ಸ್ಮಾರ್ಟ್ ಸಿಟಿಯಲ್ಲಿ ಈಗ ಎಲ್ಲಿ ನೋಡಿದ್ರು ಹೆಲ್ಮೆಟ್ ಕಾರ್ಯಾಚರಣೆ ನಡೆಯುತ್ತಿದೆ. ಜಿಲ್ಲಾ ನ್ಯಾಯಾಧೀಶರ ಕಟ್ಟಪ್ಪಣೆಯ ಹಿನ್ನೆಲೆಯಲ್ಲಿ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ.
ಗುರುವಾರ ರಾತ್ರಿ ವರೆಗೆ ಕಾರ್ಯಾಚರಣೆ ನಡೆಸಿ ದಾಖಲೆ ಪ್ರಮಾಣದ ದಂಡ ವಸೂಲಿ ಮಾಡಿದ್ದಾರೆ. ನಿನ್ನೆ ಗುರುವಾರ ೪ ಲಕ್ಷಕ್ಕೂ ಹೆಚ್ಚಿನ ಹಣ ವಸೂಲಿ ಮಾಡಿದ್ದಾರೆ. ನಗರದ ಮೂಲೆ ಮೂಲೆಯಲ್ಲಿ ಪೊಲೀಸರು ಚಕ್ರವ್ಯೂಹ ರಚಿಸಿದ್ದಾರೆ. ಹೆಲ್ಮೆಟ್ ಇಲ್ಲದೆ ವಾಹನ ಸವಾರ ನಗರ ಪ್ರವೇಶ ಮಾಡಿದ್ದರೆ. ದಂಡ ಕಟ್ಟದೆ ವಾಪಸ್ ಹೋಗುವುದು ಕಠಿಣವಾಗಿದೆ.
ಇನ್ನೂ ಪ್ರಥಮ ಹಂತವಾಗಿ ೧೦೦ ರೂಪಾಯಿ ದಂಡ ವಿಧಿಸಲಾಗುತ್ತಿದ್ದು ಮುಂದೆ ದಂಡದ ಮೊತ್ತ ಹೆಚ್ಚಳವಾಗಿದೆ. ನಗರದಲ್ಲಿ ಪೊಲೀಸ ವ್ಯವಸ್ಥೆ ಬೀಗಿಯಾಗಿದ್ದು, ಇನ್ನೂ ಆಟೋ ಮೀಟರ್ ಯಾವಾಗ ಎಂದು ಪ್ರಶ್ನುಸುತ್ತಿದ್ದಾರೆ.
ಈ ಮದ್ಯ ಪೊಲೀಸರು ಈ ಬೀಗಿ ಕ್ರಮವನ್ನು ಮುಂದುವರೆಸಬೇಕು. ಕೆಲ ದಿನ ಹೆಲ್ಮೆಟ್ ಹಿಡಿಯುವುದು ಬಿಡುವುದು ಮಾಡ್ಬಾರದು. ಈಗಾಗಲೇ ಹೆಲ್ಮೆಟ್ ಮನೆಯಲ್ಲಿ ಇಟ್ಟವರು ಧೂಳು ವರೆಸಿ ಉಪಯೋಗಿಸುತ್ತಿದ್ದಾರೆ. ಇನ್ನೂ ಹೆಲ್ಮೆಟ್ ಇಲ್ಲದವರು ಹೊಸ ಹೆಲ್ಮೆಟ್ ಖರಿಸಿದ್ದಾರೆ.