Breaking News

ಬೆಳಗಾವಿಯ ಸದಾಶಿವ ನಗರದಲ್ಲಿ ಮನೆಗಳ್ಳತನ

ಬೆಳಗಾವಿ-ಬೆಳಗಾವಿಯ ಸದಾಶಿವ ನಗರದ ಒಂದನೇಯ ಮುಖ್ಯ ರಸ್ತೆ ನಾಲ್ಕನೇಯ ಅಡ್ಡ ರಸ್ತೆಯಲ್ಲಿರುವ ಮನೆಯೊಂದರಲ್ಲಿ ಮನೆಯ ಕೀಲಿ ಮುರಿದು  ಚಿನ್ನಾಭರಣಗಳನ್ನು ದೋಚಲಾಗಿದೆ

ಅಶ್ವಿನಿ ವಿಶ್ವನಾಥ ಅಮವಾಸೆ ಅವರಿಗೆ ಸೇರಿದ ಮನೆಯಲ್ಲಿ ಕಳ್ಳತನ ನಡೆದಿದೆ ಅಶ್ವಿನಿ ಅವರು ತಮ್ಮ ಗಂಡನನ್ನು ಭೇಟಿಯಾಗಲು ದುಭೈಗೆ ಹೋದ ಸಂಧರ್ಭದಲ್ಲಿ ಸಮಯ ಸಾಧಿಸಿ ಗುರುವಾರ ಮದ್ಯರಾತ್ರಿ ಕಳ್ಳರು ಮನೆಯ ಕೀಲಿ ಮುರಿದು ಕಳ್ಳತನ ನಡೆಸಿದ್ದಾರೆ

ಮನೆಯಲ್ಲಿನ ಟ್ರೀಝರಿಯ ಲಾಕ್ ಮುರಿದು ಸುಮಾರು ನೂರು ಗ್ರಾಂ ತೂಕದ ಚಿನ್ನಾಭರಣಗಳನ್ನು ದೋಚಲಾಗಿದೆ ಎಂದು ಅಂದಾಜಿಸಲಾಗಿದೆ ಆದರೆ ಮನೆಯ ಮಾಲೀಕರು ದುಬೈಗೆ ಹೋಗಿರುವದರಿಂದ ಎಷ್ಟು ಮೌಲ್ಯದ ವಸ್ತುಗಳು ಕಳುವು ಮಾಡಲಾಗಿದೆ ಎಂದು ಖಚಿತ ಪಡಿಸಲು ಪೋಲಿಸರಿಗೆ ಸಾಧ್ಯವಾಗುತ್ತಿಲ್ಲ

ಸ್ಥಳಕ್ಕೆ ಎಪಿಎಂಸಿ ಸಿಪಿಐ ಕಾಳಿಮಿರ್ಚಿ ಅವರು ಶ್ವಾನದಳ ಹಾಗು ವಿಧಿ ವಿದ್ಞಾನ ಪ್ರಯೋಗಾಲಯದ ಸಿಬ್ಬಂಧಿಗಳು ಸ್ಥಳಕ್ಕೆ ದೌಡಾಯಿಸಿ ಪರಶೀಲನೆ ನಡೆಸಿದ್ದಾರೆ

 

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *