕಾರ ಒಂದು ವೇಳೆ ಇದಕ್ಕೆ ಅವಕಾಶ ಕೊಟ್ಟರೆ ಕರಾಳ ದಿನವನ್ನು ನಾವೇ ತಡೆಯುತ್ತೇವೆ ಎನ್ನುವ ಎಚ್ಚರಿಕೆಯನ್ನು ನಾರಾಯಣಗೌಡ್ರು ನೀಡಿದ್ದಾರೆ

ನಾಳೆ ಬೆಳಗಾವಿಯಲ್ಲಿ ಒಂದು ಕಡೆ ನಾರಾಯಣ ಗೌಡ್ರು ಸಭೆ ನಡೆಸಿ ಕರಾಳ ದಿನವನ್ನು ತಡೆಯಲು ತಯಾರಿ ಮಾಡಿಕೊಳ್ಳುತ್ತಿದ್ದು ಇನ್ನೊಂದು ಕಡೆ ಎಂಈಎಸ್ ಮರಾಠಾ ಮಂದಿರದಲ್ಲಿ ಕರಾಳ ದಿನದ ಸಿದ್ಧತಾ ಸಭೆಯನ್ನು ಆಯೋಜಿಸಿದೆ

ಕರಾಳ ದಿನದ ಕುರಿತು ಜಿಲ್ಲಾಡಳಿತ ಇನ್ನುವರೆಗೆ ತನ್ನ ನಿಲುವನ್ನು ಸ್ಪಷ್ಟಪಡಿಸಿಲ್ಲ ಸರ್ಕಾರ ಕರಾಳ ದಿನಕ್ಕೆ ಅನುಮತಿ ನೀಡುತ್ತದೆಯೋ ಅಥವಾ ನಿಷೇಧಿಸುತ್ತದೆಯೋ ಎನ್ನುವದನ್ನು ಕಾದು ನೋಡಬೇಕಾಗಿದೆ

Check Also

ನಿರಂತರ ಮಳೆ,ಬೆಳಗಾವಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ …

Leave a Reply

Your email address will not be published. Required fields are marked *