Breaking News

ನಾಡ ದ್ರೋಹಿಗಳನ್ನು ಬೇರು ಸಮೇತ ಕಿತ್ತೇಸೆಯಲು ಕರವೇ ಸಿದ್ಧ

ಎಂಇಎಸ್ ಚುನಾವಣಾ ಕರ ಪತ್ರದಲ್ಲಿ ಜಯ ಮಹಾರಾಷ್ಟ್ರ ಮುದ್ರಣ ವಿಚಾರ.ಬೆಳಗಾವಿಯಲ್ಲಿ ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಆಕ್ರೋಶ ವ್ಯೆಕ್ತ ಪಡಿಸಿದ್ದು ಎಪಿಎಂಸಿ ಚುನಾವಣಾ ಕರ ಪತ್ರದಲ್ಲಿ ಜಯ ಮಹಾರಾಷ್ಟ್ರ ಎಂದು ಮುದ್ರಣ. ಮಾಡಿ
ಬೆಳಗಾವಿ ಎಂಇಎಸ್ ಭಾಷಾ ರಾಜಕಾರಣಿ ಮುಂದಿಟ್ಟುಕೊಂಡು ಗೆಲ್ಲಲ್ಲು ಹೊರಟಿದೆ.
ಇದರಿಂದ ಎಂಇಎಸ್ ಗೆಲವು ಸಾಧುಸಲು ಸಾಧ್ಯವಿಲ್ಲ. ಎಂದು ನಾರಾಣ ಗೌಡರು ಹೇಳಿದ್ದಾರೆ

ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಬೆಳಗಾವಿಯಲ್ಲಿ ನಿರಂತರವಾಗಿ ಎಂಇಎಸ್ ಪುಂಡಾಟ ಪ್ರದರ್ಶನ ಮಾಡುತ್ತದೆ. ಚುನಾವಣಾ ಕರ ಪತ್ರದ ಮರಾಠಿಯಲ್ಲಿ ಮುದ್ರಣ ಮಾಡಿದ್ದು ತಪ್ಪು. ಕರ್ನಾಟಕದಲ್ಲಿ ನಡೆಯುವ ಚುನಾವಣೆಯಲ್ಲಿ ಕನ್ನಡದಲ್ಲ ಕರ ಪತ್ರ ಮುದ್ರಣವಾಗಬೇಕು. ರಾಜ್ಯದಲ್ಲಿ ಎಂಇಎಸ್ ಬೇರು ಸಮೇತ ಕಿತ್ತೆಸೆಯಲು ಕರವೇ ಸಿದ್ದ.ಎಂದು ಟಿ ಎ ನಾರಾಯಣ ಗೌಡ ಎಚ್ಚರಿಕೆ ನೀಡಿದ್ದಾರೆ

ಈ ನಿಟ್ಟಿನಲ್ಲಿ ಇಂದು ಕರವೇ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಚರ್ಚೆ.‌ಮಾಡುತ್ತೇವೆ
ಮುಂದಿನ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕನ್ನಡ ಪರ ಅಭ್ಯರ್ಥಿಗಳಿಗೆ ಗೆಲುವಿಗೆ ಆದ್ಯತೆ.
ಬೆಳಗಾವಿ ಕನ್ನಡ ರಾಜಕೀಯ ಶಕ್ತಿ ಹುಟ್ಟಿಹಾಕಲು ಕ್ರಮ. ಕೈಗೊಳ್ಳುತ್ತೇವೆ ಎಂದು ತಿಳಿಸಿದರು
ಕರ್ನಾಟಕ ರಾಜ್ಯೋತ್ಸವ ಸಂಧರ್ಭದಲ್ಲಿ ಎಂಇಎಸ್ ಕರಾಳ ದಿನ ಆಚರಣೆ ವಿಚಾರ.ಪ್ರಾಸ್ತಾಪಿಸಿದ ಅವರು
ಕರಾಳ ದಿನ ಆಚರಣೆಯಲ್ಲಿ ಮೇಯರ್, ಉಪಮೇಯರ್ ಭಾಗಿ‌ಯಾಗಿ ನಾಡದ್ರೋಹ ಮಾಡಿದ್ಸಾರೆಸರ್ಕಾರ ತಕ್ಷಣ ನಾಡದ್ರೋಹಿಗಳ ಮೇಲೆ ಕ್ರಮ ಕೈಗೊಳ್ಳಬೇಕು.ಬೆಳಗಾವಿಯಲ್ಲಿ ಎಂಇಎಸ್ ನಿಷೇಧಿಸಬೇಕು ಎಂದು ಸರ್ಕಾರದ ಮೇಲೆ ಒತ್ತಡ. ಹೇರಲಾಗುವದು ಎಂದು ಬೆಳಗಾವಿಯಲ್ಲಿ ಕರವೇ ಟಿ.ಎ. ನಾರಾಯಣಗೌಡ ಹೇಳಿದರು

ರಾಜ್ಯ ಸರ್ಕಾರ ಸರೋಜಿಣಿ ಮಹೀಷಿ ವರದಿಯನ್ನು ಜಾರಿಗೆ ತರಬೇಕು ಕನ್ನಡ ಕಾರ್ಯಕರ್ತರ ಮೇಲೆ ದಾಖಲಾಗಿರುವ ಎಲ್ಲ ಪ್ರಕರಣಗಳನ್ನು ವಾಪಸ್ ಪಡೇಯಬೇಕು ಎಂದು ನಾರಾಯಣ ಗೌಡರು ಒತ್ತಾಯಿಸಿದರು

Check Also

ರಾತ್ರಿ ಮಠದಲ್ಲಿ ಲೇಡಿ……..ಗ್ರಾಮಸ್ಥರಿಂದ ಮುತ್ತಿಗೆ ಮಠದಿಂದ ಸ್ವಾಮೀಜಿ ಉಚ್ಛಾಟನೆ

ಮೂಡಲಗಿ : ತಾಲೂಕಿನ ಶಿವಾಪೂರ(ಹ) ಗ್ರಾಮದ ಅಡವಿ ಸಿದ್ದೇಶ್ವರ ಮಠದ ಅಡವಿಸಿದ್ದರಾಮ ಸ್ವಾಮೀಜಿಯ ಅಕ್ರಮ ಸಂಭಂದದ ಆರೋಪದ ಹಿನ್ನಲೆ ಇಡೀ …

Leave a Reply

Your email address will not be published. Required fields are marked *