ಬೆಳಗಾವಿ- ಬಹಿರ್ದೆಸೆಗೆ ಹೋಗಿದ್ದ ಎಂಟು ವರ್ಷದ ಬಾಲಕಿಗೆ ಏಕಾ ಏಕಿ ವಾಂತಿ ಬೇಧಿ ಶುರುವಾಗಿ ಆಸ್ಪತ್ರೆಯಲ್ಲಿ ಈ ಬಾಲಕಿ ಸಾವನ್ನೊಪ್ಪಿದ ಘಟನೆ ಬೆಳಗಾವಿಯ ಉದ್ಯಮಬಾಗದ ಸ್ಲಂ ಪ್ರದೇಶದಲ್ಲಿ ನಡೆದಿದೆ.
ಎಂಟು ವರ್ಷದ ಅಶ್ವಿನಿ ಪರಶರಾಮ ಕಾಲೇರಿ ಎಂಬ ಬಾಲಕಿ ಇಂದು ಬಹಿರ್ದೆಸೆಗೆ ಹೋಗಿದ್ದಳು ಅವಳು ಮನೆಗೆ ಬರುತ್ತಿದ್ದಂತೆಯೇ ವಾಂತಿಬೇಧಿ ಶುರುವಾಗಿದ್ದರಿಂದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು .ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾಳೆ.
ಈ ಬಾಲಕಿ ಬಹಿರ್ದೆಸೆಗೆ ಹೋದ ಸಂದರ್ಭದಲ್ಲಿ ವಿಷಪೂರಿತ ಕೀಟ ಕಚ್ಚಿರಬಹುದು,ಅಥವಾ ಈ ಬಾಲಕಿ ವಿಷಪೂರಿತ ಆಹಾರ ಸೇವಿಸಿರಬಹುದು ಎಂದು ಶಂಕಿಸಲಾಗಿದ್ದು ಉದ್ಯಮಬಾಗ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸಿಪಿಐ ದಯಾನಂದ ಶೇಗುಣಶಿ ತನಿಖೆ ನಡೆಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ