ಬೆಳಗಾವಿಯಲ್ಲಿ ತುಕಾರಾಂ ಮಜ್ಜಗಿ ಅವರು ಹೆಸ್ಕಾಂ ಅಧೀಕ್ಷಕ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವಾಗ ಅವರ ಸಹಾಯಕ ಮಹಿಳಾ ಇಂಜಿನಿಯರ್ ಒಬ್ಬರು ತಮ್ಮ ಮೇಲೆ ಮಜ್ಜಗಿ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದರು, ಮಜ್ಜಗಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗಿನ ಮುಖ್ಯಮಂತ್ರಿಗಳಿಗೂ ಬಿವಿ ಸಿಂಧೂ ಮನವಿ ಮಾಡಿದ್ದರು ಈ ಘಟನೆ ನಡೆದಿದ್ದು ಹಲವು ವರ್ಷಗಳ ಹಿಂದೆ.ನಂತರ ಈ ಅತ್ಯಾಚಾರ ಆರೋಪದ ಪ್ರಕರಣದ ಕುರಿತು ಬಿ ರಿಪೋರ್ಟ್ ಆಗಿತ್ತು ನಂತರ ಮಜ್ಜಗಿ ಅವರು ಸಿಂಧೂ ಸೇರಿದಂತೆ ಹೆಸ್ಕಾಂ ಕಚೇರಿಯ 13 ಜನರ ವಿರುದ್ಧ ದೂರು ದಾಖಲಿಸಿದ್ದರು 13 ಜನರು ಮಾಡಿದ ಅಪರಾಧ ಸಾಭೀತಾಗಿದ್ದು ಮಜ್ಜಗಿ ವಿರುದ್ಧ ಸುಳ್ಳು ಮಾನಭಂಗ ಪ್ರಕರಣ ದಾಖಲಿಸಿದ 13 ಜನ ಆರೋಪಿಗಳು ಇಂದು ಜೈಲು ಸೇರಿದ್ದಾರೆ.
ಹೆಸ್ಕಾಂ ಇಂಜಿನಿಯರ್ ವಿರುದ್ದ ಸುಳ್ಳು ಮಾನಭಂಗ ಪ್ರಕರಣ ದಾಖಲಿಸಿದ 13ಜನ ಆರೋಪಿತರಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಶಿಕ್ಷೆ ಪ್ರಮಾಣ ಪ್ರಕರಣವನ್ನು ಜು.27ಕ್ಕೆ ಮುಂದೂಡಿದೆ.
ಹೆಸ್ಕಾಂ ಸಹಾಯಕ ಅಭಿಯಂತರ ಬಿ.ವಿ.ಸಿಂಧು, ಸಹಾಯಕ ನಾಥಾಜಿ ಪಾಟೀಲ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಅಜಿತ ಪೂಜಾರಿ, ಮಲಸರ್ಜಿ ಶಹಾಪೂರಕರ, ಸುಭಾಷ ಹಲ್ಲೋಳ್ಳಿ, ಈರಪ್ಪ ಪತ್ತಾರ, ಮಲ್ಲಿಕಾರ್ಜುನ ರೇಡಿಹಾಳ, ಭೀಮಪ್ಪ ಗೋಡಲಕುಂದರಗಿ, ರಾಜೇಂದ್ರ ಹಳಿಂಗಳಿ, ಸುರೇಶ ಕೆ. ಕಾಂಬಳೆ, ಈರಯ್ಯ ಹಿರೇಮಠ, ಮಾರುತಿ ಪಾಟೀಲ, ದ್ರಾಕ್ಷಾಯಣಿ ನೇಸರಗಿ ಇವರೆಲ್ಲರು ಶಿಕ್ಷೆಗೆ ಒಳಗಾದ ಆರೋಪಿತರು.
ಹೆಸ್ಕಾಂ ಅಧೀಕ್ಷಕ ಅಭಿಯಂತರ ತುಕಾರಾಮ ಮಜ್ಜಗಿ ಮಾನಭಂಗ (ಅತ್ಯಾಚಾರ) ಎಸಗಿದ್ದಾನೆ ಎಂದು ಹೆಸ್ಕಾಂ ಸಹಾಯಕ ಅಭಿಯಂತರ ಬಿ.ವಿ.ಸಿಂಧು ದೂರು ನೀಡಿದ್ದಳು. ಈ ಪ್ರಕರಣದ ತನಿಖೆ ಕೈಗೊಂಡಿದ್ದ ಅವತ್ತಿನ ಸಿಪಿಐ ಚನ್ನಕೇಶವ ಟಂಗರೀಕರ ಮತ್ತು ಜಗದೀಶ ಹಂಚನಾಳ ತನಿಖೆ ಮಾಡಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದ ವಾದ-ಪ್ರತಿವಾದ ಆಲಿಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶೆ ಎಲ್. ವಿಜಯಲಕ್ಷ್ಮೀ ದೇವಿ ಅವರು 13 ಜನ ಆರೋಪಿತರಿಗೆ ಶಿಕ್ಷಿ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಮುರಳೀಧರ ಎಲ್ ಕುಲಕರ್ಣಿ ವಾದ ಮಂಡಿಸಿದ್ದರು.
ಮಾನಭಂಗದ ಆರೋಪ ಎದುರಿಸುತ್ತಿದ್ದ ಹೆಸ್ಕಾಂ ಅಧೀಕ್ಷಕ ಇಂಜಿನಿಯರ್ ತುಕಾರಾಂ ಮಜ್ಜಗಿ ಸೇವೆಯಿಂದ ನಿವೃತ್ತಿ ಹೊಂದಿದ್ದಾರೆ.. ಮಾನಭಂಗ ಆರೋಪದಿಂದ ಮುಕ್ತರಾಗಿದ್ದಾರೆ