ಬೆಳಗಾವಿ- ಮುದುವೆಯಾದ ಪತ್ನಿಯನ್ನು ಊರಲ್ಲೆ ಬಿಟ್ಟು,ನಂತರ ಲವರ್ ಜೊತೆ ಗಂಟೂ ಮೂಟೆ ಕಟ್ಟಿಕೊಂಡು ಕೆಲ ದಿನಗಳ ನಂತರ ಇಬ್ಬರ ಜೊತೆ ಜಗಳಾಡಿಕೊಂಡು ವಿವಾದ ಬಗೆ ಹರಿಸಲು ಸಮಾಜ ಸೇವಕಿಯ ಮೊರೆ ಹೋದ ಮುದ್ದಿನ ಯೋಧನೊಬ್ಬ ಸಮಾಜ ಸೇವಕಿಯ ಜೊತೆ ಮೂರನೇಯ ಮದುವೆ ಮಾಡಿಕೊಂಡಿದ್ದಾನೆ ಎಂಬ ದೂರು ಈಗ ಬೆಳಗಾವಿ ಪೋಲೀಸ್ ಕಮಿಶ್ನರ್ ಬಳಿ ಬಂದಿದೆ
ಪತ್ನಿ, ಪ್ರೇಯಸಿಗೆ ಇಬ್ಬರಿಗು ಕೈಕೊಟ್ಟ ಯೋಧನೊಬ್ಬ ನ್ಯಾಯ ಇತ್ಯರ್ಥ ಪಡಿಸಲು ಬಂದ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆಯ ಜತೆಗೆ ಮದುವೆಯಾದ ವಿಚಿತ್ರ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಗೋಕಾಕ್ ಮೂಲದ ಅಜೀತ್ ಮಾದಾರ ಎಂಬ ಯೋಧನೇ ಇಬ್ಬರಿಗೆ ಕೈಕೊಟ್ಟು ಮೂರನೇ ಅವರ ಜತೆಗೆ ಮದುವೆಯಾದ ವ್ಯಕ್ತಿ. 2011ರಲ್ಲಿ ದ್ರಾಕ್ಷಾಯಿಣಿ ಜತೆಗೆ ಮದುವೆಯಾಗಿದ್ದ ಯೋಧ ಅಜೀತ್ ಮಾದರ್ ನಂತರ ಆಕೆಗೆ ಗೊತ್ತಿಲ್ಲದೇ ಸೀಮಾ ಚೌಹ್ಹಾಣ್ ಎಂಬಾಕೆಯ ಜತೆಗೆ ಪ್ರೀತಿಸಿ, ಜತೆಗೆ ವಾಸಿಸುತ್ತಿದ್ದನು. ಸೀಮಾ ಪತಿ ಸಂತೋಷ ಪತ್ನಿ ಕಾಣೆಯಾಗಿದ್ದಾರೆ ಎಂದು ಕಾಕತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದನ್ನು ತಿಳಿದ ಮೊದಲ ಪತ್ನಿ ದ್ರಾಕ್ಷಾಯಿಣಿ ಸಿ ಆರ್ ಪಿ ಎಫ್ ಕಂಮಾಡರ್ ದೂರು ನೀಡಿದ್ದಳು. ದೂರು ಹಿನ್ನೆಲೆಯಲ್ಲಿ ಪ್ರಕರಣ ಇತ್ಯರ್ಥ ಪಡಿಸಿಕೊಂಡು ಬರುವಂತೆ ಕಂಮಾಂಡರ್ 15 ದಿನ ಯೋಧನಿಗೆ ರಜೆ ನೀಡಿ ವಾಪಸ್ ಗೋಕಾಕ್ ಕಳುಹಿಸಿದ್ದರು. ಈ ಇಬ್ಬರ ವಿವಾದ ಇತ್ಯರ್ಥ ಪಡಿಸಲು ದ್ರಾಕ್ಷಾಯಿಣಿ, ಸೀಮಾ ಇಬ್ಬರು ಕಿತ್ತೂರು ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಜಯಶ್ರೀ ಸೂರ್ಯವಂಶಿ ಮೊರೆ ಹೋಗಿದ್ದರು. ನ್ಯಾಯ ಹೇಳು ಬಂದ ಜಯಶ್ರೀಯ ಮೇಲೆಯೇ ಯೋಧನಿಗೆ ಪ್ರೀತಿ ಹುಟ್ಟಿದೆ. 2018 ಡಿಸೆಂಬರ್ 31ರಂದು ಜಯಶ್ರೀ ಸೂರ್ಯವಂಶಿ ಹಾಗೂ ಅಜೀತ್ ಮಾದರ ಮದುವೆಯಾಗಿದ್ದರು. ಇದು ಪತ್ನಿ ದ್ರಾಕ್ಷಾಯಿಣಿ, ಸೀಮಾ ಇಬ್ಬರು ಶಾಕ್ ಆಗಿದೆ. ಈ ಬಗ್ಗೆ ಇಬ್ಬರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೇ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆಯಾಗಿರೋ ಜಯಶ್ರೀ ನಮ್ಮದೇ ಸರ್ಕಾರವಿದೆ ಎಂದು ಧಮ್ಮಿ ಹಾಕಿದ್ದಾಳೆ ಎಂದು ದ್ರಾಕ್ಷಾಯಿಣಿ ಆರೋಪಿಸಿದ್ದಾಳೆ.