ಕರೀಂ ಲಾಲಾ ತೇಲಗಿ ಕಹಾನಿ ಈಗ ವೆಬ್ ಸಿರೀಸ್….
ಬೆಳಗಾವಿ- ಸೋನಿ ಟಿವ್ಹಿ ಆ್ಯಪ್ ಡೌನ್ ಲೋಡ್
ಮಾಡಿಕೊಂಡ್ರೆ Scam 2023 ಎಂಬ ವೆಬ್ ಸೀರೀಸ್ ಪೋಸ್ಟರ್ ಪ್ರತ್ಯಕ್ಷ ಆಗುತ್ತದೆ.ಇದನ್ನು ನೋಡುತ್ತ ಹೋದ್ರೆ ಬೆಳಗಾವಿ ಜಿಲ್ಲೆಯ ಖಾನಾಪೂರದಲ್ಲಿ ನಡೆದ ನಕಲಿ ಛಾಪಾ ಕಾಗದ ಹಗರಣದ ಸಂಪೂರ್ಣ ಕಹಾನಿ ನಮ್ಮ ಕಣ್ಣೆದುರಿಗೆ ಬರುವದರಲ್ಲಿ ಸಂದೇಹವೇ ಇಲ್ಲ.
ನಾವೂ ತೀರಾ ಹತ್ತಿರದಿಂದ ನೋಡಿದ ವ್ಯಕ್ತಿ ಕುರಿತಾದ ಬಹುಕೋಟಿ ಹಗರಣದ ವೆಬ್ ಸೀರಿಜ್ ಈಗ ಸೋನಿ ಆ್ಯಪ್ ನಲ್ಲಿ ರಿಲೀಸ್ ಆಗಿದೆ.
ಇದರಲ್ಲಿತೆಲಗಿ ಪಾತ್ರ ಮಾಡಿರೋ ಗಗನ್ ದೇವ ಎಂಬ ನಟ ನೋಡೊಕೆ ಥೇಟ್ ತೆಲಗಿ ತರಹವೇ ಕಾಣೋದ ಇರ್ಲಿ
ಅದೆ ರೀತಿಯ ಹೊಟ್ಟೆ.. ನಡೆದಾಡುವ ಶೈಲಿ..
ಮಾತಿನ ಖಯಾಲಿ.. ಎಲ್ಲವೂ ಥೇಟ್ ಟು ಥೇಟ್ ತೆಲಗಿಯ ಝೆರಾಕ್ಸ್….ಅಂತಾ ತೇಲಗಿಯನ್ನು ಹತ್ತಿರದಿಂದ ನೋಡಿದವರು ಹೇಳುವದರಲ್ಲಿ ಅನುಮಾನವೇ ಇಲ್ಲ.
ತೆಲಗಿಯನ್ನು ನೋಡಿದವರು ಈ ನಟನ ಅಭಿನಯ ನೋಡಿದ್ರೆ ಅರೇ ಇದೇನಿದು ತೆಲಗಿನೇ ನಟಿಸಿ ಬಿಟ್ಟಿದಾನಾ ಹೇಗೆ? ಅಂತಾ ಅನಿಸದೇ ಇರದು..
ಹಾಗಾದ್ರೆ ಕರೀಂ ಲಾಲಾ ತೇಲಗಿಯ ಕಹಾನಿ ಈಗ ವೆಬ್ ಸಿರೀಶ್ ಆಗಿ,ರಿಲೀಸ್ ಕೂಡಾ ಆಗಿ,ದೇಶದಾದ್ಯಂತ ಸದ್ದು ಮಾಡುತ್ತಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ