ಬೆಳಗಾವಿ
ಸವದತ್ತಿ ತಾಲೂಕಿನ ಶಿರಸಂಗಿ ಗ್ರಾಮದ ಕಾಳಿಕಾ ದೇವಿ ಮಂದಿರದಲ್ಲಿ ಕೆಲ ಟ್ರಸ್ಟಿಗಳು ಕಾನೂನು ಬಾಹಿರವಾಗಿ ವಿಶ್ವಕರ್ಮ ವಿಕಾಸ ವೇದಿಕೆಯ ಹೆಸರಿನಲ್ಲಿ ಜನರಿಗೆ ವಂಚಿಸುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ರಕ್ಷಣೆ ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಮಿತಿಯ ಹರೀಶ ಇಂಗಳಗುಂದಿ ಆರೋಪಿಸಿದರು.
ಗುರುವಾರ ಕನ್ನಡ ಸಾಹಿತ್ಯ ಭವನದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಶಿರಸಂಗಿ ಗ್ರಾಮದ ಕಾಳಿಕಾದೇವಿ ಟ್ರಸ್ಟ್ ಹಾಗೂ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆಗಳು ಕಾಳಿಕಾ ದೇವಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಅದರಲ್ಲಿ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ 1960ರ ಕಾಯ್ದೆಯಡಿ 1997-78ನೇ ಸಾಲಿನಲ್ಲಿ ನೊಂದಣಿಯಾಗಿದೆ. ನಂತರ 2001-02ರ ಸಾಲಿನವರೆಗೂ ಆಡಿಟ್ ಹಾಗೂ ರಿನಿವಲ್ ಆಗಿರುತ್ತದೆ. ಆದನಂತರ ರಿನವಲ್ ಆಗದೆ ಇದ್ದರೂ ಈ ಸಂಸ್ಥೆಯವರು ಕಾನೂನು ಬಾಹಿರವಾಗಿ ಕಾಳಿಕಾದೇವಿ ಹೆಸರಿನಲ್ಲಿ ತಾಜ್ಯದ ಹಲವೆಡೆಯಿಂದ ಬರುವ ಭಕ್ತಾದಿಗಳನ್ನು ಲೂಟಿ ಮಾಡುತ್ತಿದ್ದಾರೆ ಎಂದರು.
ಭಕ್ತಾದಿಗಳಿಂದ ಕೋಟ್ಯಂತರ ರು.ಗಳ ದೇಣಿಗೆ ಸಂಗ್ರಹಿಸಿ ಪ್ರತಿವರ್ಷ ನಕಲಿ ವಾರ್ಷಿಕ ವರದಿ ಹಾಗೂ ಅಡಾವೆ ಪ್ರತಿಯನ್ನು ಮುದ್ರಿಸಿ ಹಂಚುತ್ತಿದ್ದಾರೆ. ಕಳೆದ ಹದಿನಾರುವರ್ಷದಿಂದ ದೇವಿಯ ಭಕ್ತರನ್ನು ವಂಚಿಸುತ್ತಿರುವ ಟ್ರಸ್ಟಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ವಿಶ್ವಕರ್ಮ ಸಮಾಜ ವಿಕಾದ ಸಂಸ್ಥೆಯು ಶಿರಸಂಗಿಯಲ್ಲಿ ಭೂಕಬಳಿಕೆ ಮಾಡಿದ ಆರೋಪವು ಇದೆ. ಆದ್ದರಿಂದ ಕಾನೂನು ಚೌಕಟ್ಟು ಇದ್ದರೂ ಅಕ್ರಮವಾಗಿ ಹಣ ಸಂಗ್ರಹಿಸುತ್ತಿದ್ದಾರೆ ಎಂದು ನಮ್ಮಆಯೋಗಕ್ಕೆ ದೂರು ಬಂದಿವೆ. ಆದ್ದರಿಂದ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆಯ ಸದಸ್ಯ ಪದಾಧಿಕಾರಿಗಳು ತಾವು ಕಾರ್ಯನಿರ್ವಹಿಸುವ ಕ್ಷೇತ್ರವನ್ನು ಗೌರವದಿಂದ ತೆರವುಗೊಳಿಸಿ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ಉತ್ತಮ ಇಲ್ಲದಿದ್ದಲ್ಲಿ ಉಗ್ರವಾದ ನಿರ್ಣಯ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಈ ಸುದ್ದಿಗೋಷ್ಠಿಯಲ್ಲಿ ದುರ್ಗೇಶ ಮೇಲಿನಮನಿ, ಗಣೇಶ ಸೇರಿದಂತೆ ಮೊದಲಾದವರು ಹಾಜರಿದ್ದರು.
Check Also
ರಮೇಶ್ ಕತ್ತಿ, ರಾಜೀನಾಮೆ ಪತ್ರದಲ್ಲಿ ಏನಿದೆ ಗೊತ್ತಾ…?
ಮಾನ್ಯ ಮುಖ್ಯ ಕಾರ್ಯನಿರ್ವಾಹಕರು ದಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ.ಬೆಳಗಾವಿ ವಿಷಯ- ನನ್ನ ಅಧ್ಯಕ್ಷ ಸ್ಥಾನಕ್ಕೆ …