ಬೆಳಗಾವಿ- ಬೆಳಗಾವಿಯಲ್ಲಿ ವಾಹನಸವಾರರಿಂದ ದಂಡ ವಸೂಲಿ ಮಾಡುವ ಟ್ರಾಫಿಕ್ ಪೋಲೀಸ್ ದಬ್ಬಾಳಿಕೆ ಯಾವ ಮಟ್ಟಕ್ಕೆ ಹೋಗಿದೆ ಎಂದು ನಾವು ಕಲ್ಪನೆ ಮಾಡಿಕೊಳ್ಳಲೂ ಸಹ ಸಾದ್ಯವಿಲ್ಲ ಅಂತಹದೊಂದು ಘಟನೆ ಭಾನುವಾರ ಮದ್ಯಾಹ್ನ ಬೆಳಗಾವಿ ನಗರದಲ್ಲಿ ನಡೆದಿದೆ.
ಈ ಘಟನೆ ನಡೆದಿದ್ದು ಭಾನುವಾರ ಮದ್ಯಾಹ್ನ ,ಬೆಳಗಾವಿ ನಗರದ ಮಾರ್ಕೆಟ್ ಪೋಲೀಸ್ ಠಾಣೆ ಎದುರಿನ ಹೊಟೇಲ್ ಪೈ ಎದುರುಗಡೆ,ಈ ಘಟನೆಯ ಕುರಿತು ಸುದ್ದಿ ಮಾಡಬೇಕೋ ಅಥವಾ ಬಿಡಬಿಕೋ ಎನ್ನುವ ಗೊಂದಲದಲ್ಲಿದ್ದೆ,ಯಾಕಂದ್ರೆ ಇಷ್ಟು ದಂಡ ವಸೂಲಿ ಮಾಡಲೇಬೇಕು ಎನ್ನುವ ಒತ್ತಡವನ್ನು ಹಿರಿಯ ಅಧಿಕಾರಿಗಳು ಸಿಬ್ಬಂಧಿಗಳ ಮೇಲೆ ಹಾಕ್ತಾರೆ,ಈ ಘಟನೆಯ ಬಗ್ಗೆ ವರದಿ ಮಾಡಿದ್ರೆ ಒತ್ತಡ ಹಾಕಿದ ಹಿರಿಯ ಅಧಿಕಾರಿಗಳು ಬಚಾವ್ ಆಗ್ತಾರೆ,ಪಾಪ ಕೆಳ ಹಂತದ ಅಧಿಕಾರಿಗಳೇ ಬಲಿಪಶು ಆಗ್ತಾರೆ ಎನ್ನುವ ಚಿಂತೆ ನನಗೆ ಕಾಡುತ್ತಿತ್ತು ಅದಕ್ಕಾಗಿಯೇ ಈ ಸುದ್ಧಿಯನ್ನು ನಿಮಗೆ ಮುಟ್ಟಿಸಲು ಇಷ್ಟೊಂದು ತಡವಾಯಿತು.
ಭಾನುವಾರ ಮದ್ಯಾಹ್ನ ಸಂತೆ ಮಾಡಲು ಫ್ಯಾಮಿಲಿಯೊಂದು ಬೆಳಗಾವಿಯ ಪೇಟೆಗೆ ಬಂದಿತ್ತು.ಅವರು ಸಂತೆ ಮಾಡಲು ತಮ್ಮ ಜೇಬು ಖಾಲಿ ಮಾಡಿಕೊಂಡು ಕೈಚೀಲಗಳನ್ನು ತುಂಬಿಕೊಂಡು ಬೈಕ್ ಮೇಲೆ ಮನೆಗೆ ಹೋಗುವಾಗ ಇವರನ್ನು ಪೈ ಹೊಟೇಲ್ ಬಳಿ ಟ್ರಾಫಿಕ್ ಪೋಲೀಸರು ತಡೆದ್ರು,ನಿಮ್ಮ ಹತ್ತಿರ ಅದು,ಇಲ್ಲ,ಇದು ಇಲ್ಲ,ಇಷ್ಟು ಸಾವಿರ ದಂಡ ತುಂಬಲೇ ಬೇಕು ಎಂದು ಟ್ರಾಫಿಕ್ ಪೋಲೀಸರು ಪಟ್ಟು ಹಿಡಿದಾಗ,ಗೊಂದಲ ಶುರುವಾಯಿತು,ಸರ್ ನಾವು ಈಗ ಸಂತೆ ಮಾಡಿಕೊಂಡು ಬಂದಿದ್ದೇವೆ,ನಮ್ಮ ಹತ್ತಿರ ಹಣ ಇಲ್ಲ,ದಯವಿಡ್ಡು ಕ್ಷಮಿಸಿ ಎಂದು ವಾಹನ ಸವಾರ ಅಂಗಲಾಚಿದ,ಇಲ್ಲಾ ರ್ರೀ ನೀವು ಇಷ್ಟು ದಂಡ ತುಂಬಲೇ ಬೇಕು ಎಂದು ಪೋಲೀಸರು ಅವಾಜ್ ಹಾಕಿದಾಗ ಅಲ್ಲಿ ಜನಜಂಗುಳಿಯೇ ಸೇರಿತು,ಜನರ ಎದುರೇ ಟ್ರಾಫಿಕ್ ಪೋಲೀಸರು ಮತ್ತಷ್ಟು ಅವಾಜ್ ಮಾಡಿದಾಗ ಜನರ ಎದುರು ನನ್ನ ಗಂಡನ ಮರ್ಯಾದೆ ಹೋಗುತ್ತಿದೆಯಲ್ಲ ಎಂದು ಹೆದರಿದ ಮಹಿಳೆ ಕೊರಳಲ್ಲಿದ್ದ ಮಂಗಳಸೂತ್ರವನ್ನೇ ತೆಗೆದು ಸರ್ ಇದನ್ನು ಮಾರಿ ನಿಮ್ಮ ದಂಡ ತುಂಬಿಸಿಕೊಳ್ಳಿ ಎಂದು ಮಹಿಳೆ ಪೋಲೀಸರ ಎದುರು ನಿಲ್ಲುತ್ತಿದ್ದಂತೆಯೇ ಅಲ್ಲಿಯೇ ಇದ್ದ ಅಟೋ ಚಾಲಕರು ಈ ವಿಷಯವನ್ನು ಮಾರ್ಕೆಟ್ ಠಾಣೆಯ ಪೋಲೀಸ್ ಪೆದೆಯೊಬ್ಬರ ಗಮನಕ್ಕೆ ತಂದರು,ಈ ಪೋಲೀಸ್ ಪೇದೆ ಮದ್ಯಪ್ರವೇಶಿಸಿ ಟ್ರಾಫಿಕ್ ಪೋಲೀಸರಿಗೆ ತಿಳುವಳಿಕೆ ಹೇಳಿ ದಂಪತಿಗೆ ಮನೆಗೆ ಕಳುಹಿಸಿ ಪೋಲೀಸರ ಮಾನ ಕಾಪಾಡಿದ್ದು ಸತ್ಯ.
ಸಾರ್ವಜನಿಕರು ಸಂಚಾರ ನಿಮಯಗಳನ್ನು ಮೀರಿ ಸಂಚರಿಸುತ್ತಿದ್ದರೆ ನಮ್ಮ ಟ್ರಾಫಿಕ ಪೊಲೀಸರಿಗೆ ಎಲ್ಲಿಲ್ಲದ ಸಾಹಸ, ಧೈರ್ಯ ಬಂದುಬಿಡುತ್ತದೆ. ದಂಡವಸೂಲಿ ಮಾಡಲು ನಿಲ್ಲುವ ಸ್ಥಳಗಳಂತೂ ಖತರನಾಕ. ನಿಯಮ ಉಲ್ಲಂಘಇಸಿದ ಮಕಾ ಇವರ ಬಲೆಗೇ ಬೀಳಬೇಕು. ಅಂಥ ಆಯಕಟ್ಟಿನ ಸ್ಥಳಗಳಲ್ಲಿ ನಿಂತು ಬಲೆ ಬೀಸುತ್ತಾರೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ಅಪಘಾತ ಆದೀತು ಎಂಬ ಪ್ರಜ್ಞೆಯಿಲ್ಲದೆ ಜಾರಿಕೊಳ್ಳುವವನ್ನು ಎಂಥ ಭಾರಿ ವಾಹನಗಳ ದಡ್ಡನೆಯ ಮಧ್ಯ ಪ್ರವೇಶಿಸಿ ಹಿಡಿದು ಎಳೆತಂದು ವ್ಯವಸ್ಥೆ ಮಾಡುತ್ತಾರೆ. ರಸ್ತೆಯ ತಿರುವು ಇರುವ ಸ್ಥಳ ಇಂಥ ಸಾಹಕ್ಕೆ ಇವರಿಗೆ ಹೇಳಿ ಮಾಡಿಸಿದ ಸ್ಥಳ. ಜೀವ ಸಂರಕ್ಷಣೆಯ ದೃಷ್ಟಿಯಿಂದ ಸಾರ್ವಜನಿಕರು ಸಂಚಾರ ನಿಮಯಗಳನ್ನು ಪಾಲಿಸಲಿ ಎಂಬ ತಿಳುವಳಿಕೆಗಾಗಿ ಈ ರೀತಿ ಮಾಡುವರೋ ಇಲ್ಲ, ಹಣ ವಸೂಲಿಯ ಧಂಧೆ ಮಾಡಲು ಹೋಗಿ ಮಾಡುವರೋ ಎಂಬ ಪ್ರಶ್ನೆಗೆ ಸಾರ್ವಜನಿಕರಿಂದ ಬರುವ ಉತ್ತರ ಹಣ ವಸೂಲಿ ಧಂಧೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.
ಸಂಚಾರ ನಿಮಯ ಉಲ್ಲಂಘನೆಗೆ ಕೆಲವು ಸಲ ಕೆಲವು ಪೊಲೀಸರು ಮನುಷ್ಯತ್ವವನ್ನು ಸಂಪೂರ್ಣವಾಗಿ ಒತ್ತೆಯಿಟ್ಟು ಬೀದಿಗೆ ಬರುತ್ತಾರೆ ಎನ್ನುವುದಕ್ಕೆ ನಿತ್ಯ ಅನೇಕ ಉದಾಹರಣೆಗಳು ದೊರೆಯುತ್ತವೆ. ಅಂಥ ಒಂದು ಘಟನೆ ರವಿವಾರ ಬೆಳಗಾವಿಯ ಮುಖ್ಯಬಸ್ ನಿಲ್ದಾಣ ಸಮೀಪದ ಮಾರ್ಕೇಟ್ ಪೊಲೀಸ್ ಠಾಣೆಯ ಎದುರು ಸಂಭವಿಸಿದೆ.
ಇದ್ದ ಪುಡಿಗಾಸನ್ನು ಸುತ್ತಿಕೊಂಡು ಹಳ್ಳಿಯ ಗಂಡ ಹೆಂಡತಿ ಇಬ್ಬರೂ ರವಿವಾರ ಬೆಳಗಾವಿಯ ಮಾರುಕಟ್ಟೆಗೆ ಆಗಮಿಸಿ, ಬೇಕಾದ ಬಟ್ಟೆಬರೆ ವಸ್ತುಗಳನ್ನು ಖರೀದಿ ಮಾಡಿಕೊಂಡು ತಾವು ತಂದ ಬೈಕ್ ಮೇಲೆ ಹೊರಾಟಗ ಮಾರ್ಕೇಟ್ ಪೊಲೀಸ್ ಠಾಣೆಯ ಸರ್ಕಲ್ ಹತ್ತಿರ ಟ್ರಾಫಿಕ್ ಪೊಲೀಸ್ ಒಬ್ಬರು ಅವರನ್ನು ತಡೆದಿದ್ದಾರೆ. ನಂಬರ್ ಪ್ಲೇಟ್ ಕೆಟ್ಟಿದೆ, ಹೆಲ್ಮೇಟು ಹಳೆಯದು ಏನೆಲ್ಲ ಸಂಚಾರಿ ನಿಯಮ ಉಲ್ಲಂಘನೆಯ ಕಾರಣ ಹೇಳಿ ದಂಡ ವಸೂಲಿಗೆ ಮುಂದಾಗಿದ್ದಾರೆ ಪೊಲೀಸ್ ಮಹಾಶಯ. ಪೊಲೀಸ್ ಕೇಳಿದಷ್ಟು ಹಣ ದಂಪತಿಗಳ ಹತ್ತಿರ ಇರಲಿಲ್ಲ. ಬಿಟ್ಟುಬಿಡಿ ತಪ್ಪಾಗಿದೆ ಎಂದು ಗೋಗರೆದರೂ ಪೊಲೀಸ್‌ಪ್ಪನ ಮನಸ್ಸು ಕರಗಿಲ್ಲ. ಹಣ ಇಲ್ಲದ ಅವರ ಕಾರಣ ಕೇಳಿ ಈ ಅಪ್ಪನ ಮನಸ್ಸು ಮತ್ತಷ್ಟು ಉಗ್ರರೂಪ ತಾಳಿದೆ. ಅವರ ಹತ್ತಿರ ಕೊಡಲು ಹಣಯಿಲ್ಲ. ಪೊಲೀಸ್‌ಪ್ಪ ಬಿಡಲೊಲ್ಲ. ಕೊನೆಗೆ ಬೈಕ್ ಮಾಲೀಕನ ಪತ್ನಿ ತನ್ನ ಕೊರಳಲ್ಲಿರುವ ಮಂಗಳಸೂತ್ರ ತೆಗೆದು ಪೊಲೀಸ್‌ಪ್ಪನಿಗೆ ದಂಡದ ರೂಪದಲ್ಲಿ ಕೊಡಲು ಮುಂದಾಗಿದ್ದು ಟ್ರಾಫಿಕ್ ಪೋಲೀಸರ ಕ್ರೌರ್ಯ ಯಾವ ಮಟ್ಟಕ್ಕೆ ಹೋಗಿದೆ ಎನ್ನುವದು ಗೊತ್ತಾಗುತ್ತದೆ.
ಇಷ್ಟೊತ್ತಿಗಾಗಲೇ ಅವರು ಇವರು ಜನ ಸೇರಿ, ಪೊಲೀಸ್‌ಪ್ಪನಿಗೆ ಛಿ ಥೂ ಎಂದು ಒಂದಿಷ್ಟು ಉಗಳಿದಾಗ ದಂಡದ ರೂಪದಲ್ಲಿ ಮಂಗಳಸೂತ್ರ ತೆಗೆದುಕೊಳ್ಳುವ ಅಮಾನವೀಯ ವರ್ತನೆಗೆ ತೆರೆ ಬಿದ್ದಿದೆ.
ದಂಡದ ಹೆಸರಿನಲ್ಲಿ ವಸೂಲಿಗೆ ಇಳಿದಿರುವ ಬೆಳಗಾವಿ ಟ್ರಾಫಿಕ್ ಪೋಲಿಸರು ಮನುಷ್ಯತ್ವ ಕಳೆದುಕೊಂಡು ಅತ್ಯಂತ ಕೆಳಮಟ್ಟಕ್ಕೆ ಇಳಿದಿದ್ದಾರೆ ಎಂದು ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ. ಇವರ ವರ್ತನೆಯ ನಿಯಂತ್ರಣಕ್ಕೆ ಹೇಳುವವರು ಕೇಳುವವರು ಯಾರೂ ಇಲ್ಲದಂತಾಗಿದೆ. ವಿಷಯ ಚನ್ನಾಗಿ ಅರಿತಿರುವ ಜನಪ್ರತಿನಿಧಿಗಳೂ ಸಹಿತ ಜಾಣ ಮೌನ ವಹಿಸುತ್ತಿದ್ದಾರೆ. ಸಾರ್ವಜನಿಕರನ್ನು ಯಾರು ಕಾಪಾಡಬೇಕೋ ದೇವರೇ ಬಲ್ಲ!?…
ಈ ಘಟನೆಯ ಕುರಿತು ಬೆಳಗಾವಿ ಪೋಲೀಸ್ ಆಯುಕ್ತರು ತನಿಖೆ ಮಾಡಲಿ, ಮಾನವೀಯತೆ ಮರೆತು ಮನಸ್ವಿಸಿಗೆ ಬಂದಂತೆ ವಿಪರೀತ ದಂಡ ವಸೂಲಿಗೆ ನಿಂತಿರುವ ಅಧಿಕಾರಿಗಳಿಗೆ ಲಗಾಮು ಹಾಕಲಿ,